ಪ್ರಗತಿ ಕೃಷ್ಣಾ ಬ್ಯಾಂಕ ಕೊಪ್ಪಳ ಪ್ರಾದೇಶಿಕ ಕಛೇರಿಯಿಂದ ಅಭಿಯಾನ.

ಕೊಪ್ಪಳ-೦೯- ನಗರದ ವಿವಿದ ಬೀದಿಗಳಲ್ಲಿ ಅಭಿಯಾನವನ್ನು ಹಮ್ಮಿಕೊಂಡಿತ್ತು. ಇತ್ತೀಚೆಗೆ ಹೊಸ ಖಾತೆಗಳನ್ನು ತೆರೆಯುವ ಹಲವಾರು ಅಭಿಯಾನಗಳು ನಡೆದಿವೆ. ಹೊಸ ಖಾತೆಗಳನ್ನು ತೆರೆಯುವ ಹುಮ್ಮಸ್ಸಿನಲ್ಲಿ ಚಾಲ್ತಿಯಲ್ಲಿಲ್ಲದ ಲಕ್ಷಾಂತರ ಖಾತೆಗಳು ಬ್ಯಾಂಕಿನಲ್ಲಿ ಹಾಗೆಯೇ ಉಳಿದಿವೆ. ಇದರಿಂದ ಬ್ಯಾಂಕಿನಲ್ಲಿ
    ಇದನ್ನರಿತ ಪ್ರಗತಿ ಕೃಷ್ಣಾ ಬ್ಯಾಂಕ ತನ್ನ ಹಳೆಯ ಇಂತಹ ಚಾಲ್ತಿಯಲ್ಲಿಲ್ಲದ ಎಸ್.ಬಿ/ ಸಿ.ಎ ಗ್ರಾಹಕರಿಗೂ ಇತ್ತೀಚಿನ ಬ್ಯಾಂಕಿನ ಮುಂದುವರೆದ ತಾಂತ್ರಿಕ ಸೇವೆಗಳನ್ನು ಅವರಿಗೂ ಕೂಡ ಒದಗಿಸುವ ದೃಷ್ಠಿಯಿಂದ ಅಭಿಯಾನವನ್ನು ಹಮ್ಮಿಕೊಂಡಿದ್ದು. ಪ್ರಾದೇಶಿಕ ಪ್ರಬಂದಕರಾದ ಎಮ್ ಅಶೊಕ ಹಸಿರು ನಿಶಾನೆ ತೋರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
    ಜನರಿಗೆ ಮಾಹಿತಿ ಕೊಡುವ ದೃಷ್ಠಿಯಿಂದ ಕೊಪ್ಪಳದ ಪ್ರಮುಖ ರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಬ್ಯಾಂಕಿನ ಸುತ್ತಮುತ್ತಲಿನ ಶಾಖೆಯ ಅಧಿಖಾರಿಗಳು ಸಿಬ್ಬಂಧಿ ವರ್ಗ ಹಾಗೂ ಗ್ರಾಹಕರು ರೋಡ್ ಶೋ ಮಾಡುವ ಮುಖಾಂತರ ಅಭಿಯಾನದ ಉದ್ದೇಶದ ಅರಿವು ಮೂಡಿಸಿದರು. ಅಲ್ಲದೇ ಗ್ರಾಹಕರಲ್ಲಿ ಖಾತೆಗಳ ಮರು ಚಾಲನೆಗಾಗಿ ಮನವಿ ಮಾಡಿಕೊಂಡರು.

ವ್ಯವಹರಿಸುವ ಮನಸ್ಸಿದ್ದರೂ ಅದರ ಬಗ್ಗೆ ಮಾಹಿತಿ ಯಿಲ್ಲದೇ ಬ್ಯಾಂಕಿನ ವ್ಯವಹಾರದಿಂದ ಹಲವಾರು ಗ್ರಾಹಕರು ವಂಚಿತರಾಗಿದ್ದಾರೆ.

Related posts

Leave a Comment