You are here
Home > Koppal News > ಮನರಂಜಿಸಿದ, ವಿದ್ಯಾರ್ಥಿಗಳ ವಸ್ತುಪ್ರದರ್ಶನ ಕಲೆ.

ಮನರಂಜಿಸಿದ, ವಿದ್ಯಾರ್ಥಿಗಳ ವಸ್ತುಪ್ರದರ್ಶನ ಕಲೆ.

ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ, ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ ಶ್ರೀಮತಿ ಶಾರದಮ್ಮ ವ್ಹಿ.ಕೊತಬಾಳ ಬಿಬಿಎ, ಬಿಸಿಎ ಮತ್ತು ಬಿಕಾಂ ಕಾಲೇಜಿನಲ್ಲಿ ಇತ್ತೀಚೆಗೆ ಪ್ರದರ್ಶನ ಕಲೆ ಪ್ರದರ್ಶಿಸಲ್ಪಟ್ಟಿತು.
        ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಬಿಬಿಎ, ಬಿಸಿಎ ಹಾಗೂ ಬಿಕಾಂ ತರಗತಿಗಳ ಎಲ್ಲ ವಿದ್ಯಾರ್ಥಿಗಳು ವೈವಿಧ್ಯಮಯವಾದ ಕಲೆಗಳನ್ನು ಪ್ರದರ್ಶಿಸಿದರು. ಈ ಮನರಂಜನಾತ್ಮಕ ವಸ್ತುಪ್ರದರ್ಶನದಲ್ಲಿ ಸ್ವದೇಶಿ,ಖಾದ್ಯಗಳಾದ, ರೊಟ್ಟಿ ಚಟ್ನಿ ಬದನೆಕಾಯಿ ಪಲ್ಯ, ರಾಗಿ ಮುದ್ದೆ, ಉಪ್ಪಿನ ಕಾಯಿ ಇತ್ಯಾದಿ ತರತರಹದ ಊಟದ ಸಾಮಗ್ರಿ ಪ್ರದರ್ಶನವನ್ನು ವೀಕ್ಷಿಸಲು ಬಂದವರಿಗೆ ನಿರುರಿಸಿದವು ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್‍

ಯಕ್ರಮಗಳನ್ನು ಆಯೋಜಿಸಿದ್ದರು. ಈ ಕಾರ್‍ಯಕ್ರಮದಲ್ಲಿ ಭಾರತೀಯ ನಾರಿಯರು ಸೀರೆಗಳನ್ನು ಪುರುಷರು ಧೋತರವನ್ನು ತೊಟ್ಟುಕೊಂಡು ದೇಶಭಕ್ತಿ ಗೀತೆ ಹಾಗೂ ಕೋಲಾಟದ ಪದಗಳನ್ನು ಹಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಣೆಯನ್ನು ಮಾಡುವ ಹೊಣೆ ನಮ್ಮದಾಗಿದೆ ಎಂಬ ಸಂದೇಶವನ್ನು ಸಾರಿದರು.
         ಮನರಂಜಿಸುವಂತಹ ಈ ವಸ್ತುಪ್ರದರ್ಶನವನ್ನು ಕಾಲೇಜಿನ ಅಧ್ಯಕ್ಷರಾದ ಶ್ರೀ ಸಂಜಯ ಕೊತಬಾಳ ಅವರು ಉದ್ಘಾಟನೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಕರಕುಶಲ ಪ್ರತಿಭೆಯನ್ನು ಕೊಂಡಾಡಿದರು ಮತ್ತು ಪ್ರದರ್ಶನದಲ್ಲಿ ಸ್ವತಂ ಭಾಗಿಯಾಗಿ ಅವರಿಗೆ ಉತ್ತೇಜನ ನೀಡಿದರು ಕಾಲೇಜಿನ ಉದ್ಯಾನವನದ ಮೇಲ್ವಿಚಾರಕರಾದ ಕೊಟ್ರಪ್ಪ ನವರು ಕೂಡ ಈ ಸಮಯದಲ್ಲಿ ಉಪಸ್ಥಿತಬದ್ದರು. ಕಾರ್‍ಯಕ್ರಮದಲ್ಲಿ ಕಾಲೇಜಿನ ಬೋಭಕ-ಬೋಧಕೇತರ ಸಿಬ್ಬಂದಿ ಹಾಜರಿದ್ದರು ಕಾಲೇಜಿನ ಪ್ರಾಚಾರ್‍ಯರಾದ ರಾಜರಾಜೇಶ್ವರ ರಾವ್ ಅವರು ವಿದ್ಯಾರ್ಥಿಗಳ ಶ್ರಮವನ್ನು ಕೊಂಡಾಡಿದರು. ಕಾಲೇಜಿನ ಉಪನ್ಯಾಸಕರಾದ ಶಿವಪ್ರಸಾದ್ ಹಾದಿಮನಿ, ಶಿವಬಸಪ್ಪ ಮಸ್ಕಿ, ಜಯಸಿಂಹ, ಬಸವರಾಜ ಹೆಚ್.ಎಂ, ಬಸವಂತಪ್ಪ,  ಹಾಗೂ ಇತರರು ಉಪಸ್ಥಿತರಿದ್ದರು. 

Leave a Reply

Top