ಡಿ.೩ ರಿಂದ ಸಿದ್ದಾರೂಢ ಮಹಾಸ್ವಾಮಿಗಳ ೨೫ ನೇ ಜಾತ್ರಾ ಮಹೋತ್ಸವ

 ಕೊಪ್ಪಳ : ಡಿಸೆಂಬರ್ ೩ ರಿಂದ ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ೨೫ ನೇ ಜಾತ್ರಾಮಹೋತ್ಸವ ಹಾಗೂ ಬೆಳ್ಳಿ ಹಬ್ಬ ನಡೆಯಲಿದೆ. ಅಂದು ಬೆಳಿಗ್ಗೆ ಕೊಪ್ಪಳದ ಮಳೇಮಲ್ಲೇಶ್ವರ ದೇವಸ್ಥಾನದಿಂದ ದದೇಗಲ್‌ನ ಶ್ರೀ ಸಿದ್ದಾರೂಢಮಠಕ್ಕೆ ಕಳಸ, ಕುಂಭ, ವಾದ್ಯಗಳೊಂದಿಗೆ ಸಿದ್ದಾರೂಢರ ಮೆರವಣಿಗೆ ನಡೆಯಲಿದೆ. 
           ಡಿಸೆಂಬರ್ ೪ ರಂದು ಡಾ.ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳ ತುಲಾಭಾರ ಹಾಗೂ ೭೪ ನೇ ತೊಟ್ಟಿಲೋತ್ಸವ ನಡೆಯಲಿದೆ. ಡಿಸೆಂಬರ್ ೫ ರಂದು ಜಾತ್ರಾಮಹೋತ್ಸವದ ಬೆಳ್ಳಿಹಬ್ಬದ ಅಂಗವಾಗಿ ಸಾಮೂಹಿಕ ವಿವಾಹಗಳು ನಡೆಯಲಿವೆ. ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಹೇಮಕೂಟದ ಶ್ರೀ ಶಿವರಾಮ ಆವಧೂತ ಆಶ್ರಮದ ಶ್ರೀ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ಜಡಿಮಠದ ಶ್ರೀ ಮುಕ್ತಾನಂದ ಮಹಾಸ್ವಾಮಿಗಳು, ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣದೇವರು, ದದೇಗಲ್ ಸಿದ್ದಾರೂಢಮಠದ ಶ್ರೀ ಆತ್ಮಾನಂದ ಭಾರತಿ ಮಹಾಸ್ವಾಮಿಗಳು, ಗಾಳೇಶ್ವರಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಽಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡುವರು. ಮೂರು ದಿನಗಳ ಕಾಲ ನಡೆಯುವ ಸಿದ್ದಾರೂಢ ಮಹಾಸ್ವಾಮಿಗಳ ಜಾತ್ರಾಮಹೋತ್ಸವದ ಬೆಳ್ಳಿಹಬ್ಬದ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜನರು ಪಾಲ್ಗೊಳ್ಳುವಂತೆ ಕಾರ್ಯಕ್ರಮಗಳ ಸಂಚಾಲಕ ಕೋಟೇಶ ತಳವಾರ  ಕೋರಿದ್ದಾರೆ.

Leave a Reply