ಎಜ್ಯೂಸ್ಮಾರ್ಟ್ ಈ ಕಲಿಕೆ ಉದ್ಘಾಟನಾ ಕಾರ್ಯಕ್ರಮ

ಕೊಪ್ಪಳ ನಗರದ ನಂದಿ ನಗರದಲ್ಲಿಯ ಶ್ರಿ ನಂದಿಶ್ವರ ಶಿಕ್ಷಣ ಸಂಸ್ಥೆಯ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆ  ೧೦ ನೇ ವಾರ್ಷಿಕೋತ್ಸವ ಹಾಗು ಎಜ್ಯೂಸ್ಮಾರ್ಟ್    ಈ ಕಲಿಕೆ   ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮವನ್ನು   ರಾಮಕೃಷ್ಣ  ವಿವೇಕಾನಂದ  ಆಶ್ರಮದ  ಚೈತ್ಯಾನಂದ ಮಹಾಸ್ವಾಮಿಗಳು ಉದ್ಘಾಟಿಸಿದರು  ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮಾಡುತ್ತಿರುವ ಶಾಲೆಯ ಕಾರ್ಯವನ್ನು  ಶ್ಲಾಘಸಿದರು   ಸಾಹೇಬಗೌಡ್ರ ಹಳೆಮನಿ ಅತಿಥಿ ಪರಿಚಯ ಮಾಡಿದರು  ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ ಕುಂಬಾರ ಶಾಲಾ ವಾರ್ಷಿಕ ವರದಿ ವಚನ ಮಾಡಿದರು  ಮುಖ್ಯಅತಿಥಿಗಳಾಗಿ   ಬಿ.ಎಸ್. ಪಾಟೀಲ ವಕೀಲರು ಕೊಪ್ಪಳ,   ಸಾವಿತ್ರಿ ಮುಜುಂದಾರ,    ಶಂಕರಪ್ಪ ಈಶ್ವರಗೌಡ್ರ,  ಅಮರೇಶ ಕರಡಿ ಉಪಸ್ಥಿತರಿದ್ದರು   ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ   ಶಿವಪ್ಪ ಶಟ್ಟರ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು 
ಕಾರ್ಯಕ್ರಮದಲ್ಲಿ ಶಾಲಾ ಆಟೋಟಗಳಲ್ಲಿ  ವಿಜೇತರಾದ ಮಕ್ಕಳಿಗೆ  ಪ್ರಶಸ್ತಿ ಪ್ರಮಾಣ ವಿತರಣೆ ಕಾರ್ಯಕ್ರಮ ನೆಡೆಯಿತು. ನಂತರದಲ್ಲಿ  ಶಾಲಾ ಮಕ್ಕಳಿಂದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು 
ಕುಮಾರಿ ಮೇಘಾ ಕುಂಬಾರ ಸಂಗಡಿಗರು ಪ್ರಾರ್ಥಿಸಿದರು   ಗೀತಾ ಜಾದವ ಸ್ವಾಗತಿಸಿದರು   ಕುಮಾರಿ ರೆಹನಾ ಬಹುಮಾನ ವಿತರಣೆ ಕಾರ್ಯಕ್ರಮವನ್ನು  ನೆಡೆಸಿಕೊಟ್ಟರು 
ಕುಮಾರಿ ಸುನಂದ ಬಳಗಾನೂರ  ಕಾರ್ಯಕ್ರಮವನ್ನು ನಿರೂಪಿಸಿದರು 
ಕುಮಾರಿ ಪದ್ಮಾಶ್ರೀ  ವಂದಿಸಿದರು  
Please follow and like us:
error