ಚುನಾವಣೆಗೆ ಸನ್ನದ್ದರಾಗಿ-ಸಚಿವ ಶಿವರಾಜ ತಂಗಡಗಿ.

ಕೊಪ್ಪಳ-೨೩, ನಗರದ ಹರ್ಷಾಹೋಟೆಲ್ ಸಭಾ ಭವನದಲ್ಲಿ ನಡೆದ ಮುಂಬರುವ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ ಚುನಾವಣಾ ನಿಮಿತ್ತಾ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕರೆದ ಬ್ಲಾಕ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ರಾಜ್ಯದ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿಯವರು ಮಾತನಾಡಿ ಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಬೇರಿ ಬಾರಿಸಬೇಕು. ಅಭ್ಯರ್ಥಿಗಳ ಆಯ್ಕೆಗೆ ಸೂಕ್ತ ಮಾನದಂಡ ರಚಿಸಿ ಅಭ್ಯರ್ಥಿಗಳ ಆಯ್ಕೆಮಾಡಬೇಕು. ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತಗಳು ಕಾಂಗ್ರೆಸ್ ಮಡಿಲು ಸೇರುವುದು ಖಚಿತ. ಈಗಾಗಲೇ ವಿಧಾನಪರಿಷತ್ ಚುನಾವಣೆ ಸೋಲಿನಿಂದ ಕೆಂಗಟ್ಟಿರುವ ಬಿ.ಜೆ.ಪಿ.ನಾಯಕರ ಜಿಲ್ಲೆಯಲ್ಲಿ ಹೆಸರಿಲ್ಲದಂತೆ ಹೋಗಿದ್ದಾರೆ. ಇವರ ಸುಳ್ಳು ರಣತಂತ್ರಗಳು ಫಲಿಸದೆ ಬರುವಚುನಾವಣೆಯಲ್ಲಿಯುಸಹ ಜಿಲ್ಲೆಯ ಮತದಾರರು ಇವರನ್ನು ತೀರಸ್ಕರಿಸಿ ಇವರ ಗೊಡ್ಡುಬರವಸೆಗಳಿಗೆ
ತಿಲಾಂಜಲಿ ಹಾಡಲಿದ್ದಾರೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಶಾಸಕ.ಕೆರಾಘವೇಂದ್ರ
ಹಿಟ್ನಾಳ, ಚುನಾವಣಾ ವೀಕ್ಷಕರಾದ ಡಾ|| ಆನಂದ, ಕೆ.ಬಸವರಾಜ ಹಿಟ್ನಾಳ, ಮಲ್ಲಿಕಾರ್ಜುನ
ನಾಗಪ್ಪ, ಸಾಲೋನಿ ನಾಗಪ್ಪ, ವೀರಪ್ಪ ಕೆಸರಟ್ಟಿ, ಹಸನಸಾಬ್ ದೋಟಿಹಾಳ, ಕರಿಯಣ್ಣ ಸಂಗಟಿ,
ಶೇಖರಗೌಡ ಮಾಲಿಪಾಟೀಲ, ಅಂದಣ್ಣ ಅಗಡಿ, ಯಂಕಣ್ಣ ಯಾರಾಸಿ, ಎಸ್.ಬಿ.ನಾಗರಳ್ಳಿ,
ಜುಲ್ಲುಖಾದ್ರಿ, ಶಾಂತಣ್ಣ ಮುದುಗಲ್, ಹನುಮಂತಗೌಡ ಪಾಟೀಲ, ಭೀಮಸೆಪ್ಪ ಹಳ್ಳಿ, ರೆಡ್ಡಿ
ಶ್ರೀನಿವಾಸ, ಬಾಬುಸಾಬ್, ಕೆ.ಎನ್.ಪಾಟೀಲ, ಮರ್ದಾನ ಅಲಿ ಅಡ್ಡೆವಾಲೆ, ರುದ್ರೇಶ ಡಾಗಿ,
ಹನುಮಂತಪ್ಪ ನಾಯಕ, ಬಸವರಾಜ ಮಾಳಿಮಠ, ಇಲಿಯಾಸ್ ಗಂಗಾವತಿ, ರಾಜು ನಾಯಕ ಉಪಸ್ಥಿತರಿದ್ದು
ಕೃಷ್ಣ ಇಟ್ಟಂಗಿ ಕಾರ್ಯಕ್ರಮ ನೀರೂಪಿಸಿ ಕೊನೆಗೆ ವಂದಿಸಿದರೆಂದು ಪಕ್ಷದ ವಕ್ತಾರ
ಅಕ್ಬರಪಾಷಾ ಪಲ್ಟನ ತಿಳಿಸಿದ್ದಾರೆ. 
Please follow and like us:
error