ಮೇ.೨೨ ರಂದು ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ

 ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಕೊಪ್ಪಳ ರೋಟರಿ ಕ್ಲಬ್‌ನಿಂದ ಮೇ.೨೨ ರಂದು ಸಂಜೆ ೬.೦೦ ಗಂಟೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ. 
  ಜಿಲ್ಲಾ ರೋಟರಿ ಗವರ್ನರ್ ಆರ್.ಗೋಪಿನಾಥ ಅವರು ಸಂಸ್ಥೆಗೆ ಅಧಿಕೃತ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ನ್ಯಾಯಾಧೀಶರಾದ ಶ್ರೀಕಾಂತ ದಾ.ಬಬಲಾದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶ್ರೀಕಾಂತ ಬಾಸೂರ ಅವರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ ಹಾಗೂ ಕಾರ್ಯದರ್ಶಿ ಎ.ಜಿ.ಶರಣಪ್ಪ  ತಿಳಿಸಿದ್ದಾರೆ.

Leave a Reply