ವೃತ್ತಿಕೌಶಲ್ಯ ತರಬೇತಿ ಯೋಜಯಡಿಯಲ್ಲಿ ಸಿದ್ದ ಉಡುಪು ತಯಾರಿಕೆ ತರಬೇತಿ

ಭಾರತ ಸರಕಾರದ ಗ್ರಾಮೀಣಾವೃದ್ಧಿ ಇಲಾಖೆಯ ವತಿಯಿಂದ ವಜೀರ ಅಡ್ವೈಸರ್‍ಸ್ ಪ್ರವೇಟ್ ಲಿ ಗುರ್‍ಗಾಂವ್ ,ಪ್ರೊಸಲ್ಯೂಶನ್ಸ್ ಬೆಂಗಳೂರು ಮತ್ತು ಅಮರೇಶ್ವರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯು ಇವರ ಸಂಯುಕ್ತ ಆಶ್ರಯದಲ್ಲಿ ೩೦ ದಿನಗಳ
ವೃತ್ತಿಕೌಶಲ್ಯ ತರಬೇತಿ ಯೋಜಯಡಿಯಲ್ಲಿ ಸಿದ್ದ ಉಡುಪು  ತಯಾರಿಕೆ ತರಬೇತಿ ನೀಡಲಾಗಿತ್ತು.
ಈ ಯೋಜನೇಯಡಿಯಲ್ಲಿ ತರಬೇತಿ ಪಡದ  ಯುವಕ ಯುವತಿಯರಿಗೆ  ಶಾಹಿ ಎಕ್ಸಪೋರ್ಟ್ಸ ಕಂಪನಿ ಬೆಂಗಳೂರ, ಇವರ ಕಂಪನಿಯಲ್ಲಿ ತರಬೇತಿ ಪಡೆದ ೩೫ ಯುವಕ ಯುವತಿಯರಿಗೆ   ಉದ್ಯೋಗ  ಕಲ್ಪಿಸಿ ಕೊಡಲಾಯಿತು. ದಿನಾಂಕ ೯.೨.೨೦೧೨ ಸಂಸ್ಥೆಯ ಆವಣದಲ್ಲಿ ನೆಡದ ಕಾರ್ಯಕ್ರಮದಲ್ಲಿ   ಉದ್ಯೋಗದ ಪ್ರಮಾಣ ನೀಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ  ಅಮರೇಶ್ವರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿಗಳಾದ ಗಿರೀಶ ಕಣವಿ ವಯಿಸಿದ್ದರು. ಉದ್ಘಾಟಕರಾಗಿ  ಸುಜೇಂದ್ರ ಬಿ.ಆರ್ ಶಾಹಿಎಕ್ಸಪೋರ್ಟ್ಸ ಕಂಪನಿ ಬೆಂಗಳೂರ ಮುಖ್ಯ ಅತಿಥಿಯಾಗಿ  ನೆರೆಂದ್ರನಾಥ ಸಂಯೋಜಕರು ಅಮ್ರಿತ್ ಭಾರತ ಸರಕಾರ  ಮತ್ತು  ಕುಮಾರಿ ಸಿಮಾ.ಬಿ ಪಾಟೀಲ್ ಅಮರೇಶ್ವರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಕೇಂದ್ರದ ಮುಖ್ಯಸ್ಥರು ಆಗಮಿಸದ್ದರು .ಪ್ರಕಾಶಗೌಡ ಗುಡ್ಲಾನೂರ್ ಇವರು  ವಂದಿಸಿದರು.
Please follow and like us:
error