ವಿಶ್ವಕರ್ಮ ಸಮಾಜದವರು ಸಂಘಟಿಕರಾಗಲು ಕರೆ

ಕೊಪ್ಪಳ:  ವಿಶ್ವಕರ್ಮ ಸಮಾಜದವರು ಸಂಘಟಿಕರಾಗಿ, ಶೈಕ್ಷಣಿಕ ಆರ್ಥಿಕ, ರಾಜಕೀಯ, ಹಾಗೂ ಸರ್ವಾಂಗೀಣ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಬೇಕಾಗಿದೆ ಎಂದು ಮದಾನೆಗೊಂದಿ ಸಂಸ್ಥಾನ ಮಠದ ಅಧ್ಯಕ್ಷರಾದ ಬಳ್ಳಾರಿಯ ಚಂದ್ರಕಾಂತ ಸೋನಾರ ಹೇಳಿದ್ದಾರೆ. 
ಅವರು ಕೊಪ್ಪಳ ತಾಲೂಕಿನ ಗಿಣಗೇರಾ ಗ್ರಾಮದಲ್ಲಿ ಈಚೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಶ್ವಕರ್ಮ ಸಮಾಜ ಅಬ್ಯುದಯ ಸೇವಾ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮಾಜವನ್ನು ಸರ್ಕಾರ ನಿರ್ಲಕ್ಷಿಸುತ್ತಿದ್ದು ಸಂಘಟಿಕರಾಗಿ ಹೋರಾಡಿ ತಮ್ಮ ಹಕ್ಕುಗಳು, ಹಾಗೂ ಸೌಲಭ್ಯ ಪಡೆಯಬೇಕಾಗಿದ್ದು ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟುರು.
ಕಾರ್ಯಕ್ರಮದ ಸಾನಿದ್ಯವನ್ನು ಗಿಣಗೇರಿಯ ಮದಾನೆಗೊಂದಿ ಸಂಸ್ಥಾನಮಠ ಸರಸ್ವತಿ ಪೀಠದ ದಿವಾಕರ ಮಹಾಸ್ವಾಮಿಗಳು ವಹಿಸಿದ್ದರು. 
ಸಮಾರಂಭದಲ್ಲಿ ದೇವೇಂದ್ರ ಮಹಾಸ್ವಾಮಿಗಳು, ಗುರುನಾಥ ಸ್ವಾಮಿ, ನರಸಪ್ಪಯ್ಯ ಸ್ವಾಮಿಗಳು, ಸಿರಸಪ್ಪಯ್ಯಸ್ವಾಮಿ, ಹಾಗೂ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಡಾ| ಸೀತಾ ಹಲಗೇರಿ, ಶಾಸಕ ಸಂಗಣ್ಣ ಕರಡಿಯವರ ಪುತ್ರ ಗವಿಸಿದ್ದಪ್ಪ ಕರಡಿ, ಜಿಲ್ಲಾ ಪಂಚಾಯತ ಸದಸ್ಯರಾದ ರಾಘವೇಂದ್ರ ಹಿಟ್ನಾಳ, ಗ್ರಾ.ಪಂ ಅಧ್ಯಕ್ಷೆ, ರೇಣುಕಮ್ಮ ಪೀರಾನಾಯ್ಕ, ಎ.ಪಿ.ಎಂ.ಸಿ ಸದಸ್ಯರಾದ ಮಾರುತೆಪ್ಪ ಹಲಗೇರಿ, ನೀಲಪ್ಪ ಮೇಟಿ, ಗ್ರಾಮ ಪಂಚಾಯತ ಸದಸ್ಯರಾದ ಗೂಳಪ್ಪ ಹಲಗೇರಿ, ನಿಂಗಜ್ಜ ಅಬ್ಬಿಗೇರಿ, ಯಂಕಪ್ಪ ಇಂದರಗಿ, ವಿಶ್ವಕರ್ಮ ಸಮಾಜದ ಮುಖಂಡರು ಇನ್ನಿತರರು ಹಾಜರಿದ್ದ್ರು. 
ಪ್ರಾಸ್ತಾವಿಕವಾಗಿ ಸುಬ್ಬಣಾಚಾರ್ಯ ವಿದ್ಯಾನಗರ ಮಾತನಾಡಿದರು, ಸ್ವಾಗತ & ನಿರೂಪಣೆಯನ್ನು ರುದ್ರಪ್ಪ ಬಡಿಗೇರ ಮಾಡಿದರು, ವಂದನಾರ್ಪಣೆಯನ್ನು ಮೌನೇಶ ಬಡಿಗೇರ ಮಾಡಿದರು, ಕಾರ್ಯಕ್ರಮದ ಮುಂಚೆ ಗ್ರಾಮದಲ್ಲಿ ವಿಶ್ವಕರ್ಮ ಮೂರ್ತಿಗೆ ಪೂಜೆ ಸಲ್ಲಿಸಿ ಗೌರವಿಸಲಾಯಿತು. 
Please follow and like us:
error