ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಕೊಪ್ಪಳ-೧೬- ಸೋಮವಾರ ಬೆಳೆಗ್ಗೆ ೧೦.೩೦ಕ್ಕೆ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳದ ಗೊಂದೋಳ್ಳಿ ಸಮಾಜ, ಗೋಲ್ಲರು (ಯಾದವ) ಸಮಾಜ, ಖಾಟೀಕ್ ಸಮಾಜ, ಕೊರವರ ಸಮಾಜ, ಮೇದಾರ ಸಮಾಜ, ಸಮಗಾರ ಸಮಾಜ, ಭೋವಿ ಹಾಗೂ ಮೋಚಿ ಸಮಾಜದ ಅನೇಕ ಮುಖಂಡರು ಅಭಿಮಾನಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿ ಹಾಗೂ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರ ನೇತ್ರುತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಸಮಾರಂಭಕ್ಕೆ ಪಕ್ಷದ ಚುನಾಯಿತ ಪ್ರತಿನಿಧಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು, ಭಾಗವಹಿಸಿ ಪಕ್ಷಸೇರ್ಪಡೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ ಪತ್ರಿಕಾ ತಿಳಿಸಿರುತ್ತಾರೆ.
Please follow and like us:
error