ಅಮೆರಿಕನ್ ಮಹಿಳೆಯ ಅತ್ಯಾಚಾರ ಯತ್ನ : ಆರ್‌ಸಿಬಿ ಆಟಗಾರ ಪೊಮೆರ್ಸ್ ಬಂಧನ

ಹೊಸದಿಲ್ಲಿ, ಮೇ 18: ಭಾರತೀಯ ಮೂಲದ ಅಮೆರಿಕನ್ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ಗಂಡನನ್ನು ತೀವ್ರವಾಗಿ ಥಳಿಸಿದ ಆರೋಪದಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಆಟಗಾರ ಲೂಕ್ ಪೊಮೆರ್ಸ್ ಬ್ಯಾಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈಗಾಗಲೇ ವಿವಾದಕ್ಕೆ ಸಿಲುಕಿರುವ ಐಪಿಎಲ್ ಪಂದ್ಯಾವಳಿಗೆ ಹೊಸ ಹಗರಣವೊಂದು ಸುತ್ತುವರಿ ದಂತಾಗಿದೆ. ದುರ್ನಡತೆ ತೋರಿದ ಆರೋಪದಲ್ಲಿ ಪೊಮೆರ್ಸ್ ಬ್ಯಾಕ್‌ನನ್ನು ಆರ್‌ಸಿಬಿಯ ಮಾಲಕ ವಿಜಯ್ ಮಲ್ಯ ತಂಡದಿಂದ ಅಮಾನತು ಗೊಳಿಸಿ ದ್ದಾರೆ. ಆತ ಈ ಹಂಗಾಮಿನಲ್ಲಿ ಒಂದೇ ಒಂದು ಐಪಿಎಲ್ ಪಂದ್ಯದಲ್ಲಿ ಆಡಿಲ್ಲ.
ಶಾರುಕ್ ಖಾನ್ ಪ್ರಕರಣದ ಎರಡು ದಿನಗಳ ಬಳಿಕ ಆಸ್ಟ್ರೇಲಿಯನ್ ಆಟಗಾರನ ಈ ರಾದ್ಧಾಂತ ಬೆಳಕಿಗೆ ಬಂದಿದೆ. ಪೊಮೆರ್ಸ್ ಬ್ಯಾಕ್ ಇಂದು ನಸುಕಿನಲ್ಲಿ ಪಂಚತಾರಾ ಹೊಟೇ ಲೊಂದರಲ್ಲಿ ಅಮೆರಿಕದ ಮಹಿಳೆ ಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದನೆನ್ನಲಾಗಿದ್ದು, ಆತನನ್ನು ಬಳಿಕ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿಯ ಸೆ.354 (ಮಹಿಳೆಗೆ ಲೈಂಗಿಕ ಕಿರುಕುಳ), 323 (ಗಾಯಗೊಳಿಸುವಿಕೆ), 454 (ಅನಧಿಕೃತ ಪ್ರವೇಶ) ಹಾಗೂ 511 (ಜೀವಾವಧಿ ಅಥವಾ ಇತರ ಶಿಕ್ಷೆ ವಿಧಿಸಬಹುದಾದ ಅಪರಾಧ) ಅನ್ವಯ ಪೊಮೆರ್ಸ್ ಬ್ಯಾಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಾರುಕ್ ಖಾನ್ ಪ್ರಕರಣದ ಎರಡು ದಿನಗಳ ಬಳಿಕ ಆಸ್ಟ್ರೇಲಿಯನ್ ಆಟಗಾರನ ಈ ರಾದ್ಧಾಂತ ಬೆಳಕಿಗೆ ಬಂದಿದೆ. ಪೊಮೆರ್ಸ್ ಬ್ಯಾಕ್ ಇಂದು ನಸುಕಿನಲ್ಲಿ ಪಂಚತಾರಾ ಹೊಟೇಲೊಂದರಲ್ಲಿ ಅಮೆರಿಕದ ಮಹಿಳೆಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದನೆನ್ನಲಾಗಿದ್ದು, ಆತನನ್ನು ಬಳಿಕ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿಯ ಸೆ.354 (ಮಹಿಳೆಗೆ ಲೈಂಗಿಕ ಕಿರುಕುಳ), 323 (ಗಾಯಗೊಳಿಸುವಿಕೆ), 454 (ಅನಧಿಕೃತ ಪ್ರವೇಶ) ಹಾಗೂ 511 (ಜೀವಾವಧಿ ಅಥವಾ ಇತರ ಶಿಕ್ಷೆ ವಿಧಿಸಬಹುದಾದ ಅಪರಾಧ) ಅನ್ವಯ ಪೊಮೆರ್ಸ್ ಬ್ಯಾಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಮೆರ್ಸ್ ಬ್ಯಾಕ್ ಸಂತ್ರಸ್ತ ದಂಪತಿ ಹಾಗೂ ಪರಸ್ಪರರ ಮಿತ್ರರೊಂದಿಗೆ ಅವರ ಕೊಠಡಿಯಲ್ಲಿ ಪಾನಗೋಷ್ಠಿಗೆ ಆಹ್ವಾನಿಸುವಂತೆ ಕೇಳಿಕೊಂಡನು.
ಮಹಿಳೆ ಇತರರನ್ನು ಅಲ್ಲೇ ಬಿಟ್ಟು ಮಲಗಲೆಂದು ತನ್ನ ಕೊಠಡಿಗೆ ಹೋದಾಗ ಲ್ಯೂಕ್ ಆಕೆಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದನೆಂದು ಆರೋಪಿಸಲಾಗಿದೆ. ಆತ ತನ್ನ ತಲೆಗೂದಲನ್ನೆಳೆದು ಚುಂಬಿಸಿದನೆಂದು ಮಹಿಳೆ ದೂರಿದ್ದಾಳೆ. ರಕ್ಷಣೆಗೆ ಬಂದ ತನ್ನ ಗಂಡನನ್ನು ಆತ ಥಳಿಸಿದನೆಂದು ಅವಳು ತಿಳಿಸಿದ್ದಾಳೆ. ಮಹಿಳೆಯ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಆತ ಬೆದರಿಸಿದ…
ಹೊಸದಿಲ್ಲಿ, ಮೇ 18: ಪೊಲೀಸರಿಗೆ ನೀಡಿದ ದೂರನ್ನು ಹಿಂದೆಗೆಯುವಂತೆ ಆರ್‌ಸಿಬಿಯ ಕಳಂಕಿತ ಆಟಗಾರ ಲೂಕ್ ಪೊಮೆರ್ಸ್ ಬ್ಯಾಕ್ ತನ್ನನ್ನು ಬೆದರಿಸಿದನೆಂದು ಸಂತ್ರಸ್ತ ಅಮೆರಿಕನ್ ಮಹಿಳೆ ರೆಹಾಲ್ ಹಾಮೀದ್ ಆರೋಪಿಸಿದ್ದು, ಪ್ರಕರಣದ ಬಗ್ಗೆ ಸಹಾಯ ನೀಡುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಲೂಕ್ ತಮ್ಮಂದಿಗೆ ಕೊಠಡಿಯೊಳಗೆ ಬಂದನು. ತಾನು ಆತನಿಗೆ ಹೊರ ಹೋಗುವಂತೆ ಹೇಳಿದಾಗ ಆತನು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನು. ತನ್ನ ಪತಿ ಸಾಹಿಲ್ ಮಧ್ಯಪ್ರವೇಶಿಸಿದಾಗ ಬ್ಯಾಕ್ ಆತನಿಗೆ ಥಳಿಸಿದನೆಂದು ಘಟನೆಯನ್ನು ವಿವರಿಸಿದ ಸಂತ್ರಸ್ತೆ, ಹೊಟೇಲ್‌ನವರಿಂದ ತಮಗೆ ಯಾವುದೇ ಸಹಾಯ ದೊರೆಯಲಿಲ್ಲವೆಂದು ಆರೋಪಿಸಿದ್ದಾಳೆ. ಲೂಕ್‌ಗೆ ಶಿಕ್ಷೆಯಾಗಬೇಕೆಂದು ತಾನು ಬಯಸುತ್ತಿದ್ದೇನೆಂದು ಆಕೆ ಹೇಳಿದ್ದಾಳೆ
Please follow and like us:
error