ಪಾರಂಪರಿಕ ವೈದ್ಯರ ಹಲವಾರು ಬೇಡಿಕೆಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಮನವಿ

ಕೊಪ್ಪಳ : ರಾಷ್ಟ್ರೀಯ ಗ್ರಾಮೀಣ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಪಾರಂಪರಿಕ ನಾಟಿ ವೈದ್ಯ ಪದ್ದತಿ ಪುನಶ್ಚೇತನಗೊಳಿಸುವದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಾರಂಪರಿಕ / ನಾಟಿ ವೈದ್ಯರ  ಸರಕಾರವನ್ನು ಒತ್ತಾಯಿಸಲು ಆಯಾ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ನಿರ್ದೇಶಕರು ಆಯುಷ್ ಬೋರ್ಡ ಬೆಂಗಳೂರ ಇವರಿಗೆ ಮನವಿಯನ್ನು ಸಲ್ಲಿಸಿದರು. ಪಾರಂಪರಿಕ ವೈಧ್ಯರನ್ನು ಗುರುತಿಸುವುದು ಅವರಿಗೆ ಪ್ರತ್ಯೇಕ ನೊಂದಣಿ ಹಾಗೂ ಮಾಶಾಸನ ಕೊಡುವದು ಅಳಿವಿನ ಅಂಚಿನಲ್ಲಿರುವ ಔಷಧಿ ವನಸ್ಪತಿ ಸಸ್ಯಗಳನ್ನು ಬೆಳಸುವದು ಮತ್ತು ರಕ್ಷಿಸುವುದಕ್ಕೆ ಹಾಗೂ ಪ್ರಾಚೀನ ವೈಧ್ಯ ಪದ್ದತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿ ಕೊಡುವುದಕ್ಕೆ ಸರಕಾರವನ್ನು ಒತ್ತಾಯಿಸಲಾಯಿತು ಅಡ್ಡ ಪರಿಣಾಮ ಇಲ್ಲದೆ ಕಡಿಮೆ ಖರ್ಚಿನಲ್ಲಿ ಸಮುದಾಯದ ಆರೋಗ್ಯ ಕಾಪಾಡುವಲ್ಲಿ ಸರಕಾರಕ್ಕೆ ಮತ್ತು ಆಯುಷ್ ಇಲಾಖೆಗೆ ಪೂರಕವಾದಂತಹ ಕಾರ್ಯವನ್ನು ನಮ್ಮ ಪರಿಷತ್ತು ಮಾಡುತ್ತ ಬಂದಿದೆ. ಪಾರಂಪರಿಕ ವೈಧ್ಯರು ಅಸಾಧ್ಯ ವಾದ ರೋಗಗಳನ್ನು ಗುಣ ಪಡಿಸುವಲ್ಲಿ ಸಿಧ್ಧ ಹಸ್ತರೆಂದು ಪ್ರಾಚೀನ ಕಾಲದಿಂದಲು ಈ ಪದ್ದತಿ ಮುಂದುವರೆದುಕೊಂಡು ಬಂದಿದೆ ಸರಕಾರ ಈ ಪದ್ದತಿಯನ್ನು ಉಳಿಸಲು ಬೆಳೆಸಲು ಆಯುರ್ವೇದ ಔಷಧಿಗಳ ಬಳಕೆಯನ್ನು ವ್ಯಾಪಕವಾಗಿ ಸಮುದಾಯದಲ್ಲಿ ಜಾರಿಗೆ ತರಲು ಪ್ರೋತ್ಸಾಹಿಸಬೇಕು ಭಾರತೀಯ ವೈಧ್ಯ ಪದ್ದತಿಗೆ ಆಧ್ಯತೆ ನೀಡಬೇಕು.

ಪಾರಂಪರಿಕ ವೈದ್ಯರ ಹಲವಾರು ಬೇಡಿಕೆಗಳನ್ನು ಈಡೇರಿಕೆಗಾಗಿ ಸರಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಪಾರಂಪರಿಕ ವೈಧ್ಯ ಪರಿಷತ್ ಅಧ್ಯಕ್ಷರು: ಮಹಾಂತೇಶ ವ್ಹೀ ಹಿರೆಮಠ್ ಹಾಗೂ ಶಂಕ್ರಯ್ಯ ಶಶಿಮಠ್ ಮತ್ತು ಬಸವರಾಜ ಹಿರೇಮಠ್, ಗುರುಶಾಂತಯ್ಯ ಸಿ.ಎಮ್, ಎಸ್.ಬಿ.ತೋಟದ್ , ಗುರುಶಾಂತಪ್ಪ ಇಟಗಿ, ಶರಣಪ್ಪ ಮೇಟಿ, ಹೆಚ್.ಬಿ.ಮಂಡ್ಲಿಗೇರಿ, ಅನ್ನದಾನೇಶ ಗದ್ದಿ, ಜಯರಾಮ ವೈಧ್ಯ ಮತ್ತು ಸುಭಾಸ್ ಗದಗಿನ, ಮುಕ್ತುಮ್ ಅಲಿ ಮುಲ್ಲಾ, ವಿರುಪಾಕ್ಷಯ್ಯ ಹಿರೇಮಠ್, ಪುಟ್ಟಪ್ಪ ನೂರಾರು ಮಂದಿ ಉಪಸ್ತಿತರಿದ್ದರು.
Please follow and like us:
error