ಮಕ್ಕಳ ಪ್ರತಿಭೆ ಅರಳಲು ವೇದಿಕೆ ಅವಶ್ಯ – ರಾಮಚಂದ್ರನಾಯ್ಕ

Koppal
ಕೊಪ್ಪಳ : ಮಕ್ಕಳ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿಯಂತ ವೇದಿಕೆ ಅವಶ್ಯ ಎಂದು ಕುಣಿಕೇರಿ ಗ್ರಾಮ.ಪಂಚಾಯತಿಯ ಉಪಾಧ್ಯಕ್ಷರಾದ  ರಾಮಚಂದ್ರನಾಯ್ಕ ಹೇಳಿದರು

ಅವರು ತಾಲ್ಲೂಕಿನ ಕುಣಿಕೇರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ  ಕುಣಿಕೇರಿ ಕ್ಲಸ್ಟರ್ ಮಟ್ಟದ  ಪ್ರತಿಭಾ ಕಾರಂಜಿಯನ್ನು  ಉದ್ಘಾಟಿಸಿ  ಮಾತನಾಡುತ್ತಾ ಪ್ರತಿಯೊಬ್ಬ ಮಕ್ಕಳಲ್ಲಿ ಒಂದೊಂದು ಪ್ರತಿಭೆಗಳು ಅಡಗಿದ್ದು ಅವುಗಳನ್ನು  ಹೊರತರಲು ಪ್ರತಿಬಾ ಕಾರಂಜಿಯಂತಹ  ವೇದಿಕೆಗಳು  ಅವಶ್ಯಕವಿದೆ ಎಂದು ತಿಳಿಸಿದರು. 
ಕಾರ್ಯಕ್ರಮದ ಕುರಿತಾಗಿ ಬಿ.ಆರ್.ಪಿಯವರಾದ ಪ್ರಭುರಾಜ ಬಳಿಗಾರ, ಶಿಕ್ಷಕರ ಪತ್ತಿನ ಸಂಘದ ಉಪಾದ್ಯಕ್ಷರಾದ  ಬಸವರಾಜ ಬಂಡಿಹಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಸ ರೆಡ್ಡಿ , ನಿರ್ದೇಶಕರಾದ ಬಿ.ಎಂ.ನಾಗರಡ್ಡಿ  ಮಾತನಾಡಿದರು 
ಕಾರ್ಯಕ್ರಮದಲ್ಲಿ ಸೇವಾದಳದ ತರಬೇತಿ ಪಡೆದ  ಶಿಕ್ಷಕರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ವಿಶ್ವನಾಥ.ಸಿ, ದೇವಪ್ಪ ಪೂಜಾರ, ಕುಣಿಕೇರಿ ಗ್ರಾಮ.ಪಂ.ಅಧ್ಯಕ್ಷರಾದ  ಸರಿತಾ ಬಾಯಿ, ಮಾಜಿ ಅಧ್ಯಕ್ಷರಾದ ವಿರುಪಣ್ಣ ಕುರಬರ್, ಮಾಜಿ.ಉಪಾಧ್ಯಕ್ಷರಾದ ಮಲ್ಲಪ್ಪ ಚೌದ್ರಿ  ಸದಸ್ಯರಾದ  ಯಂಕಪ್ಪ ಪೂಜಾರ,  ಶಿವಪ್ಪ ಬುರಡಿ,  ಊರಿನ ಮುಖಂಡರಾದ ಶ್ರೀಶೈಲಯ್ಯ ಹಿರೇಮಠ, ಸಣ್ಣ ನೀಲಪ್ಪ ಕುರಬರ್, ಸಿದ್ದನಗೌಡ ಮಾಲಿಪಾಟೀಲ,  ಕೊಟ್ರೇಶ ಸಬರದ, ಬೂಧಾನಿ, ಹುಚ್ಚಮ್ಮ ಚೌದ್ರಿ ಇನ್ನು ಮುಂತಾದವರು ಉಪಸ್ಥಿತರಿದ್ದರು 
ಪ್ರಭಾರಿ ಸಿ.ಆರ್.ಪಿ. ವೀರೇಶ ಅರಳಿಕಟ್ಟಿ  ಪ್ರಾಸ್ತಾವಿಕವಾಗಿ ಮಾತನಾಡಿದರು  ಶಿಕ್ಷಕರಾದ  ಭೀರಪ್ಪ ಅಂಡಗಿ ಚಿಲವಾಡಗಿ  ಕಾರ್ಯಕ್ರಮವನ್ನು ನಿರೂಪಿಸದರು ನಾಗರಾಜ ಪರಡೇಕರ ಸ್ವಾಗತಿಸಿ, ನಾಗಮೂರ್ತಿ ಪತ್ತಾರ ಎಲ್ಲರಿಗೂ ವಂಧಿಸಿದರು 

Related posts

Leave a Comment