ಹಕಾರಿ ಸಂಸ್ಥೆಗಳನ್ನು ಬಲಪಡಿಸಲು ಪ್ರಯತ್ನಸುವೆ-ಶೇಖರಗೌಡ ಮಾಲಿಪಾಟೀಲ್.

ಕೊಪ್ಪಳ -12- ರಾಜ್ಯದ ಸಹಕಾರ ತರಬೇತಿ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಹಕಾರಿ  ಸಂಸ್ಥೆಗಳನ್ನು ಬಲಪಡಿಸಲು ಪ್ರಯತ್ನ ಮಾಡುವುದಾಗಿ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ಅವರು  ನಗರದ  ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಜಿಲ್ಲಾ ಶಾಖೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈಗಾಗಲೇ ಎಂಟು ಸಹಕಾರಿ ತರಬೇತಿ ಸಂಸ್ಥೆಗಳಿವೆ ಅವುಗಳಿಗೆ ಇನ್ನು ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಇಲ್ಲಿಯ ಕಾಸರ್ಡ್ ಜಿಲ್ಲಾ ಶಾಖೆಯ ಸ್ವಂತ ಕಟ್ಟಡ ಹೊಂದಿ ರೈತರಿಗೆ ಸೇವೆ ಒದಗಿಸಲಿ ಎಂದರು. ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕರಾದ ಶಿವಣ್ಣ ಶಹಾಪೂರು,ಶ್ಯಾಮರಾವ್ ಕುಲಕರ್ಣಿ, ಮಹೇಶ ಹಳ್ಳಿ, ಉಪಾಧ್ಯಕ್ಷರಾದ ಶಕುಂತಲಾ ಹುಡೇಜಾಲಿ,ಜಿಲ್ಲಾ ಶಾಖೆಯ ಅಧಿಕಾರಿ ಬಿ.ಆರ್.ಕಾತರಕಿ, ಚನ್ನಕೇಶವ, ಎಸ್.ಎಸ್.ಗೆಜ್ಜಿ, ನಿರ್ದೇಶಕರಾದ ಜಿ.ಬಿ.ಶಶಿಮಠ,ಯಂಕಾರಡ್ಡಿ ಕೋಳಿ,ಕರಿಯಪ್ಪ ಮೇಟಿ, ನೀಲಕಂಠಯ್ಯ ಹಿರೇಮಠ, ಗವಿಸಿದ್ದೇಶ ಹುಡೇಜಾಲಿ, ತೋಟಪ್ಪ ಕಾಮನೂರು,ಸಿ.ಎಚ್. ಸತ್ಯನಾರಾಯಣ,ಸಹಕಾರಿ ಯುನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಕಾಟ್ರಳ್ಳಿ, ವ್ಯವಸ್ಥಾಪಕ ರಾಜಶೇಖರ ಹೊಸಮನಿ, ಜಿ.ವಿ.ಮುದಗಲ್, ಸಿಬ್ಬಂದಿ ದೊಡ್ಡಬಸಯ್ಯ ವಿ.ಎ

ಚ್‌ಮತ್ತೀತರರು ಉಪಸ್ಥಿತರಿದ್ದರು.

Related posts

Leave a Comment