ನಿನ್ನಿಂದಲೇ, ನಿನಗಾಗಿ, ಹೆಸರಿನ ಬಳೆಗಳಿಗೆ ಜಾತ್ರೆಯಲ್ಲಿ ಭಾರೀ ಬೇಡಿಕೆ

 ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಯಲ್ಲಿ ವಿವಿಧ ತರಹದ ಬಳೆಗಳ ಅಂಗಡಿ ವ್ಯಾಪಾರ ಬಲು ಜೋರಾಗಿದೆ. ಹಳೆಯ  ಹೆಸರಿನ ಬಳೆಗಳಿಗೆ ಬೇಡಿಕೆ  ಇಲ್ಲದೇ ಆಧುನಿಕ ಚಲನಚಿತ್ರಗಳ ಹಾಗೂ ಧಾರಾವಾಹಿಗಳ ಹೆಸರಿನ ಬಳೆಗಳಿಗೆ  ಜಾತ್ರೆಯಲ್ಲಿ ಭಾರೀ ಬೇಡಿಕೆ ಬಂದಿದೆ.  ಚಲನಚಿತ್ರಗಳ  ಹೆಸರಿನ ಬಳೆಗಳಾದ ನಿನ್ನಿಂದಲೇ, ನಿನಗಾಗಿ, ಅರಗಿಣಿ, ಕಾವೇರಿ, ಕ್ರಷ್‌ತ್ರೀ ಹೆಸರಿನ ಬಳೆಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ೩೦ ವರ್ಷಗಳಿಂದಲೂ ಬಳೆಯ ವ್ಯಾಪಾರಿಯಾಗಿ ಕೊಪ್ಪಳದ ಜಾತ್ರೆಗೆ ಬರುತ್ತಿರುವ  ಬಳ್ಳಾರಿಯ ಜಿ.ರಮೇಶ ಹೇಳುವಂತೆ ಈ ಹೆಸರಿನ ಬಳೆಗಳಿಗೆ  ಮಹಿಳೆಯರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆಂದು ಹೇಳುತ್ತಾರೆ. ಕೊಪ್ಪಳ, ಕಂಪ್ಲಿ,ಕಾರಟಗಿ, ಹುಬ್ಬಳ್ಳಿ, ಬಹದ್ದೂರಬಂಡಿ, ಭಾಗ್ಯನಗರ ಹಾಗೂ ಮೊದಲಾದ ನಗರಗಳ ವ್ಯಾಪಾರಿಗಳು ಈ ತರಹ ಆಧುನಿಕ ಬಳೆಗಳನ್ನು ಮಾರಾಟ ಮಾಡುತ್ತಿರುವದು  ಜಾತ್ರೆಯಲ್ಲಿ ಕಂಡು ಬರುತ್ತದೆ. 

Leave a Reply