ಕೊಪ್ಪಳ ಜಿಲ್ಲಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಕೆ.ಬಿ. ಬ್ಯಾಳಿ ಆಯ್ಕೆ.

ಜನೇವರಿ ೧೭ ಹಾಗೂ ೧೮ ರಂದು ಕೊಪ್ಪಳ ಜಿಲ್ಲಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ
ಕೊಪ್ಪಳ : ಕೊಪ್ಪಳ ಜಿಲ್ಲಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಬರುವ ಜ.೧೭ ಹಾಗೂ ೧೮ ರಂದು ಕೊಪ್ಪಳದ ಶ್ರೀ ಗವಿಮಠದ ಆವರಣದಲ್ಲಿ ಜರುಗಿಸಲಾಗುವುದು ಎಂದು ಜಿಲ್ಲಾ ಕ.ಸಾ.ಪ   ತಿಳಿಸಿದೆ. ಸಾಹಿತ್ಯ ಸಮ್ಮೇಳನದ  ಸ್ವಾಗತ ಸಮಿತಿಯ ಮಹಾ ಪೋಷಕರಾಗಿ ಗವಿಮಠದ ಪೂಜ್ಯಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳರವರನ್ನು ನೇಮಕಗೊಳಿಸಲಾಗಿದೆ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಶಾಸಕರು ವಿಧಾನ ಪರಿಷತ್ ಸದಸ್ಯರು ಸ್ವಾಗತ ಸಮಿತಿಯಲ್ಲಿ ಇರುತ್ತಾರೆ.
ಕೊಪ್ಪಳ ಜಿಲ್ಲಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಲಬುರ್ಗಾದ ಹಿರಿಯ ಸಾಹಿತಿ ಡಾ. ಕೆ.ಬಿ. ಬ್ಯಾಳಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಜರುಗಿದ  ಜಿಲ್ಲಾ ಕ.ಸಾ.ಪ ಕಾರ್ಯಕಾರಿ ಸಭೆಯಲ್ಲಿ ಸರ್ವಸಮ್ಮತದಿಂದ ಆಯ್ಕೆಗೊಳಿಸಲಾಗಿದೆ. ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರ ಅಧ್ಯಕ್ಷತೆಯಲ್ಲಿ ಸಭೆಸೇರಿದಾಗ ಜಿಲ್ಲಾ ಕ.ಸಾ.ಪ ಶತಮಾನೋತ್ಸವ ಆಚರಣಾ ಸಮಿತಿಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಶಿವಾನಂದ ಮೇಟಿ, ಅಕ್ಬರ ಕಾಲಿ ಮಿರ್ಚಿ, ಜಿಲ್ಲಾಕ.ಸಾ.ಪ ಗೌರವ ಕೋಶಾಧ್ಯಕ್ಷ ಆರ್.ಎಸ್. ಸರಗಣಾಚಾರ, ಗಂಗಾವತಿ ತಾಲೂಕ ಕ.ಸಾ.ಪ ಅಧ್ಯಕ್ಷ ಅಜಮೀರ ನಂದಾಪೂರ ಕುಷ್ಟಗಿ ತಾಲೂಕ ಕ.ಸಾ.ಪ ಅಧ್ಯಕ್ಷ ಚಂದಪ್ಪ ಹಕ್ಕಿ, ಕೊಪ್ಪಳ ಜಿಲ್ಲಾ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾದ ಎಸ್.ವಿ. ಪಾಟೀಲ್, ಸಂಘಸಂಸ್ಥೆ ಪ್ರತಿನಿಧಿ ಮಾರೇಶ ಮುಷ್ಟೂರು, ಜಿಲ್ಲಾ ವಾರ್ತಾ ಅಧಿಕಾರಿ ಬಿ.ವಿ.ತುಕರಾಂ, ಇನ್ನಿತರರು ಉಪಸ್ಥಿತರಿದ್ದರು.

Leave a Reply