ಸಮಗ್ರ ಕೃಷಿ ಪದ್ದತಿಯಡಿ ಗೋವಿನ ಜೋಳದಲ್ಲಿ ಸಾರಜನಕ ಬಳಕೆಗೆ ಸರಳ ಮಾರ್ಗ

ಸಮಗ್ರ ಕೃಷಿ ಪದ್ಧತಿಯಡಿ ಗೋವಿನ ಜೋಳದಲ್ಲಿ ಸಾರಜನಕದ ನಿರ್ವಹಣೆಗೆ ಎಲೆ ವರ್ಣ ಫಲಕ ಬಳಸಿ ಸಾರಜನಕ ಬಳಕೆ ಮಾಡುವ ಹೊಸ ಹಾಗೂ ಸರಳ ತಂತ್ರಜ್ಞಾನವನ್ನು ರಾಜ್ಯದಲ್ಲಿಯೇ ಪ್ರಥಮಬಾರಿಗೆ ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಿಂದ ರೈತರಿಗೆ ಪರಿಚಯಿಸಲಾಯಿತು. 
  ಕೃಷಿಯಲ್ಲಿ ಹೆಚ್ಚಿನ ಲಾಭಪಡೆಯಲು ರೈತರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಒಳ್ಳೆಯ ಬೆಳೆ ಬೆಳೆಯಲು ಪೋಷಕಾಂಶಗಳ ಬಳಕೆಯಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಲ್ಲೂ ಮಣ್ಣಿನ ಗುಣಧರ್ಮ ಹಾಗೂ ಫಲವತ್ತತೆಯನ್ನು ಅರಿತು ಸಮತೋಲನವಾದ ಪೋಷಕಾಂಶಗಳ ಬಳಕೆ ಮಾಡಿದಾಗ ಮಾತ್ರ ಸಧೃಢವಾದ ಆರೋಗ್ಯದಾಯಕ ಬೆಳೆ ಬೆಳೆಯಲು ಸಾದ್ಯ. ಪೋಷಕಾಂಶಗಳನ್ನು ಒದಗಿಸಲು ರಸಗೊಬ್ಬರಗಳು ಕೃಷಿಯ ಅವಿಭಾಯ ಅಂಗಗಳಾಗಿವೆ. ಸಾವಯವ ಕೃಷಿ ಪದ್ದತಿಗಳ ಅಳವಡಿಕೆಯೊಂದಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡುವದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾದ್ಯ. ಇಂತಹ ವಿವಿಧ ಬಗೆಯ ತಂತ್ರಜ್ಞಾನಗಳನ್ನು ರೈತರಿಗೆ ತಿಳಿಸುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಸಮಗ್ರ ಕೃಷಿ ಪದ್ದತ್ತಿಗಳು ಯೋಜನೆಯಡಿ ರೈತರಿಗೆ ಗೋವಿನ ಜೋಳದಲ್ಲಿ ಸಾರಜನಕದ ನಿರ್ವಹಣೆಗೆ ಎಲೆ ವರ್ಣ ಫಲಕ ಬಳಸಿ ಸಾರಜನಕ ಬಳಕೆ ಮಾಡುವ ಹೊಸ ಹಾಗೂ ಸರಳ ತಂತ್ರಜ್ಞಾನವನ್ನು ರಾಜ್ಯದಲ್ಲಿಯೇ ಪ್ರಥಮಬಾರಿಗೆ ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಿಂದ ರೈತರಿಗೆ ಪರಿಚಯಿಸಲಾಯಿತು. 
  ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ: ಬಿ. ಎಸ್. ಜಾನಗೌಡರ ರವರು ಸಮಗ್ರ ಕೃಷಿ ಯೋಜನೆಯನ್ನು ಅನುಸರಿಸುತ್ತಿರುವ ರೈತರ ಕ್ಷೇತ್ರಗಳಿಗೆ ಬೇಟಿ ನೀಡಿ ಪರೀಶಿಲಿಸಿದರು. ರೈತರು ಒಗ್ಗಟ್ಟಾಗಿ ಸಂಘಟನೆಯೊಂದಿಗೆ ಕೃಷಿಯಲ್ಲಿ ತೊಡಗುವದರಿಂದ ಹಲವಾರು ತೊಂದರೆಗಳನ್ನು ಹೋಗಲಾಡಿಸಲು ಸಾದ್ಯವೆಂದು ರೈತರೊಂದಿಗೆ ವದಗನಾಳ ಗ್ರಾಮದಲ್ಲಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಹೆಚ್ಚುತ್ತಿರುವ ಆಹಾರ ಬೇಡಿಕೆಗನುಸಾರವಾಗಿ ಕೃಷಿ ಉತ್ಪಾದನೆ ಹೆಚ್ಚಿಸಲು ಕೇವಲ ಸಾಂಪ್ರದಾಯಿಕ ಕೃಷಿಯನ್ನು ಮಾತ್ರ ಅಳವಡಿಸಿದರೆ ಸಾಲದು, ಅದರೊಂದಿಗೆ ಕೃಷಿ ವಿಶ್ವವಿದ್ಯಾಲಯಗಳು ಕಂಡುಹಿಡಿದಿರುವ ವಿವಿಧ ಬಗೆಯ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಕೃಷಿಯಲ್ಲಿ ಹೈನುಗಾರಿಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿಸಾಕಾಣಿಕೆ ಹೀಗೆ ಹಲವಾರು ಉಪ ಕಸುಬುಗಳನ್ನು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಲು ತಿಳಿಸಿದರು. ಹೆಚ್ಚುಹೆಚ್ಚಾಗಿ ಅರಣ್ಯ ಮರಗಳನ್ನು ಅಳವಡಿಸಿಕೊಂಡರೆ ಮಾತ್ರ ಪರಿಪೂರ್ಣ ವ್ಯವಸಾಯ ಸಾದ್ಯವೆಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ರಾಜ್ಯದಲ್ಲಿಯೇ ಪ್ರಥಮಬಾರಿಗೆ ರೈತರಿಗೆ ಬಳಸಲು ಸರಳ ಹಾಗೂ ಖರ್ಚಿಲ್ಲದೇ ಗೋವಿನ ಜೋಳದಲ್ಲಿ ಎಲೆಯ ಹಸಿರು ವರ್ಣವನ್ನಾಧರಿಸಿ (ಬಣ್ಣವನ್ನಾಧರಿಸಿ) ಸಾರಜನಕ ಬಳಕೆಯ ಬಗ್ಗೆ ತಿರ್ಮಾನ ಕೈಗೊಳ್ಳುವ ವರ್ಣಫಲಕವನ್ನು ಬಿಡುಗಡೆ ಮಾಡಿ ಇಂತಹ ತಂತ್ರಜ್ಞಾನಗಳೊಂದಿಗೆ ಮಣ್ಣಿನ ಪರೀಕ್ಷೆಮಾಡಿಸಿ ವಿವಿಧ ಪೋಶಕಾಂಷಗಳ ನಿರ್ವಹಣೆ ಮಾಡಲು ಕರೆ ನೀಡಿದರು. 
  ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ ಕೇಂಗನಾಳ ಗೋವಿನ ಜೋಳದಲ್ಲಿ ಸಾರಜನಕದ ಬಳಕೆಯ ನಿರ್ಧಾರ ಕೈಗೊಳ್ಳಲು ವರ್ಣಫಲಕದ ಬಳಕೆಯ ವಿಧಾನವನ್ನು ರೈತರಿಗೆ ತಿಳಿಸಿದರು. ಇದರೊಂದಿಗೆ ಗೋವಿನ ಜೋಳದಲ್ಲಿ ರಸಗೊಬ್ಬರಗಳ ಸಮತೋಲನ ಬಳಕೆಯಾಗುವದಲ್ಲದೆ ಬೇಸಾಯದ ಖರ್ಚು ಕಡಿಮೆಮಾಡಿ ಅಸಮಪರ್ಕವಾದ ಸಾರಜನದ ಬಳಕೆಯಿಂದಾಗುವ ಕೀಟ ಮತ್ತು ರೋಗಗಳ ನಿರ್ವಹಣೆಯೂ ಸಾದ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ವಿ. ಆರ್. ಜೋಶಿ ಭಾಗವಹಿಸಿದರು. 

Leave a Reply