ಸಾಚಾರ ವರದಿ ಜಾರಿಗಾಗಿ ಪತ್ರ ಚಳುವಳಿ

  ಗಂಗಾವತಿ ೨೦: ಭಾರತದ ಮುಸ್ಲಿಮರು ಕೆಲವು ಪಕ್ಷಗಳ ಮತ್ತು ರಾಜಕಾರಣಿಗಳ ಮತಬ್ಯಾಂಕ್ ಅಲ್ಲ. ಅವರು ಈ ದೇಶದ ನಾಗರಿಕಪ್ರಜೆಗಳು ಇವರಿಗಾಗಿ ಸಿದ್ದವಾಗಿರುವ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ವರದಿಯನ್ನು ಕೇಂದ್ರ ಸರಕಾರ ಕೂಡಲೇ ಜಾರಿಗೆ ತರಬೇಕೆಂದು ಹೋರಾಟ ಸಮಿತಿ ಸಂಚಾಲಕರಾದ ನ್ಯಾಯವಾದಿ ಬಿ.ಎಚ್. ಗುತ್ತಿಯವರು ಹೇಳಿದರು. 
ಅವರು ಸಾಚಾರ ವರದಿ ಜಾರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಕ್ಕೆ ವಿಶೇಷ ಪತ್ರ ಚಳುವಳಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸಾಚಾರ ವರದಿ ರಚನೆಗೊಂಡು ಇಲ್ಲಿಗೆ ಏಳು ವರ್ಷ ಕಳೆದರೂ ಕೇಂದ್ರದ ಯು.ಪಿ.ಎ. ಸರಕಾರ ವರದಿಯನ್ನು ಜಾರಿಗೊಳಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಭಾರತೀಯ ಮುಸ್ಲಿಮರಿಗೆ ಮಾಡುತ್ತಿರುವ ದ್ರೋಹವೆಂದು ಬಿ.ಎಚ್ ಗುತ್ತಿಯವರು ಖಂಡಿಸಿದರು. 
     ಈ ಸಂದರ್ಭದಲ್ಲಿ ಖಾಜಿ ಮೀರ್ ಇಬ್ರಾಹಿಂಅಲಿ ಅವರು ಮಾತನಾಡುತ್ತ ಮುಂಬರುವ ಚುನಾವಣೆ ವೇಳೆಗೆ ಸಾಚಾರ್ ವರದಿ ಜಾರಿಯಾಗದಿದದ್ದರೆ ಮುಸ್ಲಿಮರ ವಿಚಾರವಾಗಿ ನಿರ್ಮಾಣಗೊಂಡಿರುವ ಸಾಚಾರ್ ವರದಿ ಕಡತಗಳಲ್ಲಿ ಮೂಲೆಗುಂಪಾಗುತ್ತದೆ. ಅದಕ್ಕಾಗಿ ಮುಸ್ಲಿಮರು ಕೇಂದ್ರದೆ ಯು.ಪಿ.ಎ. ಸರ್ಕಾರದ ಮೇಲೆ ಸಾಚಾರ್ ವರದಿ ಜಾರಿಗಾಗಿ ಸಂಘಟಿತರಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಸೈಯ್ಯದ್‌ಷಾಖಲೀಲುಲ್ಲಾ ಖಾದ್ರಿ, ಭಾರದ್ವಾಜ್, ಅಲ್ಲಾಗಿರಿರಾಜ್ ಕನಕಗಿರಿ, ಸೈಯ್ಯದ್ ಹಾಷುಮುದ್ದೀನ್ ಚಳುವಳಿಯನ್ನು ಉದ್ದೇಶಿಸಿ ಮಾತನಾಡಿದರು. ಗೌಸ್‌ಪೀರ್, ಮುರ್ತುಜಾ ಭಾವಿಕಟ್ಟಿ ವಕೀಲರು, ಹಾಜಿ ಮಹ್ಮದ್‌ಅಲಿ, ಎಐಸಿಸಿಟಿಯು ಜಿಲ್ಲಾ ಕಾರ್ಯುದರ್ಶಿ ಟಿ. ರಾಘವೇಂದ್ರೆ, ಆರ್.ವೈ.ಎ. ತಾಲೂಕ ಅಧ್ಯಕ್ಷ ಹುಸೇನ್‌ಬಾಷಾ, ಐಸಾ ವಿದ್ಯಾರ್ಥಿ ಸಂಘಟನೆ ಪದಾಧಿಕಾರಿಗಳು, ಕೆ.ಪಿಕೆ.ಕೆ.ಎಸ್‌ನ ತಾಲೂಕ ಅಧ್ಯಕ್ಷ ಖಾದರ್‌ಬಾಷಾ, ಪ್ರಗತಿಪರ ವಾಲ್‌ಪೇಂಟರ್ ಕಾರ್ಮಿಕರ ಸಂಘದ ಇಬ್ರಾಹಿಂ ಸಾಬ್ ಮತ್ತು ಪಿ.ಎಫ್.ಐ., ಟಿಪ್ಪುಸುಲ್ತಾನ್, ಕೆ.ಟಿ.ಆರ್.ಎಂ., ಮಮ್ಮದೀಯ ನೌಜವಾನೋ ಕಮ್ಮೀಟಿ, ಹುದ್ದಾಮ್ಮುನ್ನಬೀ ಕಮ್ಮಿಟಿಯ ಪರ್ದಾಧಿಕಾರಿಗಳು ಹಾಗೂ ಪ್ರಗತಿಪರ ವಿಚಾರವಾದಿಗಳು ಪತ್ರ ಚಳುವಳಿಯಲ್ಲಿ ಭಾಗವಹಿಸಿದ್ದರು.   

Related posts

Leave a Comment