ಪ್ರಸಾಧನ ಹಾಗೂ ಬೆಳಕು ವಿನ್ಯಾಸ ವಿಷಯದಡಿ ಒಂದು ದಿನದ ಶಿಬಿರ

 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸಕ್ತ ಸಾಲಿಗೆ ಬರುವ ಸೆಪ್ಟೆಂಬರ್ ೧೬ ರಂದು ನೃತ್ಯ ಪ್ರಕಾರಕ್ಕೆ ಸಂಬಂಧಿಸಿದ ಪ್ರಸಾಧನ ಹಾಗೂ ಬೆಳಕು ವಿನ್ಯಾಸ ಎಂಬ ವಿಷಯದಲ್ಲಿ ಒಂದು ದಿನದ ಶಿಬಿರವನ್ನು ಬೆಂಗಳೂರಿನ ಕನ್ನಡ ಭವನದ ಎರಡನೇ ಮಹಡಿಯ ವರ್ಣ ಆರ್ಟ್ ಗ್ಯಾಲರಿ (ಕರ್ನಾಟಕ ಲಲಿತಕಲಾ ಅಕಾಡೆಮಿ) ಯಲ್ಲಿ ಆಯೋಜಿಸಿದೆ.
  ಈ ಶಿಬಿರ ಸಂಪೂರ್ಣ ಉಚಿತವಾಗಿದ್ದು ಗರಿಷ್ಠ ೩೦ ಮಂದಿ. ಶಿಬಿರಾರ್ಥಿಗಳಿಗೆ ಅವಕಾಶವಿದೆ. ಆದ್ಯತೆಮೇರೆಗೆ ಶಿಬಿರಾರ್ಥಿಗಳ ಹೆಸರನ್ನು ನೋಂದಾಯಿಸಿಕೊಳ್ಳಲಾಗುವುದು. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ರಂಗಭೂಮಿಯ ಖ್ಯಾತ ಬೆಳಕು ಮತ್ತು ಪ್ರಸಾಧನ ತಜ್ಞ ಚಂದ್ರಕುಮಾರಸಿಂಗ್ ಅವರು ಶಿಬಿರ ನಡೆಸಿಕೊಡಲಿದ್ದಾರೆ. ಆಸಕ್ತಿಯುಳ್ಳ ಕಲಾವಿದರು ಸೆ.೧೦ ರ ಒಳಗಾಗಿ ಒಂದು ಬಿಳಿಹಾಳೆಯಲ್ಲಿ ಸ್ವವಿವರ (ಹೆಸರು, ವಿಳಾಸ, ಮೊಬೈಲ್ ಸಂಖೈ, ಪ್ರಕಾರ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳನ್ನು ಪಾಸ್‌ಪೋರ್ಟ್ ಭಾವಚಿತ್ರದೊಂದಿಗೆ) ಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-೨ (ದೂರವಾಣಿ ನಂ: ೦೮೦-೨೨೨೧೫೦೭೨) ಇಲ್ಲಿಗೆ ಕಳುಹಿಸಿಕೊಡಬಹುದಾಗಿದೆ. ಬೇರೆ ಊರುಗಳಿಂದ ಬರುವ ಶಿಬಿರಾರ್ಥಿಗಳಿಗೆ ವಸತಿ ಸೌಕರ್ಯ ಹಾಗೂ ವಾಸ್ತವ ಪ್ರಯಾಣ ವೆಚ್ಚೆವನ್ನು ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ತಿಳಿಸಿದ್ದಾರೆ. 
Please follow and like us:
error