You are here
Home > Koppal News > ಗಾಣಿಗರ ರಾಜ್ಯಮಟ್ಟದ ಬೃಹತ್ ಸಮಾವೇಶದ ಪೂರ್ವಬಾವಿ ಸಭೆ

ಗಾಣಿಗರ ರಾಜ್ಯಮಟ್ಟದ ಬೃಹತ್ ಸಮಾವೇಶದ ಪೂರ್ವಬಾವಿ ಸಭೆ

ಕಳೆದ ೧೦ ವರ್ಷದಿಂದ ಗಾಣಿಗರ ರಾಜ್ಯಮಟ್ಟದ ಬೃಹತ್ ಸಮಾವೇಶ ಮಾಡಬೇಕೆಂದು ಆಗಿರಲಿಲ್ಲ ಆದರೆ ಸಮಯ ಈಗ ಕೊಡಿಬಂದಿದೆ, ಸಮಾಜದಬಾಂದವರು ಎಲ್ಲರು ತನು, ಮನದಿಂದ ಶ್ರಮಿಸಿದ್ದೆ ಆದರೆ ಸಮಾಜದ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸುವುದಲ್ಲದೆ, ಸರ್ಕಾರದಿಂದ ಬರುವಂತ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಲು ಹೊರಾಟಕ್ಕೆ ಮುಂದಾಗಬಹುದು, ಕೆಲವು ಭಾಗದಲ್ಲಿ ವೆಜ್ಜ್ ಗಾಣಿಗ/ನಾನ್ ವೆಜ್ಜ ಗಾಣಿಗ ಎಂದು ಕೆಲ ರಾಜಕಾರಣಿಗಳು ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ಈ ಮೂಲಕ ಸಮಾವೇಶದ ಒಗ್ಗಟ್ಟನ್ನು ಪ್ರದರ್ಶಿಸೋಣ ಜೋಳಿಗೆ ಇಲ್ಲದ ಜಂಗಮರು ನಾವು ಪಟ್ಟಾಧಿಕಾರಕ್ಕೆ ಯಾರ ಸಹಾಯವನ್ನು ತೆಗೆದುಕೊಳ್ಳದೆ ನಾವೇ ಕಾರ್ಯಕ್ರಮದ ವೇಚ್ಚವನ್ನು ಬರಿಸೊಣ ಎನ್ನುವುದರ ಮೂಲಕ ವಿಜಯಪುರದಲ್ಲಿ ಜನವರಿ ೨೭ ಮತ್ತು ೨೮ರಂದು ನೂತನ ಶ್ರೀಗಳ ಪಟ್ಟಾಧಿಕಾರ ಮತ್ತು ಅಮೃತ ಮಹೋತ್ಸವದ ಕುರಿತು ಕುಷ್ಷಗಿ ರಸ್ತೆಯಲ್ಲಿ ನೂತನವಾಗಿ ನೀರ್ಮಾಣ ಗೊಳ್ಳುತ್ತಿರುವ ಗಾಣಿಗ ಸಮಾಜದ ಕಟ್ಟಡದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷರು ಅಮರಗುಂಡಪ್ಪ ಮೇಟಿ ಮಾತನಾಡಿದರು,
ಗಾಣಿಗ ಸಮಾಜವು ಆರ್ಥಿಕವಾಗಿ ಸರಕಾರದಿಂದ ದೊರೆಯುವ ಸಹಾಯಧನ-ಸಾಲಧನಗಳ ಉಪಯೊಗವನ್ನು ಪಡಿದುಕೊಳ್ಳಲು ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳವ ಪ್ರಯತ್ನ ಮಾಡುವಂತಾಗಬೇಕು. ನಮ್ಮ ಕೊಪ್ಪಳ ಜಿಲ್ಲೆಯಿಂದ ಕನಿಷ್ಷವೆಂದರು ಸ್ವ-ಇಚ್ಚೆಯಿಂದ ಸುಮಾರು ೬೦೦೦-೭೦೦೦ ಜನ ಗಾಣಿಗರ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಪಾಲುಗೋಳ್ಳುತಾರೆ ಎಂದು ಗಾಣಿಗ ಸಮಾಜದ ಹಿರಿಯ ಮುಖಂಡರು ರುದ್ರಮುನಿ ಗಾಳಿ ಹೇಳಿದರು, 
