ಪಾನಮತ್ತನಾಗಿ ಕೌನ್ಸಿಲಿಂಗ್‌ಗೆ ಹಾಜರು : ಶಿಕ್ಷಕ ಅಮಾನತು

  ಸಾರ್ವಜನಿಕ ಶಿಕ್ಷಣ ಇಲಾಖೆಯ ಆವರಣದಲ್ಲಿ ಜು.೦೯ ರಂದು ಜರುಗಿದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ಗೆ ಮದ್ಯಪಾನ ಮಾಡಿ ಹಾಜರಾದ ಕುಷ್ಟಗಿ ತಾಲೂಕಿನ ಪರಮನಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶರಣಪ್ಪ ಜಕ್ಕಲಿ ಅವರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಜಿ.ಹೆಚ್.ವೀರಣ್ಣ ಅವರು ಆದೇಶ ಹೊರಡಿಸಿದ್ದಾರೆ.
  ವರ್ಗಾವಣೆ ಕೌನ್ಸಲಿಂಗ್ ನಡೆಯುತ್ತಿದ್ದಾಗ ಶಿಕ್ಷಕ ಶರಣಪ್ಪ ಜಕ್ಕಲಿ ಅವರು ಪಾನಮತ್ತರಾಗಿ ಹಾಜರಾಗಿ, ಕೌನ್ಸಲಿಂಗ್ ವರ್ಗಾವಣೆಗೆ ಅಡ್ಡಿಪಡಿಸಿದ್ದೂ ಅಲ್ಲದೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಅಸಭ್ಯವಾಗಿ ವರ್ತಿಸಿ  ,ಕರ್ತವ್ಯ ಲೋಪವೆಸಗಿದ ಕಾರಣಕ್ಕಾಗಿ, ಆಡಳಿತಾತ್ಮಕ ದೃಷ್ಠಿಯಿಂದ ಇವರನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮ ( ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) ೧೯೫೭ ರ ನಿಯಮ ೧೦ (೧) ಎ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Please follow and like us:
error