ಸಿದ್ದಗಂಗಯ್ಯನವರ ಆಯೋಗ ವರದಿ ಜಾರಿಗೆ ತರಲು ಒತ್ತಾಯ

ಸ್ವಾಭಿಮಾನ ಬಿಟ್ಟು ಸಮಾಜ ಕಟ್ಟುವ ಕೆಲಸ ಮಾಡಿ : ಶಂಕರಗೌಡ್ರು 
ಕೊಪ್ಪಳ,ಜ.೧೩: ಪ್ರತಿಯೊಬ್ಬ ಮನುಷ್ಯನು ತನ್ನ ಸಮಾಜದ ಬಗ್ಗೆ ಕಳಕಳಿ ಹೊಂದುವುದು ಅವಶ್ಯಕ ತನ್ನ ಸ್ವಾಭಿಮಾನವನ್ನು ಬಿಟ್ಟು ಸಮಾಜವನ್ನು ಕಟ್ಟುವ ಕೆಲಸ ಮಾಡಿದರೆ ಸಮಾಜ ಸಮಗ್ರ ಅಭಿವೃದ್ಧಿಯಾಗುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಸ್ವಾಭಿಮಾನಕ್ಕಿಂತ ಸಮಾಜ ಮುಖ್ಯವಾಗಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಶಂಕರಗೌಡ್ರು ಪಾಟೀಲ್ ವಕೀಲರು ಹೇಳಿದರು. 
ಅವರು ಕೊಪ್ಪಳ ನಗರದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ಆದಿಬಣಜಿಗರ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತ ಸಂಘಟನೆಯಿಂದ ಮಾತ್ರ ಸಮಾಜ ಕಟ್ಟಲು ಸಾಧ್ಯವಾಗಿದೆ. ಸುಮಾರು ೬ ಸಾವಿರ ಜಾತಿಗಳಿವೆ ಅದರಲ್ಲಿ ಅತ್ಯಂತ ಕಡಿಮೆ ಇರುವ ಜನಸಂಖ್ಯೆಯ ಸಮಾಜ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ಇವೆ ಆದರೆ ೪೦ ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ನಮ್ಮ ಆದಿಬಣಜಿಗ ಸಮಾಜ ಸರ್ಕಾರದ ಮೀಸಲಾತಿ ಪಟ್ಟಿಯಿಂದ ವಂಚಿತಗೊಂಡಿದೆ ಎಂದ ಅವರು ಆದಿಬಣಜಿಗ ಸಮಾಜವನ್ನು ಈ ಹಿಂದೆ ಬಿಜೆಪಿ ಸರ್ಕಾರ ೨ಎ ಪ್ರವರ್ಗಕ್ಕೆ ಒಳಮೀಸಲಾತಿ ನೀಡಲು ಸಮ್ಮತಿಸಿತ್ತು. ಆದರೆ ಇನ್ನಿತರ ಉಪಜಾತಿಗಳ ತಕರಾರಿನಿಂದ ಸರ್ಕಾರ ಅದನ್ನು ಹಿಂದೆ ಪಡೆಯಿತು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ  ನಮ್ಮ ಸಮಾಜಕ್ಕೆ ಒಳಮೀಸಲಾತಿ ನೀಡಿ ರಾಜಕೀಯವಾಗಿ, ಆರ್ಥಿತಿಕವಾಗಿ,ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಲಾಗುವುದು. ಸರ್ಕಾರಕ್ಕೆ ನ್ಯಾಯ ಸಮ್ಮತ ಬೇಡಿಕೆ ಈಡೇರಿಸಲು ಸಮಾಜ ಬಾಂಧವರು ಒಗ್ಗಟಾಗಿ ನಮ್ಮ ಸಂಘಟನೆ ಪ್ರದರ್ಶನ ಮಾಡುವುದರ ಮೂಲಕ ಸರ್ಕಾರದ ಗಮನ ಸೆಳೆಯಲ್ಲು ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದರು. 
