ಜಿಲ್ಲಾಧಿಕಾರಿಗಳಿಗೆ ಹೆದರಿ ಕಾಗೇರಿ ಪರಾರಿ

ಕೊಪ್ಪಳ : ಕೊಪ್ಪಳ  ಉಪಚುನಾವಣೆಗಾಗಿ ಶಿಕ್ಷಕಕರ ಸಂಘದಲ್ಲಿ ರಾತ್ರಿ ವೇಳೆ ಅನಧಿಕೃತ ಸಭೆ ನಡೆಸಿದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾಧಿಕಾರಿಗಳ ದಾಳಿಗೆ ಹೆದರಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಜರುಗಿದೆ. ಹಲಗೇರಿಯಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಮನೆಯಲ್ಲಿ ಸರಕಾರಿ ನೌಕರರ ಸಭೆಯನ್ನು ಅನಧಿಕೃತವಾಗಿ ಸಭೆ ನಡೆಸುತ್ತಿದ್ದ ವಿಷಯ ಸಾರ್ವಜನಿಕರಿಂದ ತಿಳಿದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ  ಶಿಕ್ಷಕರು ತಮ್ಮ ವಾಹನಗಳನ್ನು ಬಿಟ್ಟು ಪರಾರಿಯಾದರೆ, ಸಚಿವ ಕಾಗೇರಿ ಜಿಲ್ಲಾಧಿಕಾರಿಗಳಿಗೂ ಭೇಟಿಯಾಗದೆ ಪರಾರಿಯಾದರು. 
    ಘಟನೆಯ ಬಗ್ಗೆ ವಿವರವಾಗಿ ಪರಶೀಲಿಸಿ ಕ್ರಮ ಕೈಗೊಳ್ಳುವುದಾಗಿ  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.
Please follow and like us:
error