ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

  ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ|| ಮಹಾಂತೇಶ ಮಲ್ಲನಗೌಡರ ಸ್ಥಾಪಿಸಿರುವ ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಜಿಲ್ಲೆಯ  ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ. 
   ದತ್ತಿ ಪ್ರಶಸ್ತಿಗೆ ಕಳೆದ ೨೦೧೪ ರಲ್ಲಿ ಜಿಲ್ಲೆಯಲ್ಲಿ ಪ್ರಕಟಗೊಂಡಿರುವ ಜಿಲ್ಲೆಯ ಲೇಖಕರ ಯಾವುದೇ ಸೃಜನಶೀಲ ಕೃತಿಯನ್ನು ಕಳುಹಿಸಬಹುದಾಗಿದೆ. ಅರ್ಜಿಯನ್ನು ಮೂರು ಪ್ರತಿಯಲ್ಲಿ ಅಕ್ಬರ್.ಸಿ.ಕಾಲಿಮಿರ್ಚಿ, ಗೌರವ ಕಾರ್ಯದರ್ಶಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ, ಭಾಗ್ಯನಗರ-೫೮೩೨೩೮ ಇವರಿಗೆ ಜೂ.೧೧ ರೊಳಗಾಗಿ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ೯೦೦೮೫೮೫೪೮೨ ಅಥವಾ ೯೭೩೧೩೨೭೮೨೯ ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಪ್ಪ ಮ.ನಿಂಗೋಜಿ  ತಿಳಿಸಿದ್ದಾರೆ.
Please follow and like us:
error