ಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಕೊಪ್ಪಳ. ನಗರದ ಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ ೨೬-೦೨-೨೦೧೨ ರಂದು ರವಿವಾರ ಬೆಳಿಗ್ಗೆ ೧೦ ಘಂಟೆಗೆ ಮಹಿಳಾಮೀಸಲಾತಿ ಮಸೂದೆ-ಒಂದು ಸಾಮಾಜಿಕ ಅವಶ್ಯಕತೆ ಎಂಬ ವಿಷಯದ ಮೇಲೆ ಸಮಾಜಶಾಸ್ತ್ರ ವಿಭಾಗದಿಂದ ರಾಜ್ಯ ಮಟ್ಟದ ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು   ಅಭಯಕುಮಾರ ಮೆಹತಯಾ ನೆರವೇರಿಸುವರು.ಅಧ್ಯಕ್ಷತೆಯನ್ನು   ಟಿ.ಜಿ.ಹೀರೇಮಠ ವಹಿಸಲಿದ್ದಾರೆ. ಇದರಲ್ಲಿ ಅಖಿಲ ಭಾರತ ಜನವಾದಿ ಮಹಿಳ ಸಂಘಟನೆಯ ಗುಲಬರ್ಗಾದ ಉಪಾಧ್ಯಾಕ್ಷರಾದ ಶ್ರೀಮತಿ ಕೆ.ನೀಲಾ ಇವರು ಮುಖ್ಯ ಉಪನ್ಯಾಸಕರಾಗಿ ಉಪನ್ಯಾಸ ಮಾಡಲಿದ್ದಾರೆ.ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡ ವಿಶ್ವ ವಿದ್ಯಾಲಯದ ಡಾ.ಎಂ.ಉಷಾ,ಡಾ.ಶೈಲಜಾ ಹೀರೇಮಠ,ಡಾ.ವಿನಯಾ ಅಳ್ನಾವರ್, ಇವರೆಲ್ಲರು ಭಾರತೀಯ ಮಹಿಳೆಯರ ಪರಿಸ್ಥಿತಿಗಳು,ಮಹಿಳೆಯರ ಸಮಸ್ಯೆಗಳು ಮತ್ತು ಸವಾಲುಗಳು ಹಾಗೂ ಮಹಿಳಾ ಮೀಸಲಾತಿಯ ಸಾಧಕಗಳು ಈವಿಷಯಗಳ ಕುರಿತು ಉಪನ್ಯಾಸ ಮಾಡಲಿದ್ದಾರೆ. ರಾಜ್ಯದ ಬೇರೆ ಬೇರೆಯಿಂದ ಪದವಿ ಕಾಲೇಜುಗಳಿಂದ ಉಪನ್ಯಾಸಕ ಪ್ರತಿನಿಧಿಗಳು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ. ಕೊಪ್ಪಳ ಜಿಲ್ಲೆಯ ಜನತೆ ಈ ವಿಚಾರ ಸಂಕೀರಣದಲ್ಲಿ ಭಾಗವಹಿಸಬೇಕೆಂದು ಪ್ರಾಚಾರ್ಯ ಪ್ರೊ.ಎಸ್.ಎಲ್.ಮಾಲಿಪಾಟೀಲ್ ಹಾಗೂ ಸಂಘಟನಾ ಕಾರ್ಯದರ್ಶಿಗಳಾದ ಪ್ರೊ.ಎ.ಆರ್.ಲೋಕಾಪುರು  ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.
Please follow and like us:
error