fbpx

ಹಿಟ್ನಾಳ ಪರ ಪ್ರಚಾರ ಯುವ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ

ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ ಪರವಾಗಿ ಹಿಟ್ನಾಳ ಹೋಬಳಿಯ ಯುವಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಪ್ರಚಾರಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ ಚಾಲನೆ ನೀಡಿದರು. ನಂತರ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರ ಮಾಡಿದ ಜನಪರವಾದ ಯೋಜನೆಯಿಂದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಕ್ಷೇತ್ರದಾದ್ಯಂತ ಉತ್ತಮವಾದ ಪ್ರತಿಕ್ರಿಯೆ ಇದೆ. ಗೆಲುವು ಖಚಿತ ಇಡೀ  ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದೆ.ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗಗಳ, ಹಾಗೂ ಅಲ್ಪಸಂಖ್ಯಾತರ ಜನಾಂಗದ ಸಾಲ ಮನ್ನಾ, ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಸಿಕ ೧೫೦೦ ವಿದ್ಯಾಸಿರಿ ಯೋಜನೆಗಳಿಂದ ಸರ್ವ ಜನಾಂಗದ ಆಶೋತ್ತರಗಳನ್ನು ಸರಕಾರ ಸ್ಪಂದಿಸುತ್ತಿದೆ ಎಂದರು. ಮುಖಂಡರಾದ ಮರ್ದಾನಪ್ಪ, ಪ್ರಭುಗೌಡ ಪಾಟೀಲ್, ಈರಣ್ಣನಗೌಡ, ವಿಶ್ವನಾಥರಾಜು, ಶಿವಬಾಬು, ರೂಪ್ಲನಾಯಕ, ಅನುಪಕುಮಾರ, ಶರಣಪ್ಪ ಆನೆಗೊಂದಿ ಎಂ.ಶ್ರೀನಿವಾಸ ಸೇರಿ ನೂರಾರು ಕಾರ್ಯಕರ್ತರು ಇದ್ದರು. ಬೈಕ್ ರ‍್ಯಾಲಿ ಹುಲಿಗಿ, ಮುನಿರಾಬಾದ, ಅಗಳಕೇರಿ, ಹರ್ಲಾಪೂರ, ಶಿವಪೂರ, ಬಸಾಪೂರ, ಶಹಪೂರ, ನಾರಾಯಣಪೇಟೆ ಸೇರಿದಂತೆ ಹಿಟ್ನಾಳ ಹೋಬಳಿಯಲ್ಲ ಜರುಗಿತು. 
ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ನಗರದ ವಾರ್ಡಗಳಲ್ಲಿ ಮತಯಾಚನೆ.
ಕೊಪ್ಪಳ-೧೨, ನಗರದ ೦೨ನೇ ವಾರ್ಡಿನ ಮಿಟ್ಟಿಕೇರಾ, ಬ್ಯಾಳಿಓಣಿ, ಕಾತರಕಿ ರಸ್ತೆ, ಸೈಲಾನಪೂರ ಓಣಿಗಳಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜ್ಜಪ್ಪಸ್ವಾಮಿ ಚನ್ನವಡೆಯರ್‌ಮಠ, ಕೊಟ್ರಪ್ಪ ಕೋರಿ, ಗವಿಸಿದ್ದಪ್ಪ ಪತ್ತಾರ, ಶರಣಪ್ಪ ನಿಟ್ಟಾಲಿ, ಖದೀರ್ ಕೋಲ್ಕಾರ, ಹಾಜಿ ಖತೀಬ, ಜಗದೀಶ ಬೆಲ್ಲದ, ರಾಜು ಕೋರಿ, ಶಂಶಾಲಂ ಖಾದ್ರಿ, ವಲೀ ಸಾಬ, ಇನ್ನು ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚನೆ ಮಾಡಿದರು.
Please follow and like us:
error

Leave a Reply

error: Content is protected !!