fbpx

ಅಸೃಶ್ಯತೆ, ಶೋಷಣೆಯನ್ನು ಸಹಿಸದ ಅಂಬಿಗ ಚೌಡಯ್ಯ – ಮಂಜೂಳಾ ವಿ.

 ನಿಜಶರಣ ಅಂಬಿಗ ಚೌಡಯ್ಯ ತನ್ನ ಕಾಯಕ ವೃತ್ತಿಯ ಜೊತೆಗೆ ಜನರ ಉದ್ದಾರಕ್ಕಾಗಿ ಜನಪರ ಅಭಿವೃದ್ದಿಗೋಸ್ಕರ ಮೂಡ ನಂಭಿಕೆ, ಅಸೃಶ್ಯತೆ, ಶೋಷಣೆಯನ್ನು ಹೋಗಲಾಡಿಸಲು ಶ್ರಮಿಸಿದರು ಎಂದು ಹಿರಿಯ ಶಿಕ್ಷಕಿ ಮಂಜುಳಾ ವಿ ಹೇಳಿದರು
ಅವರು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ನಡೆದ ನಿಜಶರಣ ಅಂಬಿಗ ಚೌಡಯ್ಯನವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
೧೨ನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಶರಣ ಸಂಕೂಲದಲ್ಲಿ ದಿಟ್ಟ ಧೀರ ಗಣಾಚಾರಿ ನಿಜದನಗರಿ ನಿರ್ಭಿತ ವೀರ ಶರಣ ಅಂಬಿಗರ ಚೌಡಯ್ಯನವರು ಆಗಿನ ದಾರವಾಡ ಜಿಲ್ಲೆಯ ಚೌಡಧಾನ ಪುರದಲ್ಲಿ ಜನಿಸಿ ಕಲ್ಯಾಣದ ಅನುಉಭವ ಮಂಟಪಕ್ಕೆ ಆಗಮಿಸಿ ಡೋಣಿ ನಡೆಸುವ ಅಂಬಿಗ ಕಾಯಕ ಕೈಗೊಂಡು ಧೀರಗಣಾಚಾರಿ ಶರಣರಾಗಿ ನ್ಯಾಯನಿಷ್ಠುರ ದಾಕ್ಷಣ್ಯಪರ ವಲ್ಲದ ವಚನಗಳನ್ನು ರಚಿಸಿ ಸಮಾಜದ ಮೂಡನಂಬಿಕೆ, ಕಂದಾಚಾರ, ಡಾಂಭಿಕಗುರು, ಜಂಗಮರ ಭಕ್ತರ ಖಂಡನೆಮಾಡಿ ಇಷ್ಟಲಿಂಗಕ್ಕೆ ನಿಷ್ಟಮೆರೆದರು ಬಸವ ಪ್ರೆಣಿತ ಲಿಂಗಾಯತ ಧರ್ಮದ ತತ್ವ ಸಿದ್ದಾಂತಗಳ ಪ್ರತಿಪಾದಕರಾದರು ಆರಕ್ಷರೂ ಆದರು ಅಂಬಿಗ ಅಂಬಿಗ ಎಂದು ಕುಂದುನುಡಿಯದಿರು ನಂಬಿದವರ ಒಂದೇ ಹುಟ್ಟಲ್ಲಿ ಕಡೆಯ ಆಯಿಸುವ ಅಂಬಿಗರ ಚೌಡಯ್ಯ ಎಂದು ಕಾಯಕ ಗೌರವ ಎತ್ತಿ ಹೇಳುತ್ತಿದ್ದರು ಎಂದ ಅವರು ತಡಿ ನೆಲೆ ಇಲ್ಲದ ಮಹಾನದಿಯಲ್ಲಿ ವಡಲಿಲ್ಲದ ಅಂಬಿಗನಾಗಿ ಬಂದಿದ್ದೇನೆ ಹಿಡಿಯುವ ಬಿಡುವ ಮನವ ಬೆಲೆಕೊಟ್ಟಡೆ ಗಡಣವಿಲ್ಲದೆ ಹೊಳೆಯಹಾಯಿಸುವೆ, ನುಡಿ ಇಲ್ಲದ ನಿಸ್ಸೀಮ ಗ್ರಾಮದಲ್ಲಿರುಸುವೆ  ಎಂಬುದು ಅಂಬಿಗರ ಚೌಡಯ್ಯರ ಶರಣರ  ಅಭಿವಾಣಿಯಾಗಿತ್ತು.
ವಿಶ್ವಗುಉ ಬಸವಣ್ಣನವರು ಅರಿವು ಆಚಾರ ಅನುಭವದ ತಳಹದಿಯ ಮೇಲೆ ಗುರು-ಲಿಂಗ ಜಂಗಮ ವ್ಯವಸ್ಥೆಯನ್ನು ರೂಪಿಸಿ ಲಿಂಗಾಯತ ಸ್ಥಾಪಿಸಿದಾಗ ಬಸವ ಪೂರ್ವದ ಶೈವ – ವೈದಿಕ – ಮತ – ಪಂಥಗಳ ಕಾಳಾಮುಕ ಪಶುಪಥನಾಥ ಸಿದ್ದ ಪರಂಪರೆಯ  ಕೆಲವರು ಇಷ್ಟಲಿಂಗಧಾರಣೆ ಮಾಡಿಕೊಂಡು ಕಾವಿ ಕಪನಿ ತೊಟ್ಟು  ಜಡೆ ಮುಡಿ ಕಟ್ಟಿಕೊಂಡು ನಾವು ಲಿಂಗಾಯತ ಧರ್ಮದ ಗುರುಗಳು  ಎಂದು ಹೇಳಿಕೊಳ್ಳುತ್ತಾ ಮುಗ್ದ ಕೆಳವರ್ಗಗಳ ಹಿಂದುಳಿದ ಜಾತಿಗಳ ಜನರ ಮನೆಗೆ ಹೋಗಿ ಅವರಿಗೆ ಮಂತ್ರ ದೀಕ್ಷೆ ಲಿಂಗದೀಕ್ಷೆ ಗುರುಪದೇಶ ಮಾಡಿ ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು ಅವರನ್ನು ಶೋಷಿಸುತ್ತಿದ್ದನ್ನು ನಿಜಶರಣ ಅಂಬಿಗ ಚೌಡಯ್ಯನವರು ಇಂಥಹ ಡಾಂಭಿಕ ಆಷಾಡ ಭೂತಿ ಕಪಟ ಗುರುಗಳನ್ನು ನಿಷ್ಠೂರವಾಗಿ ಖಂಡಿಸಿ ನೇರ ನಡೆನುಡಿಗಳಿಂದಲೆ ಪ್ರಸಿದ್ದಿ  ಪಡೆದರು ಎಂದು ಮಂಜುಳಾ ವಿ ಹೇಳಿದರು.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ, ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಾಣೆ ಮಾಡುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶಾಲೆಯ ಮುಖ್ಯೋಪಧ್ಯಾಯ ಕರಿಬಸಪ್ಪ ಪಲ್ಲೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ವೇದಿಕೆಯ ಮೇಲೆ ಶಿಕ್ಷರಾದ ವೀರಯ್ಯ ಒಂಟಿಗೊಡಿಮಠ , ರಾಮರಡ್ಡೆಪ್ಪ, ಶೈಲಜಾ ಮಂಗಳೂರು, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!