You are here
Home > Koppal News > ಕ್ರೈಸ್ತ ಬಂಧುಗಳಿಂದ ಶಾಸಕರಿಗೆ ಸನ್ಮಾನ

ಕ್ರೈಸ್ತ ಬಂಧುಗಳಿಂದ ಶಾಸಕರಿಗೆ ಸನ್ಮಾನ

ಕೊಪ್ಪಳ ಜಿಲ್ಲಾ ಕ್ರೈಸ್ತ ಸಮಾಜ ಕ್ಷೇಮಾಭಿವೃದ್ಧಿ ಸಂಘದ ೩ನೇ ವಾರ್ಷಿಕೋತ್ಸವ ಹಾಗೂ  ಶಾಸಕರ ಸನ್ಮಾನ ಸಮಾರಂಭ
ಕೊಪ್ಪಳ ೦೮ : ಕೊಪ್ಪಳ ತಾಲೂಕಿನ ಭಾಗ್ಯನಗರ ೩ನೇ ವಾರ್ಡನಲ್ಲಿ ಕೊಪ್ಪಳ ಜಿಲ್ಲಾ ಕ್ರೈಸ್ತ ಸಮಾಜ ಕ್ಷೇಮಾಭಿವೃದ್ಧಿ ಸಂಘದ ೩ನೇ ವಾರ್ಷಿಕೋತ್ಸವ ಹಾಗೂ ನೂತನ ಶಾಸಕರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.  ಅಧ್ಯಕ್ಷತೆಯನ್ನು   ಹನುಮಂತಪ್ಪ ಭಾವಿಮನಿ. 
                      ಉದ್ಘಾಟನೆಯನ್ನು ನೂತನ ಶಾಸಕರಾದ ರಾಘವೇಂದ್ರ ಹಿಟ್ನಾಳ ವಹಿಸಿದ್ದರು.  ಹಾಗೂ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹೊನ್ನೂರಸಾಬ ಭೈರಾಪೂರ, ಕಾಂಗ್ರೇಸ್ ಮುಖಂಡರಾದ ಕೃಷ್ಣ ಇಟಂಗ್ಗಿ, ಗ್ರಾಂ. ಪಂ. ಸದಸ್ಯರಾದ ಸುರೇಶ ದರಗದಕಟ್ಟಿ, ಲಕ್ಷಮ್ಮ ಭಾವಿಮನಿ, ಹೇಮಕ್ಕ ಗೋಟುರು, ಫಾದರ್‌ರಾದ   ವಸಂತ ಕುಮಾರ್, ಡ್ಯಾನಿಯಲ್, ದೇವೇಂದ್ರ ನಾಂಯ್ಕ, ಹಾಗೂ ಅಬ್ರಹಾಮ್ ನಥಾನೇಲ್ ಇತರರು. ಭಾಗವಹಿಸಿದ್ದರು. ಸಮಾರಂಭದ ಮೊದಲಿಗೆ ಸ್ವಾಗತವನ್ನು  ಚನ್ನಬಸಪ್ಪ ಜಾಲಿಹಾಳ ಇವರಿಂದ ನೇರವೆರಿತು.    ಶಾಸಕರಾದ ರಾಘವೇಂದ್ರ ಹಿಟ್ನಾಳ ಇವರಿಗೆ ಸನ್ಮಾನವನ್ನು ಕೊಪ್ಪಳ ಜಿಲ್ಲಾ ಕ್ರೈಸ್ತ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಇವರಿಂದ ಏರ್ಪಟ್ಟಿತು.  ನಮ್ಮ ಸಮಾಜದ ಕ್ರೈಸ್ತ ಸಮುದಾಯ ಭವನ ಮತ್ತು ಬಹುದಿನಗಳಿಂದ ಇನ್ನೂ ಈಡೇರದ ಕ್ರೈಸ್ತ ರುದ್ರಭೂಮಿ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ನೂತನ ಶಾಸಕರಾ ರಾಘವೇಂದ್ರ ಹಿಟ್ನಾಳ ಇವರಿಗೆ ಮನವಿ ಸಲ್ಲಿಸಲಾಯಿತು.  ಉದ್ಘಾಟಕರಾದ ಶಾಸಕರು ಸಲ್ಲಿಸಿದ ಮನವಿಗೆ ಸ್ಪಂದಿಸಿ ಕ್ರೈಸ್ತ ಸಮುದಾಯ ಅಭಿವೃದ್ದಿಗೆ ನಾನೂ ನಿಮ್ಮ ಜೊತೆ ಕೈ ಜೋಡಿಸುತ್ತೇನೆ. ಕ್ರೈಸ್ತ ಸಮುದಾಯ & ಅಲ್ಪ ಸಂಖ್ಯಾತರ ಅಭಿವೃದ್ದಿಗೆ ಯಾವತ್ತು ಶ್ರಮಿಸುತ್ತೇನೆ.  ಅವಶ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತೇನೆ.  ಎಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಸದಾನಂದ ಭಾವಿಮನಿ. ಸಹ ಶಿಕ್ಷಕರು.  ಸ್ವಾಗತವನ್ನು ಚನ್ನಬಸಪ್ಪ ಎಂ. ಜಾಲಿಹಾಳ. ವಂದನಾರ್ಪಣೆಯನ್ನು ಪ್ರಕಾಶ್ ದೇವರಮನಿ. ಇವರುಗಳು ವಹಿಸಿಕೊಂಡಿದ್ದರು.

Leave a Reply

Top