ಗಂಗಾವತಿಯಿಂದ ನಾವು ವಿಜಯಪೂರದಲ್ಲಿ ನಡೆಯುವ ಗಾಣಿಗರ ರಾಜ್ಯಮಟ್ಟದ ಬೃಹತ್ ಸಮಾವೇಶಕ್ಕೆ ೧೦೦ ಕ್ವಿಂಟಲ್ ಅಕ್ಕಿಯನ್ನು ಸ್ವಯಂ ಪ್ರೇರಿತವಾಗಿ ಕೊಡುತ್ತೆವೆ. ಮುಂಬರುವ ಜನಗಣತಿಯಲ್ಲಿ ನಾವೆಲ್ಲರು ನಿಕರವಾಗಿ ಗಾಣಿಗ ಎಂದು ಬರೆಸುವುದರ ಮೂಲಕ ಗಾಣಿಗ ಸಮುದಾಯದ ಜನಸಂಖ್ಯೆಯ ಪ್ರದರ್ಶನ ಮಾಡಬೇಕು ಅಲ್ಲದೇ ನಮ್ಮ ಜನಾಂಗದವರು ಮಠದ ಗುರುಪೀಠ ಸ್ಥಾಪಿಸಲು ಶ್ರಮಿಸಬೇಕು, ಎಂದು ರಾಜ್ಯ ಯುವ ಗಾಣಿಗರ ಸಂಘದ ಅಧ್ಯಕ್ಷ ಶರಣಪ್ಪ ನಾಗೋಜಿ ಹೇಳಿದರೆ,  ಯಲಬುಗಾ ತಾಲೂಕಿನ ಗಾಣಿಗರ ಸಂಘದ ಅಧ್ಯಕ್ಷ ಅಮೃತರಾವ್ ದೇಸಾಯಿ ಸಮಾವೇಶಕ್ಕೆ ರಾಜಕಾರಣಿಗಳನ್ನು ಅವಲಂಬಿಸುವುದು ಬೇಡ, ನಾವೇ ನಮ್ಮ ಸ್ವಂತ ಖರ್ಚ್ಚಿನಲ್ಲಿ ವಿಜಯಪೂರಕ್ಕೆ ಸಂಪೃಪ್ತಿಯಿಂದ ಹೊಗಿಬರೋಣ ಯಲಬುರ್ಗಾ ತಾಲೂಕಿನ ಸುಮಾರು ೬೦ ಹಳ್ಳಿಗಳಿಂದ ಜನರು ಸಮಾವೇಶಕ್ಕೆ ಬರುತ್ತಾರೆ ಎಂದರು.
ಅರಂಭದಲ್ಲಿ ಗಾಣಿಗರ ಸಂಘದ ಪ್ರಧಾನ ಕಾರ್ಯದರ್ಶಿ ತೋಟಪ್ಪ ಕಾಮನೂರ ಸ್ವಾಗತಿಸಿದರು, ಪ್ರಾಸ್ಥಾವಿಕ ಬಾಷಣ ಹನುಮಂತರಾವ್ ಮಾಡಿದರು, ಈ ಸಂಧರ್ಭದಲ್ಲಿ ಕೊಪ್ಪಳ ತಾಲೂಕ ಗಾಣಿಗರ ಸಂಘದ ಅಧ್ಯಕ್ಷ ಪಿ.ಎಮ್. ಬಸವರಾಜ, ಗಂಗಾವತಿ ತಾಲೂಕ ಅಧ್ಯಕ್ಷ ವೀರೇಶಪ್ಪ ಬಲಕುಂದಿ, ಕುಷ್ಷಗಿ ತಾಲೂಕ ಗಾಣಿಗರ ಸಂಘದ ಅಧ್ಯಕ್ಷ ಸಂಗನಗೌಡ್ರ ಪಾಟೀಲ, ಗಾಣಿಗ ಭವನ ಕಟ್ಟಡ ಸಮಿತಿ ಅಧ್ಯಕ್ಷ ಎನ್.ಸಿ.ಗೌಡರ, ಗಾಣದ ಕಣ್ಣಪ್ಪ ಜೋತಿ ಪತ್ತಿನ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಹುಚ್ಚಣ್ಣ ಕೇರಿ, ಕಾರಟಗಿ ನಗರ ಘಟಕದ ಅಧ್ಯಕ್ಷ ಚನ್ನಬಸವ ಸಜ್ಜನ್, ಮಹೇಶ ಹಳ್ಳಿ, ಅಯ್ಯನಗೌಡ ಆರ. ಕೆಂಚಮ್ಮನವರ, ವೀರುಪಾಕ್ಷಪ್ಪ ಸಜ್ಜನ, ಎಲ್.ಪಿ.ಪರನಗೌಡರ, ಗಂಗಾಧರ ಸಜ್ಜನ್, ಹಿರೇಬಸಪ್ಪ ಸಜ್ಜನ, ಸಿದ್ದರಾಮಣ್ಣ ಗಾಣಿಗೇರ, ಈಶಪ್ಪ ಮೆತಗಲ್, ಶಿವು ಚರಾರಿ, ಸತೀಶ ಬಿ. ಮುರಾಳ, ನೀರ್ದೆಶಕರುಗಳಾದ, ಮಂಜುನಾಥ ಪಾಟೀಲ್, ಗುಡದನಗೌಡ ಪಾಟೀಲ್, ಹುಡಚಪ್ಪ ದೇಸಾಯಿ, ಪಕೀರಪ್ಪ ಮೇಟಿ, ನಿಂಗಣ್ಣ ಹುಳ್ಳಿ, ಅಲ್ಲದೆ ಕೊಪ್ಪಳ ಜಿಲ್ಲೆಯ ಸೂತ್ತ ಮುತ್ತಲಿನ ಹಳ್ಳಿಗಳಿಂದ ಹಲವು ಮುಖಂಡರುಗಳು ಭಾಗವಹಿಸಿದ್ದರು.

Leave a Reply

Top