ಕೊಪ್ಪಳ ಜಿಲ್ಲಾ ಕ್ರೀಡಾಶಾಲೆ ಕ್ರೀಡಾಪಟುಗಳ ಉತ್ತಮ ಸಾಧನೆ

ಕೊಪ್ಪಳ ಸೆ. : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಆಶ್ರಯದಲ್ಲಿನ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು ವಿವಿಧ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ್ದು, ಶಾಲಾಮಟ್ಟದ ಕ್ರೀಡಾಕೂಟದಲ್ಲಿ ವ್ಹಾಲಿಬಾಲ್ ಸ್ಪರ್ಧೆಗೆ ಸಂಬಂಧಿಸಿದಂತೆ ಬಾಲಕ ಮತ್ತು ಬಾಲಕೀಯರ ತಂಡ ವಿಭಾಗಮಟ್ಟಕ್ಕೆ, ಅಥ್ಲೆಟಿಕ್ಸ್‌ನಲ್ಲಿ ರಾಜ್ಯಮಟ್ಟಕ್ಕೆ ಹಾಗೂ ಮಹಿಳಾ ಪೈಕಾ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ಶಾಲಾಮಟ್ಟದ ಕ್ರೀಡಾಕೂಟ : ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಜರುಗಿದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕ್ರೀಡಾ ವಸತಿ ಶಾಲೆಯ ಬಾಲಕಿಯರಾದ ಶಾರದಾ.ಪಿ, ಜ್ಯೋತಿ, ಶರಣಮ್ಮ, ರೇಣುಕಾ, ಶಾರದಾ.ಹೆಚ್, ಚಂದ್ರಿಕಾ, ತಂಡ ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ. ಇದಲ್ಲದೆ ಬಾಲಕರ ವಿಭಾಗದ ಯಮನೂರಪ್ಪ, ರಾಘವೇಂದ್ರ ರಾಥೋಡ, ಫಕೀರಪ್ಪ, ಗಜೇಂದ್ರ, ಶರಣಪ್ಪ, ಭೀಮಪ್ಪ, ತಂಡ ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ. 
ರಾಜ್ಯಮಟಕ್ಕ ಆಯ್ಕೆ : ಪ್ರಾಥಮಿಕ ಶಾಲಾ ಮಟ್ಟದ ಜಿಲ್ಲಾ ಕ್ರೀಡಾಕೂಟದ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು ಗುಂಡು ಎಸೆತದಲ್ಲಿ ರಾಘವೇಂದ್ರ ರಾಥೋಡ ಪ್ರಥಮ, ೬೦೦ ಮೀಟರ್ ಓಟ ಮತ್ತು ಚಕ್ರ ಎಸೆತದಲ್ಲಿ ಯಮನೂರಪ್ಪ ಪ್ರಥಮ, ಉದ್ದ ಜಿಗಿತದಲ್ಲಿ ಫಕೀರಪ್ಪ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿಯಾಗಿ ಬಾಲಕೀಯರ ವಿಭಾಗದ ಅಥ್ಲೆಟಿಕ್ಸ್‌ನಲ್ಲಿ ಚಕ್ರ ಎಸೆತದಲ್ಲಿ ಜ್ಯೋತಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಸರಾ ವಿಭಾಗಮಟ್ಟಕ್ಕೆ ಆಯ್ಕೆ : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಇದೇ ಕ್ರೀಡಾ ಶಾಲೆಯ  ಶಾರದಾ.ಪಿ, ಜ್ಯೋತಿ, ಶರಣಮ್ಮ, ರೇಣುಕಾ, ಶಾರದಾ.ಹೆಚ್, ಚಂದ್ರಿಕಾ, ಮಾಸಮ್ಮ.ಪಿ, ಮಾಸಮ್ಮ,ಎಸ್., ಮಾಸಮ್ಮ.ಬಿ, ದೀಪಾ, ಮಮತಾ, ಪ್ರತಿಭಾ ಇವರ ವ್ಹಾಲಿಬಾಲ್ ತಂಡ ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.
