ದೃಶ್ಯಕಲಾ ಕಾಲೇಜ ಪ್ರವೇಶಕ್ಕೆ ಅರ್ಜಿ ಆಹ್ವಾನ

 ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಥಮ ಮೂಲ ತರಗತಿ ಹಾಗೂ ಪ್ರಥಮ ಬಿ.ಎಫ್.ಎ.ಗೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
             ಪ್ರಥಮ ಮೂಲ ತರಗತಿಗೆ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಂದರ್ಶನ ದಿನಕ್ಕೆ ೨೨ ವರ್ಷ ಮೀರಿರಬಾರದು. ಪ್ರಥಮ ಬಿ.ಎಫ್.ಎಗೆ ಪ್ರವೇಶ ಪಡೆಯಲು ದ್ವಿತೀಯ ಮೂಲತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸಂದರ್ಶನ ದಿನಕ್ಕೆ ೨೪ ವರ್ಷ ಮೀರಿರಬಾರದು.
             ಪ್ರವೇಶದ ಅರ್ಜಿ ಫಾರ್ಮಗಳನ್ನು ರೂ.೧೨೫ ಪಾವತಿಸಿ  ಖುದ್ದಾಗಿ ಅಥವಾ ರೂ.೧೫೦ಗಳ ಡಿ.ಡಿ.ಯನ್ನು ಡೀನ್, ಕಾವಾ, ಸಯ್ಯಾಜಿರಾವ್ ರಸ್ತೆ, ಮೈಸೂರು ಇವರ ಹೆಸರಿನಲ್ಲಿ ಪಡೆದು, ಅಂಚೆ ಮೂಲಕ ಕಳುಹಿಸಿ ಪಡೆಯಬಹುದು. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಸಿಟಿಐ ಕಟ್ಟಡದಲ್ಲಿ  ೧೦-೦೬-೨೦೧೪ ರಂದು ಬೆಳಿಗ್ಗೆ ೧೧ಕ್ಕೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ ೨ ಗಂಟೆಗೆ ವೈಯಕ್ತಿಕ ಸಂದರ್ಶನ ಜರುಗಲಿದೆ. ಅರ್ಜಿ ಸಲ್ಲಿಸಲು ಜೂ.೦೨ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ೦೮೨೧-೨೪೩೮೯೩೧ನ್ನು ಸಂಪರ್ಕಿಸಬಹುದಾಗಿದೆ.
Please follow and like us:
error