ಮಾಧ್ಯಮಿಕ ಶಿಕ್ಷಕ ಸಂಘದಿಂದ ಮನವಿ.

ಕೊಪ್ಪಳ- ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾಘಟಕ ಕೊಪ್ಪಳದಿಂದ ಇಂದು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಕೊಪ್ಪಳ ಇವರಿಗೆ ಮನವಿ ಸಲ್ಲಿಸಿ ಶಿಕ್ಷಣ ಇಲಾಖೆಯು ನಡೆಸುವ ವಿವಿಧ ಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸುವಂತೆ ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಅವರು ನೀಡಿದ ಆದೇಶದ ಪ್ರತಿಯನ್ನು ಸಲ್ಲಿಸಲಾಯಿತು. ಈ ಸಂಧರ್ಬದಲ್ಲಿ ಸೋಮಶೇಖರ ಹರ್ತಿ ಜಿಲ್ಲಾಧ್ಯಕ್ಷರು, ಚನ್ನಬಸಪ್ಪ ಹಮ್ಮಿಗಿ, ತಾಲೂಕಾ ಅಧ್ಯಕ್ಷರು, ಖಾಸಿಮ್ ಸಾಬ್ ಸಂಕನೂರ ರಾಜ್ಯ ಪರಿಷತ್ ಸದಸ್ಯರು, ಹನಮಂತಪ್ಪ ಚಲವಾದಿ, ಹೇಮಣ್ಣ ಕವಲೂರ, ರಾಜೇಶ ಅಂಗಡಿ, ಸಿ.ಪಿ. ಮಂಜುನಾಥ, ರುದ್ರೇಶ್ ಬಳ್ಳಾರಿ, ಶ್ರೀನಿವಾಸ ಉಪಸ್ಥಿತರಿದ್ದರು.

Please follow and like us:
error