ಶರನ್ನವರಾತ್ರಿ ಜಾನಪದ ಜಾದೂ ಪ್ರದರ್ಶನ.

ಕೊಪ್ಪಳ, ಅ. ೧೮ ನಗರದ ಶ್ರೀ ಬನ್ನಿಮಹಾಂಕಾಳಿ ಮಿತ್ರ ಮಂಡಳಿ ಇವರಿಂದ ೫ನೇ ವರ್ಷದ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ಯ ಅ. ೨೧ ರಂದು ಸಂಜೆ ೬.೦೦ ಗಂಟೆಗೆ ಹೊಸಪೇಟೆ ರಸ್ತೆಯ ಹಳೆ ಜಿಲ್ಲಾ ಪಂಚಾಯತ ಸಂಕೀರ್ಣದ ಆವರಣದಲ್ಲಿ ಬೆಂಗಳೂರಿನ ಹೆಸರಾಂತ ಜಾದೂಗಾರ ಕಡಬ ಶ್ರೀನಿವಾಸ ಅವರಿಂದ ಜಾನಪದ ಹಾಸ್ಯ ಜಾದೂ ಪ್ರದರ್ಶನ ಆಯೋಜಿಸಲಾಗಿದೆ.
    ಜಾನಪದ ಜಾದೂ ಪ್ರದರ್ಶನ ಮಾಡಲಿರುವ ಕಡಬ ಶ್ರೀನಿವಾಸ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ಇಲಾಖೆಗಳು, ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳಲ್ಲಿ, ಅಲ್ಲದೆ ಹೊರನಾಡುಗಳಲ್ಲಿಯೂ ಜಾದೂ ಪ್ರದರ್ಶನ ನೀಡಿ ಗಣ್ಯರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಾಡಿನ ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ, ಮಾನ, ಸನ್ಮಾನಗಳನ್ನು ನೀಡಿರುತ್ತವೆ. ಅಂಥ ಒಬ್ಬ ಪ್ರತಿಭಾನ್ವಿತ ಕಲಾವಿದ ಕೊಪ್ಪಳದಲ್ಲಿ ಜಾನಪದ ಜಾದೂ ಪ್ರದರ್ಶನ ನೀಡಲಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀ ಬನ್ನಿ ಮಹಾಂಕಾಳಿ ಮಿತ್ರ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.
Please follow and like us:
error