ವಿಡಿಯೋ ಚಿತ್ರೀಕರಣ ಮತ್ತು ಸಂಕಲನ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ
ಸೆ. ೦೩ (ಕ ವಾ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅಂಗೀಕೃತ
ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ/ಕಮ್ಯುನಿಕೇಷನ್/ಮಾಸ್ ಕಮ್ಯುನಿಕೇಷನ್ ಅಥವಾ
ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡಿಪ್ಲೋಮಾ/ಪದವಿ/ಸ್ನಾತಕೋತ್ತರ ಪದವಿ ಪಡೆದ ಪ.ಜಾತಿ
ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ ವಿಡಿಯೋ ಚಿತ್ರೀಕರಣ ಮತ್ತು ಸಂಕಲನದ ತರಬೇತಿಯನ್ನು
ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಲ್ಲಿ
ಏರ್ಪಡಿಸಿದ್ದು, ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಈ ತರಬೇತಿಗೆ ೪೦
ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳು ಅರ್ಜಿ
ಸಲ್ಲಿಸಬಹುದು.  ತರಬೇತಿ ಅವಧಿಯು ೩೦ ದಿನಗಳ ಅವಧಿಯದಾಗಿದ್ದು, ತರಬೇತಿ ಅವಧಿಯಲ್ಲಿ ಊಟ
ಮತ್ತು ವಸತಿ ಸೌಕರ್ಯವನ್ನು ಒದಗಿಸಲಾಗುವುದು.  ತರಬೇತಿ ಅಂತ್ಯದಲ್ಲಿ ಅಭ್ಯರ್ಥಿಗಳಿಗೆ
ಸ್ವಯಂ ವೃತ್ತಿ ಕೈಗೊಳ್ಳಲು ಉಚಿತವಾಗಿ ಮೂವಿ ಕ್ಯಾಮೆರಾ ನೀಡಲಾಗುವುದು.  ಅರ್ಹ
ಅಭ್ಯರ್ಥಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವೆಬ್‌ಸೈಟ್
ಞಚಿಡಿಟಿಚಿಣಚಿಞಚಿvಚಿಡಿಣhe.oಡಿg ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. 
ಅಥವಾ ಅಭ್ಯರ್ಥಿಯ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ),
ಶೇಕಡಾವಾರು ಅಂಕ ಇತ್ಯಾದಿ ಮಾಹಿತಿಯುಳ್ಳ ಸ್ವ-ವಿವರ, ಯಾವುದಾದರೂ ತರಬೇತಿ ಪಡೆದ ವಿವರ
ಹಾಗೂ ವರ್ಷದ ಮಾಹಿತಿಯನ್ನು ಭರ್ತಿ ಮಾಡಿ, ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿ
ಸಲ್ಲಿಸಬಹುದು.  ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ವಿಳಾಸ ಹಾಗೂ ವಯಸ್ಸು
ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಸಲ್ಲಿಸಬೇಕು. ಲಕೋಟೆಯ ಮೇಲೆ ವಿಡಿಯೋ
ಚಿತ್ರೀಕರಣ ಮತ್ತು ಸಂಕಲನದ ತರಬೇತಿಗಾಗಿ ಅರ್ಜಿ ಎಂದು ನಮೂದಿಸಿ ನಿರ್ದೇಶಕರು, ವಾರ್ತಾ
ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. ೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ,
ಬೆಂಗಳೂರು-೦೧ ಇವರಿಗೆ ಅಕ್ಟೋಬರ್ ೦೩ ರ ಸಂಜೆ ೦೪ ಗಂಟೆಯ ಒಳಗಾಗಿ ಸಲ್ಲಿಸಬೇಕು. 
ಹೆಚ್ಚಿನ ಮಾಹಿತಿಗಾಗಿ ಚಲನಚಿತ್ರ ವಿಭಾಗದ ಉಪನಿರ್ದೇಶಕರು ಇವರನ್ನು ದೂರವಾಣಿ ಸಂ:
೦೮೦-೨೨೦೨೮೦೫೨/ ೫೬ ಕ್ಕೆ ಸಂಪರ್ಕಿಸಬಹುದು.
Please follow and like us:
error