ಕೊಪ್ಪಳ : ಕಟ್ಟಡ ವಿದ್ಯುತ್ ತಂತಿ ಕೆಲಸಗಾರರ ಸಂಘ ಆಸ್ತಿತ್ವಕ್ಕೆ

 ಕಟ್ಟಡ ವಿದ್ಯುತ್ ತಂತಿ ಕೆಲಸಗಾರರು (ಹೌಸ್ ವೈರಿಂಗ್) ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ ಇವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಕಟ್ಟಡ ವಿದ್ಯುತ್ ತಂತಿ ಕೆಲಸಗಾರರ ಸಂಘ (ಎಐಟಿಯುಸಿ ಸಂಯೋಜಿತ)ದ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಮತ್ತು ಅದರ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಖಾಜಾಹುಸೇನ್‌ಸಾಬ ಗೊಂಡಬಾಳ, ಉಪಾಧ್ಯಕ್ಷರಾಗಿ ರಾಮನಗೌಡ ಪೊಲೀಸ್ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್‌ರಜಾ, ಕಾರ್ಯದರ್ಶಿಯಾಗಿ ಗವಿಸಿದ್ಧಪ್ಪ ದಿಂಡೂರ್, ಸಂಘಟನಾ ಕಾರ್ಯದರ್ಶಿಯಾಗಿ ಮಂಜೂರ್ ಮೂಲಿಮನಿ, ಖಜಾಂಚಿಯಾಗಿ ಗವಿಸಿದ್ದಪ್ಪ ಗುಡ್ಡದ್ ಮ್ಯಾಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಬಾಬಾವಲಿ ಅಡ್ಡೆವಾಲೆ, ಪರಶುರಾಮ್ ಕುಡತನಿ ಕಿನ್ನಾಳ, ಶಾಬಾಜ್‌ಜುನೇದಿ, ಶಿವಶಂಕ್ರಪ್ಪ ಇಂದ್ರಗಿ, ಅಬ್ದುಲ್ ಸತ್ತಾರ್, ಷಣ್ಮುಖಸ್ವಾಮಿ ಹೂವಿನಾಳ, ದೇವೆಂದ್ರಪ್ಪ ಮೆತಗಲ್ ಕಿನ್ನಾಳ, ಮಹ್ಮದ್ ಯುನೂಸ್, ಯೂಸೂಪ್ ಸಮದಾನಿ, ಮನಸೂರ ಅಲಿ ಬೇಗ್, ಖಾದರ್‌ಪಾಷಾ ಗೊಂಡಬಾಳ ಮುಂತಾದವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಆಯ್ಕೆ ಪ್ರಕ್ರಿಯೆ ನಡೆಸಿದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್  ತಿಳಿಸಿದ್ದಾರೆ.

Leave a Reply