ಗವಿಶ್ರೀಗಳಿಂದ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರ ಅನಾವರಣ

 ಶರಣರ ಬಂಧು ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರವನ್ನು ನಗರದ ಶ್ರೀ ಗವಿಮಠದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅನಾವರಣಗೊಳಿಸಿ ಶುಭ ಹಾರೈಸಿದರು.
ಶಾಲೆ, ಕಾಲೇಜು, ಗ್ರಾಮ ಪಂಚಾಯತ, ಹಾಸ್ಟೆಲ್‌ಗಳಲ್ಲಿ ಹಾಗೂ ಇತರೆಡೆ ಕಾರ್ಯಕ್ರಮ ಮಾಡಲು ಭಾವಚಿತ್ರವನ್ನು ಭಾವಚಿತ್ರ ತಯಾರಕ ಮಂಜುನಾಥ ಗೊಂಡಬಾಳ ತಲುಪಿಸಿದ ಕಾರ್ಯವನ್ನು ಶ್ರೀ ಸಿದ್ಧರಾಮೇಶ್ವರ ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಘ ಶ್ಲಾಘಿಸಿತು.
ಕೊಪ್ಪಳ ಜಿಲ್ಲೆಯ ಎಲ್ಲಾ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ರಾಜ್ಯ ಸರಕಾರದಿಂದ ಘೋಷಣೆಯಾಗಿ ಸರಕಾರಿ ಕಾರ್ಯಕ್ರಮವಾಗಿ ಆಚರಿಸಲ್ಪಡಲಿರುವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರಗಳು ಲಭ್ಯವಿರದ ಕಾರಣ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರಗಳನ್ನು ಶ್ರೀ ಸಿದ್ಧರಾಮೇಶ್ವರ ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳ ಜಿಲ್ಲಾ ಘಟಕ ಉಚಿತವಾಗಿ ಸರಬರಾಜು ಮಾಡಿದೆ.
ಈ ಸಂಧರ್ಭದಲ್ಲಿ ಶ್ರೀ ಸಿದ್ಧರಾಮೇಶ್ವರ ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ ಭೋವಿ, ಕಾರ್ಯದರ್ಶಿ ಬಸವರಾಜ ಭೋವಿ ವಣಗೇರಿ, ಸಂಚಾಲಕ ನಿಂಗಪ್ಪ ಭೋವಿ, ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ಸಂಸ್ಥಾಪಕ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಗುತ್ತಿಗೆದಾರರಾದ ಬಸವರಾಜ ಪುರದ, ಮಹಾಲಿಂಗಪ್ಪ, ಶಿವಾನಂದ ಹೊದ್ಲೂರ, ವೆಂಕಟೇಶ ಭೋವಿ, ಯಮನೂರಪ್ಪ ಕಲ್ಲನವರ, ಮರಿಸ್ವಾಮಿ ಭೋವಿ ಇತರರು

ಇದ್ದರು.

Leave a Reply