ಇಂಗ್ಲೀಷ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು : ಎಚ್.ಶಿವರಾಮೇಗೌಡ

ಯಲಬುರ್ಗಾ : ಕನ್ನಡ ಭಾಷೆ ತನ್ನದೆ ಆದ ಇತಿಹಾಸವಿದೆ ಮತ್ತು ಅನೇಕರು ಕನ್ನಡ ಭಾಷೆಯಲ್ಲಿ ಓದಿ ಸಾಧನೆಯನ್ನು ಮಾಡಿದ್ದಾರೆ ಆದರೆ ಜನರಿಗೆ ಇಂಗ್ಲೀಷ ಭಾಷೆ ವ್ಯಾಮೋಹದಿಂಧ ಕನ್ನಡಕ್ಕೆ ಕುತ್ತು ಬಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್.ಶಿವರಾಮೇಗೌಡ ಹೇಳಿದರು.
ಅವರು ಪಟ್ಟಣದ ಹಳೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಕರವೇ ತಾಲೂಕ ಘಟಕ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ಸೇನಾನಿ ಮುರಡಿ ಭೀಮಜ್ಜರ ಜೀವನ ಸಾಧನೆ ಪುಸ್ತಕ ಬಿಡುಗಡೆಯ ಸಮಾರಂಭದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಹೈದ್ರಾಬಾದ ಕರ್ನಾಟಕದ ಸ್ವತಂತ್ರ ಸೇನಾನಿ ಭೀಮಜ್ಜರು ಇತಿಹಾಸದಲ್ಲಿ ಮರೆಯಾಗುವದನ್ನು ತಡೆದು ಅವರ ಜೀವನ ಸಾಧನೆ ಬಗ್ಗೆ ಪುಸ್ತಕ ಹೊರತಂದಿರುವದು ಲೇಖಕ ಮತ್ತು ಕನ್ನಡ ಪರ ಹೋರಾಟಗಾರರ ಕಾರ್ಯ ಶ್ಲಾಘನೀಯ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಹೋರಾಟಗಾರ ಹಾಗೂ ಲೇಖಕ ಕೆ.ಎಸ್.ಕೊಡತಗೇರಿ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳಸುವದು ಎಲ್ಲರ ಕರ್ತವ್ಯವಾಗಿದೆ ಎಂದ ಅವರು ಮುರಡಿ ಭೀಮಜ್ಜರ ಬಗ್ಗೆ ನಾಡಿನ ಅನೇಕ ಪತ್ರಿಕೆಗಳಲ್ಲಿ ಲೇಖನಗಳು ಬಂದಿದ್ದವು ಆದರೆ ಪುಸ್ತಕ ಬದಿರಲಿಲ್ಲ ಪರ್ತಕರ್ತರ ಸಹಾಕರದಿಂದ ಮತ್ತು ಗ್ರಾಮಸ್ತರಿಂದ ಸಾಹಿತಿಗಳಿಂದ ತಿಳಿದುಕೊಂಡು ಈ ಕಿರುಹೋತ್ತಿಗೆಯನ್ನು ತರಲಾಯಿತು ಎಂದ ಅವರು ಮುರಡಿ ಭೀಮಜ್ಜರು ಒಬ್ಬ ತಪಸ್ವೀನಿಯಾಗಿ ಹೋರಾಟಗಾರರು ಆಗಿ ನಿಸ್ವಾರ್ಥ ಸೇವೆಯನ್ನು ಒಬ್ಬ ಸಾನ್ಯಾಸಿಯಾಗಿ ಸಮಾಜಕ್ಕೆ ಸಲ್ಲಿಸಿದ್ದಾರೆ ಇಂತಹ ಮಾಹನ ಭಾವರ ಪುತ್ಥಳಿಯನ್ನು ಮತ್ತು ಸ್ಮಾರಕ ಭವನ ಮಾಡದೆ ಇರುವದು ವಿಪರ್ಯಾಸ ಸಂಗತಿ ಮತ್ತು ಈ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿಯವರು ಇಂತಹ ಕಾರ್ಯಕ್ರಮಕ್ಕೆ ಬರುವದು ವಿರುಳ ಇಂತಹವರು ಕ್ಷೇತ್ರವನ್ನು ಯಾವ ರೀತಿ ಅಭೀವೃದ್ದಿ ಮಾಡುತ್ತಾರೆ ಎಂದು ಜನರು ತಿಳಿದುಕೊಳ್ಳಬೇಕು ಕ್ಷೇತ್ರದಲ್ಲಿ ಮೂಲ ಭೂತ ಸಮಸ್ಯಗಳು ತಾಂಡವಾಡುತಿದ್ದರು ಅವರಿಗೆ ಕಾಣುವದಿಲ್ಲ ಏಕೆಂದರೆ ಅವರು ದೂರದ ಬೆಂಗಳೂರಲ್ಲಿ ವಾಸಿಸುತ್ತಾರೆ ಇಂತವರಿಂದ ಕ್ಷೇತ್ರ ಅಭೀವೃದ್ದಿ ಅಸಾಧ್ಯ ಎಂದರು.