ಮುಂಬರುವ ಜಾತಿವಾರು ಗಣತಿಯಲ್ಲಿ ಸಮಾಜ ಬಾಂಧವರು ಧರ್ಮ,ವೀರಶೈವ,ಜಾತಿ,ಆದಿಬಣಜಿಗ ಎಂದು ನಮೂದಿಸಬೇಕು ಅಂದಾಗ ಮಾತ್ರ ಔದ್ಯೋಗಿಕ ಸೌಲಭ್ಯ ಪಡೆಯಲು ೩ಎ ಪ್ರವರ್ಗ ಶೈಕ್ಷಣಿಕ ಪಡೆಯಲು ೨ಎ ಪ್ರವರ್ಗದಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಕಾರಣ ಸಮಾಜ ಬಾಂಧವರು ಜಾಗ್ರತೆ ವಹಿಸಿ ಕೆಲಸಮಾಡಬೇಕು. ೨೦೦೫ರ ಸಿದ್ಧಗಂಗಯ್ಯನವರು ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದಾಗ ಅವರ ವರದಿಯಂತೆ ಆದಿಬಣಜಿಗ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಶಿಫಾರಸ್ಸು ಮಾಡಿದ್ದರು. ಆದರೆ, ಸರ್ಕಾರ ಮತ್ತೊಂದು ಆಯೋಗದ ವರದಿ ಸಲುವಾಗಿ ಕಾಯಬೇಕಿಲ್ಲ ಮುಂಬರಲಿರುವ ಲೋಕಸಭಾ ಸಾರ್ವತ್ರಿಕ ಚುನವಣೆಯ ಒಳಗಾಗಿ ಸಮಾಜವನ್ನು ೨ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಸಮಾವೇಶದ ಪರವಾಗಿ ಒತ್ತಾಯಿಸುತ್ತೆನೆಂದು ಸಮಾಜದ ರಾಜಾಧ್ಯಕ್ಷ ಶಂಕರಗೌಡ್ರು ಪಾಟೀಲ್ ವಕೀಲರು ತಿಳಿಸಿದರು.
ಗದಗ ಜಿಲ್ಲಾಧ್ಯಕ್ಷ ವಿ.ಎನ್ ನೀಲಪ್ಪಗೌಡ್ರು ಮಾತನಾಡಿ ನಮ್ಮ ಸಮಾಜದ ಆಂತರಿಕ ಭಿನ್ನಾಭಿಪ್ರಾಯಗಳಿಂದ ಸಮಾಜದ ಸಂಘಟನೆಗೆ ಇನ್ನೆಡೆ ಉಂಟಾಗಿದೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಸಂಘಟನೆಗೆ ಸಮಾಜ ಬಾಂಧವರು ಮುಂದಾಗಬೇಕು. ನಮ್ಮ ಸಮಾಜದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ದಿವಂಗತ ಮಲ್ಲಿಕಾರ್ಜುನ ದಿವಟರ್‌ರವರು ಹಾಕಿಕೊಟ್ಟ ಮಾರ್ಗದರ್ಶನದ ಮೇಲೆ ನಾವೇಲ್ಲರೂ ಸಮಾಜವನ್ನು ಮುನ್ನೆಡೆಸಿಕೊಂಡು ಹೋಗಬೇಕಾಗಿದೆ. ಸಮಾಜದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತುಕೊಂಡು ಸಮಾಜ ಸಂಘಟನೆಗೆ ಮುಂದಾದರೆ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ದಿವಂಗತ ದಿವಟರ್‌ರವರ ಆತ್ಮಕ್ಕೂ ಕೂಡ ಶಾಂತಿ ಸಿಗುತ್ತದೆ ಎಂದ ಅವರು ಪೂರ್ವಕಾಲದಿಂದ ಇರುವ ನಮ್ಮ ಆದಿಬಣಜಿಗ ಸಮಾಜ ಶಾಲಾ ಧಾಖಲಾತಿಗಳಲ್ಲಿ ತಮ್ಮ ತಮ್ಮ ಮಕ್ಕಳಿಗೆ ವೀರಶೈವ ಆದಿಬಣಜಿಗ ಎಂದು ಬರೆಯಿಸಬೇಕು. ಅಂದಾಗ ಮಾತ್ರ ಸಮಾಜದ ನಿಖರವಾಗ ಅಂಕಿಸಂಖ್ಯೆಗಳು ಸಿಗಲಿದೆ. ಇದರಿಂದ ಸಮಾಜದ ಸಂಘಟನೆಗೆ ಇನ್ನಷ್ಟು ಪುಷ್ಠಿ ಸಿಗಲಿದೆ. ಈ ದಿಸೆಯಲ್ಲಿ ಸಮಾಜ ಬಾಂಧವರು ಶ್ರಮಿಸಬೇಕು. ಸಮಾಜದ ಬೆಳವಣಿಗೆಗಾಗಿ ಸಮಾವೇಶ ಆಚರಣೆ ಮಾಡುವುದು ಸರಿಯಷ್ಟೆ ಆದರೆ, ಸಮಾವೇಶದಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸಮಾಜದ ಒಗ್ಗಟ್ಟಿನಿಂದ ಸಂಘಟನೆ ಬೆಳೆಯುತ್ತದೆ. ಸಂಘಟನೆ ಬೆಳೆದರೆ ಸರ್ಕಾರದ ಗಮನ ಸೆಳೆಯುತ್ತದೆ. ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರೆ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗಾಗಿ ಸಮಾಜ ಸಂಘಟನೆ ಬಲ ನೀಡುತ್ತದೆ ಎಂದು ನೀಲಪ್ಪಗೌಡ್ರು ಹೇಳಿದರು. 

