ಟೊಮೇಟೊ ಬೆಲೆ ಕುಸಿತ ಸಂಕಷ್ಟದಲ್ಲಿ.. ರೈತರು.

ತಾಲೂಕಿನ ಕೃಷಿಕರಿಗೆ ಟೊಮೇಟೊ ಬೆಲೆ
ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. 15 ಕೆಜಿಗಳ ಗುಣಮಟ್ಟದ ಟೊಮೇಟೊ 20
ರೂಪಾಯಿಗೆ ಹರಾಜಾಗುತ್ತಿದೆ. ಎಂದಿನಂತೆ ಗುರುವಾರ ತಾಲೂಕಿನ ಹತ್ತಾರು ಗ್ರಾಮಗಳ ರೈತರು
ತಾವು ಬೆಳೆದಿದ್ದ ಟೊಮೇಟೊಗಳನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ ಬೆಲೆಕುಸಿತದಿಂದ
ಇಲ್ಲಿನ ರೈತಾಪಿ ಜನರಿಗೆ ತೀರ್ವ ನಿರಾಶೆಯಾಯಿತು. ಈಗಾಗಲೇ ತಾಲೂಕಿನಲ್ಲಿ ಸಕಾಲಕ್ಕೆ
ಮಳೆಯಾಗದೆ ಬರದಿಂದ ಹೈರಾಣರಾಗಿರುವ ರೈತರಿಗೆ ಮತ್ತಷ್ಟು ನಷ್ಟವಾಗಿದೆ.
Please follow and like us:
error