ಶ್ರಾವಣದಲ್ಲಿಯೂ ಮಾವು ಬೆಳೆದ ಪ್ರಗತಿಪರ ರೈತ

 ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ ಮಾವಿನ ತಳಿಗಳು ಅಬ್ಬಬ್ಬ ಎಂದರೆ ಮೇ ತಿಂಗಳವರೆಗೆ ಫಲಕೊಡುತ್ತವೆ. ಆದರೆ ಮಾವಿನ ಹಲವಾರು ತಳಿಗಳು ವರ್ಷದ ಹನ್ನೆರಡು ತಿಂಗಳೂ ಫಲ ನೀಡುತ್ತವೆ. ಇಂತಹ ಒಂದು ಪ್ರಯೋಗವನ್ನು ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಪ್ರಗತಿಪರ ರೈತರಾದ ಮಹಾಂತೇಶರವರು ಮಾಡಿ ಯಶಸ್ಸು ಕಂಡಿದ್ದಾರೆ.
ಕೇವಲ ಎರಡು ವರ್ಷಗಳ ಹಿಂದೆ ನಾಟಿ ಮಾಡಿದ ರೂಮಾನಿ ಎಂಬ ತಳಿ ಈಗಾಗಲೇ ಫಲ ನೀಡುತ್ತಿದ್ದು, ಈ

ಗ ಗಿಡದ ತುಂಬೆಲ್ಲ ಗೊಂಚಲು, ಗೊಂಚಲು ಕಾಯಿಗಳನ್ನು ಬಿಟ್ಟಿದೆ. ಕಾಯಿ ಸಣ್ಣದಿದ್ದಾಗ ಉಪ್ಪಿನಕಾಯಿಗೆಂದು ಉಪಯೋಗಿಸಬಹುದಾದರೆ ಹಣ್ಣೇ ಹೆಚ್ಚು ಸ್ವಾಧಿಷ್ಟವಾಗಿರುತ್ತದೆ. ಮಹಾರಾಷ್ಟ್ರ ಆಂದ್ರಗಳಲ್ಲೆಲ್ಲ ೧೨ ತಿಂಗಳೂ ಫಲ ನೀಡುವ ಇಂತಹ ಹಲವಾರು ತಳಿಗಳನ್ನು ಈಗಾಗಲೇ ಬೆಳೆಯುತ್ತಿದ್ದು ಹೊರದೇಶಗಳಿಗೆ ರಫ್ತು ಕೂಡ ಮಾಡಲಾಗುತ್ತಿದೆ. ಈ ರೈತರು ತಾವು ನಾಟಿ ಮಾಡಿದ ಸುಮಾರು ೪೦೦೦ ಗಿಡಗಳಿಂದ ೩ನೇ ವರ್ಷದಲ್ಲಿ ೪೦೦೦೦ ಕ್ಕೂ ಮೇಲ್ಪಟ್ಟು ಆದಾಯ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ಆದಾಯ ಇನ್ನೂ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ.

ಮಹಾಂತೇಶರವರಂತೆ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೊಸ ಹೊಸ ತಳಿಗಳನ್ನು ಬೆಳೆದಿದ್ದೆ ಆದಲ್ಲಿ ತೋಟಗಾರಿಕೆಯಿಂದ ಗರಿಷ್ಟ ಲಾಭ ಪಡೆಯಲು ಸಾಧ್ಯವೆಂದು ಇತ್ತೀಚಿಗೆ ತೋಟಗಾರಿಕೆ ಸಪ್ತಾಹದ ಅಂಗವಾಗಿ ಇವರ ತೋಟಕ್ಕೆ ಭೇಟಿ ನೀಡಿದ ತೋಟಗಾರಿಕೆ ಉಪನಿರ್ದೇಶಕರಾದ ಶಶಿಕಾಂತ ಕೋಟೆಮನಿ, ತೋಟಗಾರಿಕೆ ಅಧಿಕಾರಿಗಳಾದ ಬಸವರಾಜ ಬೇನಾಳ ಹಾಗೂ ಮಾಹಿತಿ ಮತ್ತು ಸಲಹಾ ಕೇಂದ್ರದ ಮೂರ್ತಿಯವರು ಅಭಿಪ್ರಾಯ ಪಟ್ಟಿದ್ದಾರೆ. 

Leave a Reply