ನಂತರ ಸಾಹಿತಿ ಅಲ್ಲಮ ಭೇಟ್ಟದೂರ ಮಾತನಾಡಿ ಜಾಗತಿಕರಣದಿಂದ ಪ್ರಾದೇಶಿಕ ಭಾಷೆಗಳಿಗೆ ಕುತ್ತು ಬಂದಿದೆ ಪ್ರಾದೇಶಿಕ ಭಾಷೆ ಉಳಿಯಬೇಕಾದರೆ ಆಡಳಿತ ಭಾಷೆ ಸೇರಿದಂತೆ ನ್ಯಾಯಲಯದಲ್ಲಿ ಪ್ರಾದೇಶಿಕ ಭಾಷೆಗಳು ಬಳಕೆಯಾಗಬೇಕು ಎಂದರು.
ಗ್ರಂಥ ಬಿಡುಗಡೆಯನ್ನು ಬಿಜೆಪಿ ಮುಖಂಡ ಬಸವರಾಜ ಧೂಳಪ್ಪನವರ ಬಿಡುಗಡೆ ಮಾಡಿದರು.ಸಾನಿಧ್ಯವನ್ನು ಶ್ರಿಧರ ಮುರಡಿ ಮಠದ ಬಸವಲಿಂಗೇಶ್ವರ ಶಿವಚಾರ್ಯ ಸ್ವಾಮಿಜಿ ಸಾನಿಧ್ಯವಹಿಸಿದ್ದರು.
ತಾಪಂ ಅಧ್ಯಕ್ಷ ಮಾಹದೇವಿ ಕಂಬಳಿ,ಕರವೇ ರಾಯಚೂರ ಅಧ್ಯಕ್ಷ ಅಶೋಕ ಜೈನ,ಬಳ್ಳಾರಿ ಅಧ್ಯಕ್ಷ ಬಿ.ಸುರೇಶ ಮಾತನಾಡಿದರು .
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಪ್ರಥಮ ದರ್ಜೆ ಪ್ರಾಶುಂಪಾಲ ಡಾ:ಶಿವರಾಜ ಗುರಿಕಾರ, ಅಮರಪ್ಪ ಕಲಬುರ್ಗಿ,ಅಮೃತರಾಜ ಜ್ಞಾನಮೊಟೆ,ಸಿದ್ರಾಮಪ್ಪ ವಂದಾಲಿ, ಸ್ವಾತಂತ್ರ್ಯ ಹೋರಾಟಗಾರ ಶ್ರೀನಿವಾಸ ಕೊರ್ಲಹಳ್ಳಿ,ಸೇರಿದಂತೆ ಅನೇಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಮುಖಂಡ ಅಂದನಗೌಡ ಪೊಲೀಸಪಾಟೀಲ,ಬಸಲಿಂಗಪ್ಪ ಭೂತೆ,ಬಿಜೆಪಿ ಮುಖಂಡ ಅಯ್ಯನಗೌಡ ಕೆಂಚಮ್ಮನವರ,ಪ್ರಾಚರ್ಯರು ಆದ ಡಿ.ಆರ್.ರೇವಣಸಿದ್ದೇಶ್ವರ,ಕಸಾಪ ಅಧ್ಯಕ್ಷ ವಿರಣ್ಣ ನಿಂಗೋಜಿ,ಸಾಹಿತಿ ಮುನಿಯಪ್ಪ ಹುಬ್ಬಳಿ , ತಾಪಂ ಸದಸ್ಯ ಕೋನಗೌಡ್ರ,ಗದಗ ಮಹಿಳಾ ಜಿಲ್ಲಾಧ್ಯಕ್ಷೆ ಶೋಭಾ ಕಮ್ಮಾರ,ಮುಂಡರಗಿ ಕರವೇ ಅಧ್ಯಕ್ಷ ಶಿವು ಬಾರಕೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
 ಅಧ್ಯಕ್ಷೆತೆಯನ್ನು ಕರವೇ ಜಿಲ್ಲಾಧ್ಯಕ್ಷ ಅಜ್ಜಪ್ಪ ಕರಡಕಲ್ ವಹಿಸಿದ್ದರು.ತಾಲೂಕ ಅಧ್ಯಕ್ಷ ರಾಜಶೇಖರ ಶ್ಯಾಗೋಟಿ ಸ್ವಾಗತಿಸಿ ವಂದಿಸಿದರು. ಶಾಲಾ ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ ಮಾಡಲಾಯಿತು.
Please follow and like us:
error