ಕೊಪ್ಪಳ ಜಿಲ್ಲಾ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಖಾಯಂ ನೌಕರರ ಸಂಘದ ಕಾರ್ಯಕ್ರಮ ಉದ್ಘಾಟಿಸಿದ -ಬಿ ಕಲ್ಲೇಶ್.

ಕೊಪ್ಪಳ – ಜಿಲ್ಲೆಯಲ್ಲಿ ಈ ವರ್ಷ ಪ್ರಾರಂಭವಾದ  ಕೊಪ್ಪಳ ಜಿಲ್ಲಾ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಖಾಯಂ ನೌಕರರ ಸಂಘದ ಉದ್ಘಾಟನಾ ಕಾರ್ಯಕ್ರಮವು ಬೇವೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಿನಾಂಕ:-೦೧/೦೮/೨೦೧೫ ರಂದು ಸಂಜೆ ೦೪ ಕ್ಕೆ ನಡೆಯಿತು. ಜಿಲ್ಲಾ ಸಂಘದ ಉದ್ಘಾಟನೆಯನ್ನು ಮಾನ್ಯ ಶ್ರೀ ಕಲ್ಲೇಶ್.ಬಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಇವರು ಉದ್ಘಾಟಿಸಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೊಟ್ರೇಶ್ ಮುಖಾರಿ ಇವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ.ಕಲ್ಲೇಶ್ ಇವರು ಮಾತಾನಾಡುತ್ತಾ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘ ಬೇಕು. ಸಂಘದ ಧೇಯೋದ್ದೇಶಗಳು ಎಲ್ಲರ ಒಳಿತಿಗಾಗಿ ಇರಬೇಕು. ಕೇವಲ ಶಿಕ್ಷಕರ ಬಗ್ಗೆ ಮಾತ್ರಾ ಆಲೋಚಿಸದೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ವಸತಿ ಶಾಲೆಗಳ ಅಭಿವೃದ್ದಿ ಬಗ್ಗೆಯೂ ಆಲೋಚಿಸುವಂತಾಗಬೇಕು ಎಂದು ತಿಳಿಸಿದರು. ನಂತರ ಅಥಿತಿಗಳಾಗಿ ಆಗಮಿಸಿದ ಮಂಜುನಾಥ ಬೆಳ್ಳೂರು ಇವರು ಮಾತನಾಡಿ ಹಲವಾರು ದಿನಗಳಿಂದ ಸಂಘ ರಚಿಸುವ ಆಲೋಚನೆ ಇದ್ದು ಅದು ಈಗ ಕೈಗೂಡಿ ಬಂದಿದೆ. ಸಂಘದ ಪ್ರಾಂಶುಪಾಲರು, ಶಿಕ್ಷಕರು, ನಿಲಯಪಾಲಕರು ಎಂದು ಬೇರ್ಪಡಿಸದೇ ಒಟ್ಟಾರೆ ಎಲ್ಲಾ ನೌಕರರು ಒಗ್ಗಟ್ಟಾಗಿ ಖಾಯಂ ಸಂಘ ರಚಿಸಿರುವುದನ್ನು ಸ್ವಾಗತಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ಸವಿತಾ ಬೋರಟ್ಟಿ  ಪ್ರಾಚಾರ್ಯರು ಕಿರಾಚ, ಸಂಘದ ಉಪಾಧ್ಯಕ್ಷರಾದ ಶ್ರೀ ಸಿದ್ದು ಬಾಸಿಂಗದಾರ ಪ್ರಾಚಾರ್ಯರು ಮೊದೇವಶಾ ಹಾಗೂ ಸಂಘದ ಎಲ್ಲಾ ಭೋಧಕ, ಭೋಧಕೇತರ ಸದಸ್ಯರು ಹಾಜರಿದ್ದರು. ಕಾರ್ಯಕ್ರಮವನ್ನು ಶ್ರೀ ಅಹಮ್ಮದ್ ನೂರ್‍ಪಾಷಾ ನೀರೂಪಿಸಿದರು, ಶ್ರೀ ವಿಜಯಕುಮಾರ ಎಲ್ ಸ್ವಾಗತಿಸಿದರು, ಕೊನೆಯಲ್ಲಿ  ಮಹಾಂತೇಶ ಗುರಿಕಾರ ವಂದಿಸಿದರು.

Please follow and like us:
error