ಮಹಿಳಾ ಪೈಕಾ ಕ್ರೀಡಾಕೂಟ: ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಮಹಿಳಾ (ಪೈಕಾ) ಕ್ರೀಡಾಕೂಟದಲ್ಲಿ ಇದೇ ಕ್ರೀಡಾ ಶಾಲೆಯ ಕ್ರೀಡಾಪಟುಗಳು ೨೦೦ ಮೀಟರ್ ಮತ್ತು ೧೦೦ ಮೀಟರ್ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ ೪೦೦ ಮೀಟರ್ ಓಟದಲ್ಲಿ ಶಾರದಾ.ಹೆಚ್-ದ್ವಿತೀಯ, ೮೦೦ ಮೀಟರ್ ಓಟದಲ್ಲಿ ಶಾರದಾ.ಪಿ.-ಪ್ರಥಮ, ೧೫೦೦ ಮೀಟರ್ ಓಟದಲ್ಲಿ ಪರಿಮಳ-ಪ್ರಥಮ, ಚಕ್ರ ಎಸೆತದಲ್ಲಿ ಜ್ಯೋತಿ-ದ್ವಿತೀಯ, ೪*೧೦೦ ಮತ್ತು ೪*೪೦೦ ರಿಲೇ ಓಟದಲ್ಲಿ ಚಂದ್ರಿಕಾ ಮತ್ತು ತಂಡ-ಪ್ರಥಮ ಸ್ಥಾನ ಗಳಿಸಿದ್ದು, ವ್ಹಾಲಿಬಾಲ್ ಕ್ರೀಡೆಯಲ್ಲಿ ಶಾರದಾ.ಪಿ, ಜ್ಯೋತಿ, ಶರಣಮ್ಮ, ರೇಣುಕಾ, ಶಾರದಾ.ಹೆಚ್, ಚಂದ್ರಿಕಾ, ಮಾಸಮ್ಮ.ಪಿ, ಮಾಸಮ್ಮ,ಎಸ್., ಮಾಸಮ್ಮ.ಬಿ, ದೀಪಾ, ಮಮತಾ, ಪ್ರತಿಭಾ ಇವರ ವ್ಹಾಲಿಬಾಲ್ ತಂಡ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
 ಎಲ್ಲಾ ಕ್ರೀಡಾಕೂಟಗಳಲ್ಲಿ ಕೊಪ್ಪಳ ಕ್ರೀಡಾ ಶಾಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುವ ಮೂಲಕ ವಿವಿಧ ಹಂತಗಳಲ್ಲಿ ಮುನ್ನಡೆಯುತ್ತಿದ್ದು,  ಈ ಕ್ರೀಡಾಪಟುಗಳು ಇದೇ ರೀತಿಯಲ್ಲಿ ಉತ್ತಮ ಸಾಧನೆ ಮಾಡಿ ಮುಂದೆ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಹಾಗೂ ನಾಡಿಗೆ ಉತ್ತಮ ಕೀರ್ತಿ ತರಲಿ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಲಾಸ್.ಎನ್.ಘಾಡಿ, ಕ್ರೀಡಾ ಶಾಲೆ ಅಧೀಕ್ಷಕ ಕೆ.ಉಸ್ಮಾನ್‌ಬೇಗ್, ಹಿರಿಯ ವ್ಹಾಲಿಬಾಲ್ ತರಬೇತುದಾರ ಸಿ.ಎ.ಪಾಟೀಲ್, ಖೋಖೋ ತರಬೇತುದಾರರಾದ ಎ.ಯತಿರಾಜು, ಸಹಾಯಕ ವ್ಹಾಲಿಬಾಲ್ ತರಬೇತುದಾರ ಸುರೇಶ, ಸಹಾಯಲ ಅಥ್ಲೆಟಿಕ್ಸ್ ತರಬೇತುದಾರ ವೆಂಕಟೇಶ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾರ್ದಿಕವಾಗಿ ಅಭಿನಂದಿಸಿದೆ.
Please follow and like us:
error