ಅಧಿಕಾರಕ್ಕಾಗಿ ಮತದಾರರಿಗೆ ಸುಳ್ಳು ಆಶ್ವಾಸನೇ ನೀಡಲಾರೆ: ಪ್ರದೀಪಗೌಡ

 ಅಧಿಕಾರಕ್ಕಾಗಲಿ ಯಾವುದೇ ಕಾರಣಕ್ಕೂ ಮತದಾರರಿಗೆ ಸುಳ್ಳು ಆಶ್ವಾಸನೇ, ಭರವಸೆ ನೀಡಲು ತಾವು ಸಿದ್ಧವಿಲ್ಲವೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಸ್ಪಷ್ಟವಾಗಿ ಹೇಳಿದರು.

ಅವರು ಬುಧವಾರ ತಾಲೂಕಿನ ಬೇಳೂರು ಗ್ರಾಮದಲ್ಲಿ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ನಮ್ಮದು ಸುಸಂಸ್ಕೃತ ಹಾಗೂ ಪ್ರತಿಷ್ಟಿತ ಕುಟುಂಬವಾಗಿದ್ದು ಯಾವುದೇ ಕಾರಣಕ್ಕೂ ಅದಕ್ಕೆ ದಕ್ಕೆ ಬರದಂತೆ ನಡೆದುಕೊಳ್ಳುವುದೇ ನಮ್ಮ ಧೇಯವೆಂದರು. ಅಧಿಕಾರ ಬಂದರು, ಬರದಿದ್ದರೂ ಯಾವತ್ತು ಹೀಗೆ ಇರುವುದಾಗಿ ಜನತೆಯಲ್ಲಿ ಪ್ರಮಾಣಿಕರಿಸಿದರು. ತಮ್ಮಯ ಸೇವೆ ಮಾಡಲು ಅವಕಾಶ ನೀಡುವಂತೆ ಜನತೆಯಲ್ಲಿ ಮನವಿ ಮಾಡುತ್ತಿದ್ದೇನೆ. ಅವಕಾಶ ನೀಡಿದಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಮೂಲಕ ನುಡಿದಂತೆ ನಡೆದು ಮನೆತನದ ಗೌರವ ಹೆಚ್ಚಿಸುವಂತ ಹ ಹಾಗೂ ಕ್ಷೇತ್ರದ ಜನತೆಯೇ ನಿಬ್ಬೆರಗಾಗುವಂತಹ ಆಢಳಿತ ನೀಡುವದಾಗಿ ಅವರಿಲ್ಲಿ ಭರವಸೆ ನೀಡಿದರು. 
ಇದೇ ವೇಳೆ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಂ.ಡಿ.ಹುಸೇನ ಮಾಸ್ಟರ್, ಟಿ.ಟಿ. ಪಾಟೀಲ್ ಮಾತನಾಡಿ, ಕವಲೂರಿನ ಕಿಲ್ಲೆದ್ ಗೌಡ್ರ ವಂಶ ಬರಿ ನೀಡಿದ ವಂಶವೇ ಹೋರತೂ ಬೇಡಿದಲ್ಲಾ ಇದು ಇಡೀ ರಾಜ್ಯಕ್ಕೆ ತಿಳಿದಿದೆ. ಅವರ ಸರಳ ಸಜ್ಜನಿಕೆ ವ್ಯಕ್ತಿತ್ವದ  ಗುಣಗಳಿಂದಾಗಿಯೇ ಅವರನ್ನು ದೇವಗೌಡರು ಕೈಬಿಡುತ್ತಿಲ್ಲ. ಅದೇ ರೀತಿ ಮತದಾರರು ಈ ಬಾರಿ ಅವರನ್ನು ಕೈ ಹಿಡಿಯುವಂತೆ ಅವರಿಲ್ಲಿ ಮನವಿ ಮಾಡಿದರು. 
ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಮುಖಂಡರಾದ ರಮೇಶ ಎಂ. ಗುಡ್ಲಾನೂರು, ಪಕೀರಗೌಡ್ರ, ಮಂದಿನಗೌಡ್ರ, ಡಾ. ಮಲ್ಲಿಕಾರ್ಜುನ ಪಕೀರಪ್ಪ ಸುಣಗಾರ, ಕಾಮಣ್ಣ, ನಿಂಗಜ್ಜ ತಳವಾರ, ಗವಿಸಿದ್ದಪ್ಪ ತಳವಾರ ಇತರ ಮುಖಂಡರ ನೇತೃತ್ವದಲ್ಲಿ ಮುದೇಪ್ಪ, ನೀಲಪ್ಪ, ಹನುಮಪ್ಪ, ಯಗಪ್ಪ, ಗಾಳೆಪ್ಪ, ಪಕೀರಪ್ಪ, ದುರಗಪ್ಪ, ದ್ಯಾವಪ್ಪ, ಯಲ್ಲಪ್ಪ, ಸಣ್ಣ ದೇವಪ್ಪ, ನಿಂಗಪ್ಪ, ಕುಂಗ ಹನುಮಪ್ಪ, ರಾಮಪ್ಪ, ಯಮನೂರಪ್ಪ, ಗಾಳಿ ದುರಗಪ್ಪ, ಬಸವರಾಜ ಮಾದಣ್ಣವರ್, ಯಲ್ಲಪ್ಪ ಮಾದಣ್ಣನವರ್, ರಮೇಶ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment