ಶಶೀಲ್ ನಮೋಶಿ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ: ಕಾಗೇರಿ

ಈಶಾನ್ಯ ಶಿಕ್ಷಕರ ಮತ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಶಶೀಲ್ ನಮೋಶಿ ಪರ ನಗರದಲ್ಲಿ ಕೆಲ ಶಿಕ್ಷಕರನ್ನು ಮತ್ತು ಪಕ್ಷದ ಮುಖಂಡರನ್ನು ಭೇಟಿ ಮಾಡಿ ಪ್ರಚಾರ ನಡೆಸಿ ಅನುಭವಿ ರಾಜಕಾರಣಿ ಮತ್ತು ಸತತ ಮೂರು ಭಾರಿ ವಿಭಾಗದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗು ಶಿಕ್ಷಕರೊಂದಿಗೆ ನಿರಂತರ ಸಂಬಂಧವಿಟ್ಟುಕೊಂಡಿರುವ ಶಶೀಲ್ ನಮೋಶಿಯವರಿಗೆ ಈ ಬಾರಿಯೂ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಅವರಿಂದು ಬಳ್ಳಾರಿಯಿಂದ ಶಿರಸಿಗೆ ಹೋಗುವ ಮಾರ್ಗದಲ್ಲಿ ಕೊಪ್ಪಳ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಆಕಸ್ಮಿಕ ಭೇಟಿ ನೀಡಿ ಕಾರ್ಯಕರ್ತರನ್ನು ಮತ್ತು ಕೆಲ ಶಿಕ್ಷಕರೊಂದಿಗೆ ಸಭೆ ನಡೆಸಿ ನಮೋಶಿ ಪರ ಮತಯಾಚಿಸಿದ ಕಾಗೇರಿ ಶಿಕ್ಷಣದ ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಮೋಶಿಯವರನ್ನು ಬೆಂಬಲಿಸುವಂತೆ ಮತ್ತು ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವುದರ ಮೂಲಕ ಬಾರಿ ಅಂತರದಿಂದ ಗೆಲುವು ತಂದು ಕೋಡಬೇಕು ಎಂದು ಮನವಿ ಮಾಡಿದರು. 
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಇದರಿಂದ ರಾಜ್ಯದ ಜನರು ಅಭಿವೃದ್ಧಿ ಕಾಣದೇ ಭ್ರಮನಿರಸಗೊಂಡಿದ್ದಾರೆಎ. ರಾಜ್ಯದಲ್ಲಿ ಆಢಳಿತ ಕುಸಿದಿದೆ. ಅಭಿವೃದ್ದಿಯ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಷ್ಟಾನಗೊಳಿಸಿದ ಅಭಿವೃದ್ದಿ ಕಾರ್ಯಗಳನ್ನು ಪೂರ್ಣಗೊಳಿಸಲು ಕ್ರಾಂಗ್ರೆಸ ಸರ್ಕಾರಕ್ಕೆ ಆಗುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರಿಂದ ತೀರಸ್ಕರಿಸಲ್ಪಟ್ಟಿದೆ. ರಾಜ್ಯ ಸರ್ಕಾರ ಸಂವಿಧಾನ ಬದ್ಧ ಆಢಳಿತ ನಡೆಸುವಲ್ಲಿ ವಿಫಲವಾಗಿದೆ. ತಾರತಮ್ಯ ನೀತಿ ಅನುಸರಿಸಿ ರಾಜ್ಯ ಸರ್ಕಾರ ಸಮಾಜವನ್ನು ಓಡೆದು ಆಳುವ ನೀತಿ ಅನುಸರಿಸುತ್ತಿದೆ. ಪ.ಜಾ. ಪ.ಫಮ.ಮಕ್ಕಳಿಗೆ ಪ್ರವಾಸ, ಶಾದೀ ಭಾಗ್ಯದಂತಹ ಯೋಜನೆಗಳ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಸರ್ಕಾರ ತ್ರೀಶಂಕು ಸ್ಥಿತಿ ಅನುಭವಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮಾಜಗಳಲ್ಲಿ ಜಾತಿ-ಮತಗಳಲ್ಲಿ ವಿಷ ಬೀಜ ಬಿತ್ತಲಾರಂಭಿಸಿದೆ ಎಂದರು. ರಾಜ್ಯದ ನಾಲ್ಕು ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ನಿಶ್ಚಿತವಾಗಿದೆ ಎಂದರು. 
