ಪರಿಸರ ರಕ್ಷಣೆಗೆ ಮಹಿಳೆಯರ ಪಾತ್ರದೊಡ್ಡದು ಅಮ್ಜದ್ ಪಟೇಲ್.

ಕೊಪ್ಪಳ,ಜಿ, ೨೩ಸಾಲುಮರದ ತಿಮ್ಮಕ್ಕ ನಂತೆಯೇ ಎಲ್ಲರೂ ಮರ ಗಿಡಗಳನ್ನು ತಮ್ಮ ಮಕ್ಕಳಂತೆಯೇ ಪೋಷಿಸಿದರೆ ನಮ್ಮ ನಾಡು ಹಸಿರಿನಿಂದ ಕಂಗೊಳಿಸಿ ಸಮೃದ್ಧ ಮಳೆಯಾಗಿ ಬರ ಮಾಯವಾಗಿ ದೇಶ ಸುಭಿಕ್ಷವಾಗುತ್ತದೆ ಇಂದು ಪರಿಸರ ಸಂರಕ್ಷಿಸಿ ಬೆಳೆಸುವಂತ ಮಹತ್ತರ ಕಾರ್ಯ ನಮ್ಮ ಮಹಿಳೆಯರ ಮೇಲಿದೆ ಪರಿಸರ ಸಂರಕ್ಷಿಸುವಲ್ಲಿ ಅವರ ಪಾತ್ರ ದೊಡ್ಡದು ಎಂದು  ಮಾಜಿ ನಗರಸಭಾ ಅಧ್ಯಕ್ಷ ಅಮ್ಜದ್ ಪಟೇಲ್ ಹಳೀದರು. ಅವರು ನಗರದಲ್ಲಿ ೩ನೇ ವಾರ್ಡಿನ ನಿರ್ಮಿತಿ ಕೇಂದ್ರ ಕಾಲೋನಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿವತಿಯಿಂದ ಜರುಗಿದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ೩ನೇ ವಾರ್ಷಿಕೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ

ಅವರು ಮುಂದಿನ ದಿನಗಳಲ್ಲಿ ಸ್ವತ್ಛತೆ ಹಾಗೂ ಹೊಸದಾಗಿ ಸಿಸಿ ರಸ್ತೆಗಳ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಮಹಿಳೆಯರಿಗೆ ಸಮುದಾಯ ಭವನದ ಮಾಡುವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ   ಜೆವಿಕಿ ಮೇಲ್ವಿಚಾರಕರಾದ ಸುಮಾ, ಮೇಲ್ವಿಚಾರಕರಾದ ರಾಘವೇಂದ್ರ ಭಟ್, ಸೇವಾ ಪ್ರತಿನಿಧಿ ಗೀತಾ ಜಾಧವ, ರಶೀದಾ ಬೇಗಂ, ಲಕ್ಷ್ಮೀಬಾಯಿ, ಗಾಯತ್ರಿ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment