ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ : ಜನ ಸಂಪರ್ಕ ಸಂವಾದ ಯಶಸ್ವಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ ಕಾರ್ಯಕ್ರಮವನ್ನು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಳಕಲ್ಲ ಗ್ರಾಮದ ಶ್ರೀಪಕ್ಕೀರೇಶ್ವರ ದರ್ಗಾದಲ್ಲಿ  ಶುಕ್ರವಾರದಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ಅಧಿಕಾರಿಗಳಾದ  ವೆಂಕಣ್ಣ ಆಲೂರ ಅವರು ಮಾತನಾಡಿ, ಸರಕಾರವು ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆಗಾಗಿ ಹಲವಾರು ಯೋಜನೆಗಳ ಜಾರಿಗೆ ತಂದಿದೆ. ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಶಾಲೆಯಲ್ಲಿ ಕರಾಟೆ ತರಬೇತಿಯನ್ನು ನೀಡಲಾಗುತ್ತಿದೆ. ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗಾಗಿ ಇಲಾಖೆಯಿಂದ ಶಿಕ್ಷಣಕ್ಕಾಗಿ ಕೆ.ಜೆ.ಬಿ.ವಿ ಶಾಲೆಗಳನ್ನು ಸ್ಥಾಪಿಸಲಾಗಿದ್ದು, ಈ ಶಾಲೆಗಳಲ್ಲಿ ವಸತಿ ಸಹಿತ ಶಿಕ್ಷಣವನ್ನು ನೀಡಲಾಗುತ್ತಿದೆ ಅಲ್ಲದೇ ಹೆಣ್ಣು ಮಕ್ಕಳ ಶಿಕ್ಷಣ ಜಾಗ್ರತಿಗಾಗಿ ಕಿಶೋರಿ ವೃತ್ತಿ ತರಬೇತಿ ಯೋಜನೆಯಡಿಯಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಹಾಜರಾತಿ ಶಿಷ್ಯ ವೇತನವನ್ನು ಜಾರಿ ಮಾಡುತ್ತಿದ್ದು ಈ ಯೋಜನೆಯನ್ವಯ ಪ್ರತಿ ದಿನದ ಹಾಜರಾತಿಗಾಗಿ ವಿದ್ಯಾರ್ಥಿನಿಗೆ ೨ ರೂ.ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಅಕ್ಕಮಹಾದೇವಿಯವರು ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆಯನ್ನು ಮಾಡಿದರೆ ಅವರು ಮಾನಸಿಕ, ದೈಹಿಕ, ಭೌದ್ದಿಕ ಬೆಳವಣಿಗೆಯು ಕುಂಠಿತವಾಗುತ್ತದೆ, ಅಲ್ಲದೇ ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಗು ಗರ್ಭಿಣೆಯಾದಲ್ಲಿ ತಾಯಿ ಮಗು ಇಬ್ಬರು ಗಂಡಾಂತರ ಸಮಸ್ಯೆಗೆ ಒಳಗಾಗುತ್ತಾರೆ, ಈ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಹೆಚ್ಚಾಗುತ್ತದೆ ಅದ್ದರಿಂದ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯನ್ನು ಮಾಡಬೇಡಿ ಎಂದು ವಿನಂತಿಸಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಜಗದೀಶ್ವರಯ್ಯನವರು ಮಾತನಾಡಿ, ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಸ್ಥಾಪಿಸಲಾಗಿದೆ ಅಲ್ಲದೇ ಪ್ರತಿ ಠಾಣೆಯ ಸಬ್ ಇನ್ಸಪೆಕ್ಟರ್‌ರವರನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಕ ಮಾಡಲಾಗಿದೆಂದು ತಿಳಿಸಿದರು. ಅರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಮಕ್ಕಳು ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಅಥವಾ ಹತ್ತೀರದ ಮಕ್ಕಳ ಕಲ್ಯಾಣಧಿಕಾರಿಗಳ ಮುಂದೆ ಹಾಜರು ಪಡಿಸಿದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಸೂಕ್ತ ಪುರ್ನವಸತಿ ಕಲ್ಪಿಸಲಾಗುವುದು ಎಂದು ವಿವರಿಸಿದರು. ಅಲ್ಲದೇ ಸರ್ಕಾರವು ಬಾಲ್ಯ ವಿವಾಹ ನಿಷೇದಿಸಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ನ್ನು ಜಾರಿ ಮಾಡಿದ್ದು ಈ ಕಾಯ್ದೆಯಡಿಯಲ್ಲಿ ಬಾಲ್ಯ ವಿವಾಹ ಮಾಡಿದವರಿಗೆ, ಹಾಗೂ ಮಾಡಿಸಿದವರಿಗೆ ಅಲ್ಪ ವಯಸ್ಸಿನ ಬಾಲಕಿಯನ್ನು ವಿವಾಹವಾದ ಪುರುಷನಿಗೆ ಮತ್ತು ಬಾಲ್ಯ ವಿವಾಹ ಮಾಡಿಸಿದ ಪೂಜಾರಿಗೂ ಸೇರಿದಂತೆ ಭಾಗವಹಿಸಿದವರಿಗೊ ೨ ವರ್ಷ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂ ದಂಡ ಅಥವಾ ಎರಡರಿಂದಲೂ ದಂಡಿಸಬಹುದಾಗಿದೆಂದು ವಿವರಿಸಿದರು. 
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಅಧಿಕಾರಿಗಳಾದ ಶಿವಲೀಲಾ ವನ್ನೂರರವರು ಕೌಟಂಬಿಕ ದೌರ್ಜನ್ಯ ಕಾಯ್ದೆಯಡಿ ನೊಂದ ಮಹಿಳೆಯರಿಗೆ ಆಪ್ತಸಮಾಲೋಚನೆ, ಉಚಿತ ಕಾನೂನು ನೆರವು, ತಾತ್ಕಾಲಿಕ ಆಶ್ರಯ ಮತ್ತು ಕೌಶಲ್ಯಬಿವೃದ್ಧಿ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳಿಸಿದ್ದು ಅಲ್ಲದೇ ಸಂಕಷ್ಠಕೊಳಗಾದ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸಾಹಯವಾಣಿ ಕೇಂದ್ರವನ್ನು ಸ್ಥಾಪಿಸಿದ್ದು, ೧೦೯೧ಗೆ ಕರೆ ಮಾಡಿ ಸಂಕಷ್ಠಕೊಳಗಾದ ಮಹಿಳೆಯ ಬಗ್ಗೆ ಮಾಹಿತಿಯನ್ನು ನೀಡಿದಲ್ಲಿ ಆದಷ್ಟು ಶಿಘ್ರದಲ್ಲಿ ಆ ಮಹಿಳೆಯನ್ನು ರಕ್ಷಿಸಲಾಗುವುದು ಎಂದು ತಿಳಿಸಿದರು.
ಯಲಬುರ್ಗಾ ತಾಲೂಕಿನ ಮಕ್ಕಳ ಸಹಾಯವಾಣಿ ಸಂಸ್ಥೆಯ ನಿಂಗಪ್ಪ ಕೊಡಿಕರ್ ಸಂಕಷ್ಟದಲ್ಲಿರುವ ಮಕ್ಕಳು ಸಮುದಾಯದಲ್ಲಿ ಕಂಡುಬಂದರೆ ೧೦೯೮ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದಲ್ಲಿ ಕರೆ ಮಾಡಿದ ೬೦ ನಿಮಿಷದೊಳಗಾಗಿ ಆ ಮಗುವನ್ನು ರಕ್ಷಿಸಿ ಸೂಕ್ತ ಪುರ್ನವಸಿತಿ ಕಲ್ಪಿಸಲಾಗುವುದು, ಆದ್ದರಿಂದ ಸಹಾಯವಾಣಿಗೆ ಮಾಹಿತಿಯನ್ನು ನೀಡಿ  ಎಂದು ವಿನಂತಿಸಿದರು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ತಳಕಲ್ಲ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶಿರಾಜುದ್ದೀನ ಕೊಪ್ಪಳರವರು ವಹಿಸಿಕೊಂಡಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಬಡಿಗೇರ ವಂದಿಸಿದರು. ಶ್ರೀಕಾಂತರವರು ನಿರೂಪಿಸಿದರು.

Leave a Reply