ಇನ್ನೊರ್ವ ಸಮಾಜದ ಮುಖಂಡ ಯಲ್ಲಪ್ಪ ಕಾಟ್ರಳ್ಳಿ ಮಾತನಾಡಿ ಸಮಾಜ ಕಟ್ಟುವ ಕೆಲಸಕ್ಕೆ ಯುವಕ ಶಕ್ತಿ ಬಹಳ ಮುಖ್ಯ ಯುವಕರು ಸಕ್ರಿಯಾವಾಗಿ ಸಮಾಜ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಶ್ರಮಿಸಬೇಕು ಯಾವುದೇ ಅಡೆತಡೆಗಳಿಂದ ಭಿನ್ನಾಭಿಪ್ರಾಯ ಉದ್ಭವಿಸಬಹುದು ಅದಕ್ಕೆ ಕಿವಿಗೊಡದೆ ಸಮಾಜದ ಹಿರಿಯರ ಮಾರ್ಗದರ್ಶನ ಪಡೆದು ಸಮಾಜ ಕಟ್ಟುವ ಕೆಲಸ ನಿರಂತರವಾಗಿ ನಡೆಯಬೇಕು ಹಿರಿಯರು ಸಮಸ್ಯೆ, ಭಿನ್ನಾಭಿಪ್ರಾಯಗಳಿಗೆ ಮಹತ್ವ ಕೊಡದೆ ಯುವ ಜನಾಂಗಕ್ಕೆ ಬುದ್ಧಿ ಹೇಳಿ ಮಾರ್ಗದರ್ಶನ ನೀಡಬೇಕು. ಸಮಾಜದಲ್ಲಿ ಯಾವುದೇ ಸ್ಥಾನಮಾನ ಬಯಸದೆ ನಿಸ್ವಾರ್ಥ ಸೇವೆ ಮಾಡಿದಾಗ ಅದರಿಂದ ಸಮಾಜಕ್ಕೆ ಒಳ್ಳೆದಾಗುತ್ತದೆ. ಈ ದಿಸೆಯಲ್ಲಿ ಯುವಕರು ಸಮಾಜ ಸಂಘಟನೆ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಯಲ್ಲಪ್ಪ ಕಾಟ್ರಳ್ಳಿ ಯುವಜನಾಂಗಕ್ಕೆ ಕರೆ ನೀಡಿದರು. 
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರಾಜ್ಯ ಉಪಾಧ್ಯಕ್ಷರಾದ ಆರ್.ಜಿ.ಜುಳಕಿ ಗದಗ, ಜಿ.ಮಲ್ಲಿನಾಥ ಹೊಸಪೇಟೆ, ಗುರುಬಸಪ್ಪ ಪಾಟೀಲ್ ಗುಲ್ಬರ್ಗಾ, ಎಸ್.ಎಸ್.ಡಂಗಿ ಹುಬ್ಬಳ್ಳಿ, ಗುರುಪಾದಗೌಡ ಬಿರಾದಾರ ಚಿಕ್ಕೋಡಿ, ಯಾದಗಿರಿ ಜಿಲ್ಲಾಧ್ಯಕ್ಷ ಬಸವರಾಜ ಕೆಂಬಾರಿ ಶಾಹಪುರ, ಕೋಶಾಧ್ಯಕರಾದ ಶ್ರೀಮಂತ ಸಾಲಗಾರ ರಾಯಬಾಗ, ವೈಜನಾಥ ದಿವಟರ್, ಮಹಾದೇವಪ್ಪ ಕೌಲಗಿ, ಸಿದ್ದಪ್ಪ ಕಾಟ್ರಳ್ಳಿ, ಪರಮಾನಂದ ಯಾಳಗಿ, ಮುದಕಪ್ಪ ಉಮಚಗಿ, ಗುರುಬಸಪ್ಪ ದಿವಟರ ಸೇರಿದಂತೆ ಇತರರು ಉಪಸ್ಥಿತರಿದ್ದರು. 
ಕಾರ್ಯಕ್ರಮದ ಪ್ರಾರಂಭದಲ್ಲಿ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜದ ಸಂಸ್ಥಾಪಕ ಅಧ್ಯಕ್ಷ ಮಾಜಿ ಶಾಸಕ ದಿ.ಮಲ್ಲಿಕಾರ್ಜುನ ದಿವಟರ ಭಾವಚಿತ್ರಕ್ಕೆ ಪುಷ್ಟಗುಚ್ಚವಿಟ್ಟು ನಮಿಸಲಾಯಿತು. ಪ್ರಾರಂಭದಲ್ಲಿಯೇ ಮಹೇಂದ್ರಗೌಡ ಹಳೇಮನಿ ಪ್ರಾರ್ಥಿಸಿದರು. ಮಂಜುನಾಥ ದಿವಟರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಗುರುಬಸಪ್ಪ ಪಾಟೀಲ್ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೋಮನಗೌಡ್ರ ನಿರೂಪಿಸಿದರು.  

Leave a Reply