ಇದೆ ೨೦ ರಂದು ನಡೆಯುವ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಚುನಾವಣೆಯಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶಿಕ್ಷಕರ ಮನವೊಲಿಸಿ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮತ್ತು ಹಾಕಿಸುವಂತೆ ಮನವೊಲಿಸುವ ಪ್ರಮಾಣಿಕ ಪ್ರತಿಯೊಬ್ಬರಿಂದ ನಡೆಯಬೇಕಿದೆ. ಅಲ್ಲದೆ ಅವರನ್ನು ಭೂತ್ ಮಟ್ಟಕ್ಕೆ ಕರೆತಂದು ಮತದಾನ ಮಡಿಸುವ ಹೊಣೆ ನಿಮ್ಮಲ್ಲರ ಮೇಲಿದೆ. ಯಾವುದೇ ಕಾರಣಕ್ಕೂ ನಕಲಿ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಕಾಗೇರಿ ಕಾರ್ಯಕರ್ತರಿಗೆ ಕರೆ ನೀಡಿದರು.
 ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅರುಣಕುಮಾರ, ಬಿಜೆಪಿ ಹಿರಿಯ ಮುಖಂಡರಾದ ಡಾ. ಕೆ.ಜಿ. ಕುಲಕರ್ಣಿ, ಡಾ. ಮಲ್ಲಿಕಾರ್ಜುನ ರಾಂಪುರ, ಸಂಕಪ್ಪ ವಕ್ಕಳದ, ಅಪ್ಪಣ್ಣ ಪದಕಿ, ಪೀರಾ ಹುಸೇನ ಹೊಸಳ್ಳಿ, ನಗರಾಧ್ಯಕ್ಷ ಚಂದ್ರಶೇಖರ ಕವಲೂರು, ಗ್ರಾಮೀಣ ಅಧ್ಯಕ್ಷ ಡಾ. ಕೊಟ್ರೇಶ ಶೆಡ್ಮಿ, ಪ್ರ.ಕಾರ್ಯದರ್ಶಿ ರಾಜು ಬಾಕಳೆ, ಮಂಜುನಾಥ ಹಳ್ಳಿಕೇರಿ, ವಿರುಪಾಕ್ಷಪ್ಪ ನವೋದಯ, ದತ್ತು ವೈದ್ಯ, ಸಿದ್ದಪ್ಪ ಕಿಡದಾಳ, ಕಾಶಿ ಅಳ್ಳಳ್ಳಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಹೇಮಲತಾ ನಾಯಕ, ಪ್ರ. ಕಾರ್ಯದರ್ಶಿ ಮಧುರಾ ಕರಣಂ, ಶೋಭಾ ನಗರಿ, ವಾಣಿಶ್ರೀ ಹಿರೇಮಠ, ಬಸವರಾಜ ನಿರಲಗಿ, ನಗರಸಭಾ ಸದಸ್ಯ ಪ್ರಾಣೇಶ ಮಹೇಂದ್ರಕರ್, ಪ್ರಾಣೇಶ ಮಾದಿನೂರು, ಗವಿಸಿದ್ದಪ್ಪ ಚಿನ್ನೂರು, ಕೃಷ್ಣಾ ರಡ್ಡಿ ಗಲಬಿ, ದೇವರಾಜ ಹಾಲಸಮುದ್ರ, ಮಲ್ಲಪ್ಪ ಬೇಲೇರಿ, ಸಾಧಾಶಿವಯ್ಯ ಹಿರೇಮಠ, ಮಾಧ್ಯಮ ಸಹವಕ್ತಾರ ಪರಮಾನಂದ ಯಾಳಗಿ, ರಾಜ್ಯ ಸಮಿತಿ ಸದಸ್ಯ ಹಾಲೇಶ ಕಂದಾರಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment