ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ,
ನ.೨೪ (ಕ ವಾ) ಕೊಪ್ಪಳ ನಗರದ ಕಿಮ್ಸ್ ಆಸ್ಪತ್ರೆಯ ಮುಂದೆ ಇರುವ
ಗದಗ-ಹೊಸಪೆಟೆ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವಾಗ ಅಪಘಾತದಿಂದ ಮೃತಪಟ್ಟಿರುವ
ಒರಿಸ್ಸಾ ರಾಜ್ಯದ ಗಣಪತಿ ಮಾಜಿ ಎಂಬ ವ್ಯಕ್ತಿಯ ವಾರಸುದಾರರ ಗುರುತು ಪತ್ತೆಗೆ
ಸಹಕರಿಸುವಂತೆ ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ
ಮಾಡಿದ್ದಾರೆ.
     ಒರಿಸ್ಸಾ ರಾಜ್ಯದವನೆಂದು ಗುರುತಿಸಲಾದ ಗಣಪತಿ ಮಾಜಿ ಈತನು
ನ.೨೧ ರಂದು ಬೆಳಿಗ್ಗೆ ೪.೩೦ ಗಂಟೆಗೆ ಕೊಪ್ಪಳ ನಗರದ ಕಿಮ್ಸ್ ಆಸ್ಪತ್ರೆಯ ಮುಂದೆ ಇರುವ
ಗದಗ-ಹೊಸಪೆಟೆ ರಾಷ್ಟ್ರೀಯ ಹೆದ್ದಾರಿ-೬೩ ನ್ನು ದಾಟುತ್ತಿರುವಾಗ ಲಾರಿಯಿಂದ ಅಪಘಾತಗೊಂಡು
ಮೃತಪಟ್ಟಿದ್ದು, ಈ ಕುರಿತು ಕೊಪ್ಪಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಾಡಿಕೊಳ್ಳಲಾಗಿದೆ. ಮೃತನು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಅಲ್ಲಿ ತನ್ನ
ಹೆಸರನ್ನು ಗಣಪತಿ ಮಾಜಿ, ಓರಿಸ್ಸಾ ರಾಜ್ಯ ಎಂದು ಬರೆಸಿದ್ದಾನೆ. ಮೃತನ ಚಹರೆ ವಿವರ
ಇಂತಿದೆ. ಹೆಸರು : ಗಣಪತಿ ಮಾಜಿ, ವಯಸ್ಸು : ೩೫-೪೦ ವರ್ಷ, ಎತ್ತರ :೫.೬ ಅಡಿ, ಸಾಧಾರಣ
ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ, ಕಪ್ಪು ತಲೆಕೂದಲು, ಹಿಂದಿ ಮತ್ತು ಓಡಿಸ್ಸಿ
ಭಾಷೆಯನ್ನು ಮಾತನಾಡುತ್ತಾನೆ, ಒಂದು ಪರ್ಪಲ್ ಬಣ್ಣದ ಲೈನಿಂಗ್ ಇರುವ ಟೀ ಶರ್ಟ್, ವಿವಿಧ
ಬಣ್ಣಗಳ ಮಿಶ್ರಿತ ಫುಲ್ ತೋಳಿನ ಅಂಗಿ, ಆಕಾಶ ನೀಲಿ ಬಣ್ಣದ ಅಂಡರ್‌ವೇರ್ ಮತ್ತು ಒಂದು
ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಅಥವಾ
ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ನಗರದ ಸಂಚಾರ ಪೊಲೀಸ್ ಠಾಣೆ ಪಿ.ಎಸ್.ಐ
ಬೂದೆಪ್ಪ, ಮೊ : ೯೯೦೨೫೭೪೨೨೩ ಇವರಿಗೆ ಅಥವಾ ನಿಯಂತ್ರಣ ಕೊಠಡಿಗೆ ಮಾಹಿತಿ ತಿಳಿಸುವಂತೆ
ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಕೋರಿದ್ದಾರೆ.

Leave a Reply