ಬಾಲಕ ಅಪಹರಣ ಶಂಕೆ – ಪತ್ತೆಗೆ ಸಹಕರಿಸಲು ವಿನಂತಿ.

ಕೊಪ್ಪಳ, ಫೆ.೦೨ (ಕ ವಾ) ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಮಕ್ಕಳ ತೆರೆದ ತಂಗುದಾಣದಿಂದ ಜ.೨೦ ರಂದು ಕಾಣೆಯಾಗಿರುವ ಅಲ್ತಾಫ್ ತಂದೆ ದಾವಲ್‌ಸಾಬ ಸೈಯ್ಯದ್ (೧೩) ಎಂಬ ಬಾಲಕನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಮಹಿಳಾ ಪಿ.ಎಸ್.ಐ ಫಕೀರಮ್ಮ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಅಲ್ತಾಫ್ ತಂದೆ ದಾವಲ್‌ಸಾಬ ಸೈಯ್ಯದ್ (೧೩) ಎಂಬ ಬಾಲಕನನ್ನು ಹೆಚ್ಚಿನ ಪೋಷಣೆಗಾಗಿ ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಮಕ್ಕಳಿಗಾಗಿ ತೆರೆದ ತಂಗುದಾಣಕ್ಕೆ ಕಳೆದ ಡಿ.೧೮ ರಂದು ದಾಖಲಿಸಲಾಗಿತ್ತು. ತಂಗುದಾಣದಲ್ಲಿ ಪೊಷಣೆ ಪಡೆಯುತ್ತಿದ್ದ ಬಾಲಕ ಜ.೨೦ ರಂದು ಬೆಳಿಗ್ಗೆ ೦೭.೦೦ ಗಂಟೆ ಸುಮಾರಿಗೆ ಕಾಣೆಯಾಗಿದ್ದು, ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕಾಗಿ ಅಪಹರಣ
ಮಾಡಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಕೊಪ್ಪಳ ನಗರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬಾಲಕನ ಚಹರೆ ವಿವರ ಈ ಕೆಳಗಿನಂತಿದೆ: ಹೆಸರು-
ಅಲ್ತಾಫ್ ತಂದೆ ದಾವಲ್‌ಸಾಬ ಸೈಯ್ಯದ್. ವಯಸ್ಸು: ೧೩. ಜಾತಿ: ಮುಸ್ಲಿಂ, ಸಾ||ಕೆ.ಇ.ಬಿ
ತಾಂಡಾ, ತಾ||ಇಚಿಡಿ, ಜಿ||ಬಿಜಾಪುರ. ತಂದೆ: ದಾವಲಸಾಬ. ತಾಯಿ: ಹಸೀನಾ. ವಿದ್ಯಾಭ್ಯಾಸ:
೨ನೇ ತರಗತಿ. ಎತ್ತರ: ೪.೬ ಅಡಿ. ತೆಳ್ಳನೆಯ ಮೈಕಟ್ಟು, ಸಾದಾಗಪ್ಪು ಮೈಬಣ್ಣ, ಕಪ್ಪು
ಕೂದಲು ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಬೂದು ಬಣ್ಣದ ಚೆಕ್ಸ್
ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚೆಹರೆಯುಳ್ಳ ಬಾಲಕನ
ಬಗ್ಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ನಗರ
ಪೊಲೀಸ್ ಠಾಣೆ, ಪೊಲೀಸ್ ಇನ್ಸ್‌ಪೆಕ್ಟರ್, ಮೊ: ೯೪೮೦೮೦೩೭೪೫, ಕೊಪ್ಪಳ ನಿಯಂತ್ರಣ
ಕೊಠಡಿ, ದೂರವಾಣಿ ಸಂಖ್ಯೆ: ೦೮೫೩೯-೨೩೦೧೦೦/೨೩೦೨೨೨ ಅಥವಾ ಕೊಪ್ಪಳ ನಗರ ಪೊಲೀಸ್ ಠಾಣೆ
ದೂರವಾಣಿ ಸಂಖ್ಯೆ: ೦೮೫೩೯-೨೨೦೩೩೩ ಇವರಿಗೆ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್
ಠಾಣೆಯ ಮಹಿಳಾ ಪಿ.ಎಸ್.ಐ ಫಕೀರಮ್ಮ ಅವರು ತಿಳಿಸಿದ್ದಾರೆ.

Please follow and like us:
error