fbpx

ಎಂಪಿಲ್ಯಾಡ್ ಯೋಜನೆಯಡಿ ತ್ರಿಚಕ್ರ ವಾಹನಗಳ ವಿತರಣೆ.

ಎಂಪಿಲ್ಯಾಡ್ಸ್ ವಿಕಲಚೇತನರಿಗೆ ಚೈತನ್ಯದಾಯಕ ಯೋಜನೆ ಶಿವರಾಮಗೌಡ ಎಂಪಿಲ್ಯಾಡ್ ಯೋಜನೆಯಡಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು ಈ ಯೋಜನೆಯು ವಿಕಲಚೇತನರಿಗೆ ಚೈತನ್ಯದಾಯಕವಾಗಿದೆ ಎಂದು ಮಾಜಿ ಸಂಸದರಾದ ಶಿವರಾಮಗೌಡರು ಕರೆ ನೀಡಿದರು.ಅವರು ಇಂದು ಬೆಳಿಗ್ಗೆ ೧೧.೪೫ ಕ್ಕೆ ಕೊಪ್ಪಳದ ಜಿಲ್ಲಾಡಳಿತ ಭವನದ ಆವರಣಲ್ಲಿ ತಮ್ಮ ಅವಧಿಯ ೧೫ನೇ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ೨೦೧೩-೧೪ ನೇ ಸಾಲಿನ ಅನುದಾನದಲ್ಲಿ ಅರ್ಹ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದರು.ವಿಕಲಚೇತನರು ತಾವು ಕೀಳರಿಮೆ ತೊರೆದು ಸಾಧನೆಯತ್ತ ದಾಪುಗಾಲುಹಾಕಬೇಕು ಎಂದು ಕರೆ ನೀಡಿದ ಅವರು, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ತಾವು ಸದಾ ಶ್ರಮಿಸುತ್ತಿದ್ದು, ಈಗಾಗಲೇ ತಮ್ಮ ಅನುದಾನದಡಿ ಅರ್ಹ ವಿಕಲಚೇತನರಿಗೆ ತ್ರಿಚಕ್ರವಾಹನ ಸೇರಿದಂತೆ ಅಗತ್ಯ ಉಪಕರಣಗಳನ್ನು ವಿತರಿಸಲಾಗಿದ್ದು, ಅದರಂತೆ ೨೦೧೩-೧೪ನೇ ಸಾಲಿನಲ್ಲಿ ಭಾಗ್ಯನಗರದ ಕು. ಶಕುಂತಲಾ ತಂ. ನೀಲಕಂಠಪ್ಪ ಮಡಿವಾಳರ, ಓಜನಹಳ್ಳಿ ಗ್ರಾಮದ ವೀರಭದ್ರಪ್ಪ ತಂ. ಈರಪ್ಪ ಇಪ್ಪತ್ತೇರಿ, ಕಿನ್ನಾಳ ಗ್ರಾಮದ ಹನುಮಂತರಾವ್ ತಂ. ವಸಂತರಾವ್ ಕುಲಕರ್ಣಿ, ರ್‍ಯಾವಣಕಿ ಗ್ರಾಮದ ಬಸವರಾಜ ತಂ. ನಿಂಗಪ್ಪ ಹುಲಿ ಹಾಗೂ ಬೊಮ್ಮನಾಳ ಗ್ರಾಮದ ಈರಪ್ಪ ತಂ. ಶಿವಪ್ಪ ಮಿಟ್ಟಲಕೋಡ ಇವರಿಗೆ ತಲಾ ೭೯ ಸಾವಿರ ಅನುದಾನದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದರು.  ವಿಕಲಚೇತನರ ಶ್ರೇಯೋಭಿವೃದ್ಧಿಯ ದೃಷ್ಠಿಯಿಂದ ಈ ಹಿಂದೆ ಅವರಿಗಾಗಿ ಶಾಲಾ ಕೊಠಡಿಗಳನ್ನು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸಹ ತಮ್ಮ ಅನುದಾನದಲ್ಲಿ ಕೈಗೊಳ್ಳಲಾಗಿದ್ದು, ರಿಯಾಯತಿ ದರದ ಬಸ್‌ಪಾಸ್ ಬಗ್ಗೆ ಇದ್ದ ಗೊಂದಲವನ್ನು ಈ ಹಿಂದೆ ಸಾರಿಗೆ ಸಚಿವರೊಂದಿಗೆ ಮಾತನಾಡಿ ಇತ್ಯರ್ಥಪಡಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಫಲಾನುಭವಿಗಳು ಶಿವರಾಮಗೌಡರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಜಿಲ್ಲಾ ಪಂಚಾಯತ ಸದಸ್ಯರಾದ ವನೀತಾ ಗಡಾದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ, ಫಲಾನುಭವಿಗಳು, ಮುಖಂಡರಾದ ಕೊಟ್ರಗೌಡ್ರು ಹುರಕಡ್ಲಿ, ಮಂಜುನಾಥ ಅಂಗಡಿ, ವಿಜಯ ಸಂಗನಾಳ, ದೇವಪ್ಪ, ನೂರಸಾಬ ಇತರರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!