ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ

ಬಸಾಪುರ ೨೦ : ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳನ್ನು ಮತ್ತು ಸಂಗಣ್ಣ ಕರಡಿಯವರ ಅಭಿವೃದ್ಧಿಪರ ಧೋರಣೆಗಳನ್ನು ಮೆಚ್ಚಿ, ಬಸಾಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಮಸೂದ್‌ಸಾಬ ಇವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿ.ಜೆ.ಪಿ. ಕೊಪ್ಪಳ ವಿಧಾನಸಭಾ ಅಭ್ಯರ್ಥಿ ಸಂಗಣ್ಣ ಕರಡಿಯವರು ಮಸೂದ್‌ಸಾಬ್ ಇವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡ ವಿ.ಎಂ. ಭೂಸನೂರಮಠ, ಬ್ರಹ್ಮಯ್ಯ, ನಜೀರಸಾಬ ನರಸಿಂಹಲು ಮತ್ತು ಗ್ರಾಮದ ಯುವ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇವರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಟಮ್ಮ, ಅಂಜಿನಿ, ಮಿಲನಪ್ಪ, ಚಾಂದ್‌ಪಾಶ, ಉಸ್ಮಾನ್, ಲಾಲ್‌ಸ್ವಾಮಿ, ಕಾಶಿಂ ಅಲಿ, ಅಲಿ, ಶ್ರೀನಿವಾಸ, ನಾಗರಾಜ, ಕಡೂರ ನಾಗರಾಜ, ಜಾಕಿರಸಾಬ, ದರ್ಶನ್ ಸಾಬ, ಮೌಲಾಲಿಸಾಬ, ಮುರುಗೇಶ, ಹನುಮಂತ ವಡ್ಡರ್, ಖಾಜಾಸಾಬ, ಪರಶುರಾಮ, ಬಸವರಾಜ, ಯಲ್ಲಪ್ಪ, ಈರಣ್ಣ ಗುಂತಕಲ್, ಬಸವರಾಜ ಹೊನ್ನೂರಸ್ವಾಮಿ, ಹೊನ್ನೂರಸ್ವಾಮಿ, ನಾಯ್ಡು, ಭೀಮಪ್ಪ ಆಡಿನ, ಪೆದ್ದಕ್ಕ ದೇವೇಂದ್ರ್ಪ, ಕರಿಯಪ್ಪ ಲೋಡಿನ್, ರಂಗಸ್ವಾಮಿ ಜಯರಾಂ, ಯಂಕಪ್ಪ ಹಡಪದ, ಝಾಕೀರ ಹುಸೇನ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಿ.ಜೆ.ಪಿ. ಸೇರ್ಪಡೆಯಾಗಿ ಕರಡಿ ಸಂಗಣ್ಣನವರನ್ನು ಗೆಲ್ಲಿಸುವಲ್ಲಿ ಶ್ರಮಿಸುವ ವಾಗ್ದಾನ ನೀಡಿದರು ಎಂದು ಪಕ್ಷದ ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.

Leave a Reply