You are here
Home > Koppal News > ತತ್ವ ಹಾಗೂ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ತತ್ವ ಹಾಗೂ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಕೊಪ್ಪಳ: ಡಾ.ಬಿ.ಆರ್.ಅಂಬೇಡ್ಕರವರ ತತ್ವ ಹಾಗೂ ಸಿದ್ದಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರವರ ೧೨೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ,ಹಿಂದುಳಿದ ಜಾತಿಯಲ್ಲಿ ಜನಿಸಿದ ಡಾ.ಬಿ.ಆರ್.ಅಂಬೇಡ್ಕರವರು ಪ್ರಾಚೀನ ಕಾಲದಲ್ಲಿ ರೂಡಿಯಲ್ಲಿದ್ದ ಜಾತಿ ವ್ಯವಸ್ಥೆಯಿಂದ ಅನೇಕ ರೀತಿಯಲ್ಲಿ ಅವಮಾನಗಳನ್ನು ಸಹಿಸಿಕೊಂಡು ಕೂಡಾ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆದು ಪ್ರಪಂಚಕ್ಕೆ ಮಾದರಿಯಾಗುವ ಭಾರತದ ಸಂವಿಧಾನವನ್ನು ರಚನೆ ಮಾಡಿದ ಗೌರವ ಅಂಬೇಡ್ಕರವರಿಗೆ ಸಲ್ಲುತ್ತದೆ.ಯಾವುದೇ ಒಂದು ಸಮಾಜವು ಮುಂದೆ ಬರಬೇಕಾದರೆ ಮುಖ್ಯವಾಗಿ ಶಿಕ್ಷಣವನ್ನು ಪಡೆಯಬೇಕು ಅಂದಾಗ ಮಾತ್ರ ಆ ಸಮಾಜವು ಅಭಿವೃದ್ದಿ ಹೊಂದುತ್ತದೆ.ಸರ್ಕಾರವು ಇಂದು ಹಿಂದುಳಿದ ವರ್ಗಗಗಳ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ ಅಂತಹ ಯೋಜನೆಗಳ ಅರ್ಹರರಿಗೆ ಸಿಗುವಂತಾಗಬೇಕು.ಭಾರತ ದೇಶಕ್ಕೆ ಸಿಮಿತವಾಗದೆ ಪ್ರಪಂಚಕ್ಕೆ ಮಾದರಿಯಾದ ಅಂಬೇಡ್ಕರವರ ತತ್ವ ಹಾಗೂ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ದಿನಾಚರಣೆಯನ್ನು ಮಾಡಿದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಶ್ರೀನಿವಾಸ ಬಡಿಗೇರ ಡಾ.ಬಿ.ಆರ್.ಅಂಬೇಡ್ಕರವರ ಜೀವನ ಹಾಗೂ ಸಾಧನೆಗಳ ಕುರಿತು ತಿಳಿಸಿಕೊಟ್ಟರು.
 ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹನುಮಂತಪ್ಪ ದಾಸರ,ಬಸವರಾಜ ಸಿಂಪಿ,ಗುರುರಾಜ ಕುಲಕರ್ಣಿ,ಶೇಖರಯ್ಯಾಸ್ವಾಮಿ,ಭಾರತಿ,ವಿಜಯಲಕ್ಷ್ಮಿ ಮುಂತಾದವರು ಹಾಜರಿದ್ದರು.

Leave a Reply

Top