fbpx

ಮನುಷ್ಯನಿಗೆ ಹಣಕಾಸಿನ ಯೋಜನೆ ಅವಶ್ಯ – ಬಿ.ಸಿ.ಐಗೋಳ.

ಕೊಪ್ಪಳ-17- ಆಧುನಿಕ ಯುಗದಲ್ಲಿ ಮನುಷ್ಯ ಆದಾಯಕ್ಕಿಂತ ಖರ್ಚನ್ನು ಹೆಚ್ಚು ಮಾಡುತಿದ್ದು ಅದರಿಂದ ಮುಂದೆ ಅನೇಕ ತೊಂದರೆಗಳಿಗೆ ಸಿಲುಕುತಿದ್ದು ಆದ್ದರಿಂದ ಮನುಷ್ಯನಿಗೆ ಹಣಕಾಸಿನ ಅವಶ್ಯವಿದೆ ಎಂದು ಸೆಕೂರಿಟೀಸ್ ಅಂಡ್ ಎಕ್ಸಚೆಂಜ್ ಬೋರ್ಡ ಆಫ್ ಇಂಡಿಯಾ ಕೊಪ್ಪಳ ಸಂಪನ್ಮೂಲ ವ್ಯಕ್ತಿ  ಬಿ.ಸಿ.ಐಗೋಳ ಹೇಳಿದರು .
ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಕಾನೂನು iಹಾವಿದ್ಯಾಲಯ ಹಾಗೂ ಸೆಕೂರಿಟೀಸ್ ಅಂಡ್ ಎಕ್ಸಚೆಂಜ್ ಬೋರ್ಡ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ  ಆಶ್ರಯದಲ್ಲಿ ನೆಡದ ಹಣಕಾಸಿನ ಶಿಕ್ಷಣ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದರೆ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಬೇಕು ಭಾರತ ದೇಶ ಉಳಿತಾಯ ಪ್ರಮಾಣ ಮಾಡುವಲ್ಲಿ ಹಿಂದೆ ಉಳಿದಿದೆ ಕಾರಣ ಭಾರತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರ ಆದ್ದರಿಂದ ಯುವ ಪೀಳಿಗೆಗಳು ಆದ ನೀವು ಯಾವುದೇ ಹುದ್ದೆಯನ್ನು ಮಾಡಿದರು ಅದಕ್ಕೆ ಒಂದು ನಿರ್ದಿಷ್ಟ ಯೋಜನೆಯನ್ನು ಹಾಕಿಕೊಂಡು ಹಣಕಾಸಿನ ಪರಿಸ್ಥಿಯನ್ನು ಸು

ಧಾರಿಸಬೇಕಾದ ಅನಿವಾರ್ಯತೆ ಇಂದಿನ ಜನಾಂಗಕ್ಕೆ ಇದೆ. ಎಂದ ಅವರು ಭಾರತದಲ್ಲಿ ಸೀಮಾಂತದ ಉಪಭೋಗದ ಪದ್ಧತಿ ಕಡಿಮೆ ಇದೆ ಅಂದರೆ ಯಾವುದೇ ವ್ಯಕ್ತಿಗೆ ಬಂದಂತಹ ಆದಾಯವನ್ನು ಬಹುಬೇಗ ಖರ್ಚುಮಾಡುತ್ತೇವೆ ಇದರಿಂದ ಮನುಷ್ಯ ದುಂದು ವೆಚ್ಚಕ್ಕೆ ಕಾರಣವಾಗಿ ಮುಂದೆ ತಾನು ಅಭಿವೃದ್ದಿ ಹೊಂದಲು ಸಾಧ್ಯವಾಗುವದಿಲ್ಲ ಆದ್ದರಿಂದ ಹಣಕಾಸಿನ ವಿಷಯದಲ್ಲಿ ಒಂದು ಯೋಜನೆ ಗುರಿ ಇರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿ ಪ್ರಾಚಾರ್ಯರರು ಆದ ಡಾ: ಬಿ.ಎಸ್.ಹನಸಿ ವಹಿಸಿಕೊಂಡಿದ್ದರು,ಮುಖ್ಯ ಅಥಿತಿಯಾಗಿ ಹಿರಿಯ ಉಪನ್ಯಾಸ ಕೆ.ನಾಗಬಸಯ್ಯ ಉಪನ್ಯಾಸಕರು ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಸವರಾಜ ಎಸ್.ಎಂ ಹಾಗೂ ಉಪನ್ಯಾಸಕಿ ಶ್ರೀಮತಿ ಉಷಾದೇವಿ ಹಿರೇಮಠ ಸೇರಿದಂತೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ನೆರವೆರಿಸಿದರು. ಪ್ರಾರ್ಥನೆಯನ್ನು ವಿದ್ಯಾರ್ಥಿನಿ ಕುಮಾರಿ ಅಶ್ವೀನಿ ನೆರವೆರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಕುಮಾರಿ ಮಹಾಲಕ್ಷ್ಮೀ ನೇರವೆರಿಸಿಕೊಟ್ಟರು.

Please follow and like us:
error

Leave a Reply

error: Content is protected !!