ಅಂಗವಿಕಲರಿಗೆ ಅಗೌರವ


ದಿ ೨೨. ರಂದು ವಿಶ್ವ ಅಂಗವಿಕಲರ ದಿನಾಚರಣೆಯ ಪೂರ್ವಭಾವಿ ಸಭೆಯ ಜಿಲ್ಲಾ ಮಟ್ಟದ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು, ಆದರೆ ಎಲ್ಲಾ ಜಿಲ್ಲಾ ಅಧಿಕಾರಿಗಳ ಈ ಪೂರ್ವಭಾವಿ ಸಭೆಗೆ ಸಂಪೂರ್ಣ ಗೈರು ಹಾಜರಿದ್ದರಿಂದ ಕಾಟಾಚಾರಕ್ಕೆ ಎಂಬಂತೆ ಸಭೆಯ ಔಪಚಾರಿಕವಾಗಿ ನಡೆದು ಜಿಲ್ಲೆಯ ಎಲ್ಲಾ ಸಮಸ್ತ ಅಂಗವಿಕಲರಿಗೆ ಅಗೌರವ ತೋರಿಸಿದೆ.
    ದೊಡ್ಡ ದೊಡ್ಡ ಮಹಾನ ವ್ಯಕ್ತಿಗಳ ದಿನಾಚರಣೆ ಅಥವಾ ಜಯಂತಿಯನ್ನು ಉದಾ: ಕನದಾಸ ಜಯಂತಿ, ವಾಲ್ಮಿಕಿ ಜಯಂತಿ, ಅಂಬೇಡ್ಕರ ಜಯಂತಿ ಗಳನ್ನು ಜಿಲ್ಲಾಡಳಿತ ಶ್ರದ್ಧೆಯಿಂದ ಮತ್ತು ಅದ್ದೂರಿಯಾಗಿ ಆಚರಿಸುತ್ತಾ ಬಂದಿದೆ. ಆದರೆ ಸಮುದಾಯದ ಒಂದು ಭಾಗವಾದ ಅಂಗವಿಕಲರ ಜಯಂತಿ ದಿನಾಚರಣೆಯ ಆಚರಣೆಗೆ ಜಿಲ್ಲಾಡಳಿತ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ, ಇದೂವರಿಗೆ ಜಿಲ್ಲಾಡಳಿತ ಈ ಬಗ್ಗೆ ಚರ್ಚೆ ಕೂಡಾ ನಡೆಸಿಲ್ಲ, ಇನ್ನೂಳಿದ ಜಯಂತಿಗೆ ಕೊಡುವ ಪ್ರಾಶಸ್ತ್ಯವನ್ನು ಈ ದಿನಾಚರಣಗೆ ಜಿಲ್ಲಾಡಳಿತ ಏಕೆ? ಗಮನ ಕೊಡುತ್ತಿಲ್ಲಾ ಎಂದು ನಮಗೆ ತುಂಬಾ ನೋವಿನ ಸಂಗತಿ. ಈ ಬೆಳವಣಿಗೆಯು ಅಂಗವಿಕಲರ ಬಗ್ಗೆ ಜಿಲ್ಲಾಡಳಿತ ಇಟ್ಟಿರುವ ಗೌರವ ಎಷ್ಟು? ಎಂದು ತಿಳಿಯುತ್ತಿದೆ. ಈ ಕೂಡಲೆ ಜಿಲ್ಲಾಡಳಿತ ಎಚ್ಛೆತ್ತುಕೊಂಡು ಮುಂದೆ ನಡೆಯುವ ಅಂಗವಿಕಲರ ಇನಾಚರಣೆಯನ್ನು ಅದ್ದೂರಿಯಿಂದ ನಡೆಸಬೇಕು ಇಲ್ಲವಾದರೆ ಡಿಸೆಂಬರ ೩ ನೇ ತಾರಿಖಿಗೆ ನಡೆಯುವ ವಿಶ್ವ ಅಂಗವಿಕಲರ ದಿನಾಚರಣೆಯನ್ನು ನೆಡೆಯಲು ನಾವು ಬಿಡುವುದಿಲ್ಲ, ಆ ದಿನ ಜಿಲ್ಲೆಯ ಎಲ್ಲಾ ಅಂಗವಿಕಲರು ಜಿಲ್ಲಾಡಳಿತ ಮುಂದೆ ಧರಣಿ ನಡೆಸಬೆಕಾಗುತ್ತದೆ. ಅಂಗವಿಕಲರನ್ನು ಅಗೌರವದಿಂದ ಕಾಣುತ್ತಿರುವ ಜಿಲ್ಲಾಡಳಿತ ಕ್ರಮವನ್ನು ಜಿಲ್ಲಾ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ಪ್ರಧಾನ ಕಾರ್ಯದರ್ಶಿ ಶರಣಪ್ಪ ಆರ್ ವಡ್ಡರ ಅವರು ಖಂಡಿಸಿದ್ದಾರೆ.

Please follow and like us:
error