You are here
Home > Koppal News > ಆನೆಗುಂದಿ ಉತ್ಸವ : ಕರವೇಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಆನೆಗುಂದಿ ಉತ್ಸವ : ಕರವೇಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ: ಗಂಗಾವತಿ ತಾಲುಕಿನ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ವಿಜಯನಗರದ ತೊಟ್ಟಿಲು ಆನೆಗುಂದಿ ಗತವೈಭವ ನಮ್ಮ ಯುವಪೀಳಿಗೆ ನೆನೆಪಿಸಲು ಹಾಗು ಪ್ರವಾಸೋಧ್ಯಮ ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿರುವ ಆನೆಗುಂದಿ ಉತ್ಸವ ವನ್ನು ಪ್ರತೀವರ್ಷ ನಿರಂತರವಾಗಿ ಆಚರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಕೊಪ್ಪಳ ಜಿಲ್ಲೆ ಹಲವಾರು ವಿಶೇಷತೆಗಳಿಂದ ದೇಶ-ವಿದೇಶಗಳ ಗಮನಸೆಳೆದಿದೆ ಇಲ್ಲಿನ ಕೃಷಿಕ್ಷೇತ್ರ, ಕಿನ್ನಾಳ ಕರಕುಶಲ, ಇಟಗಿ ವಾಸ್ತುಶಿಲ್ಪಗಳು ವಿಶೇಷವೆನಿಸಿವೆ. ಅದರಂತೆ ಭತ್ತದನಾಡು ಗಂಗಾವತಿಯು ತಾಲೂಕು ಇಡೀ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದ ಸ್ಥಳವಾಗಿದೆ. 
ಇಲ್ಲಿನ ಸಪ್ತ ಪರ್ವತಗಳು ವಿಶ್ವದ ಅತೀ ಮಹತ್ವದ ಪಂಚ ಸರೋವರಗಳಲ್ಲೊಂದಾದ ಪಂಪಾಸರೋವರ, ರಾಮಾಯಣ ಮಹಾಕಾವ್ಯ ಜರುಗಿದ ನಿದರ್ಶನಗಳಾದ ಶಬರಿಗುಹೆ, ಹೃಷಿಮುಖ ಪರ್ವತ, ವಾಲಿಕೋಟೆ, ಸುಗ್ರೀವ ಗುಹೆ, ಮದ್ವಾಚಾರ್ಯರ ಪರಂಪರೆಯ ಒಂಬತ್ತು ಯತಿಗಳ ಬೃಂದಾವನವಿರುವ ನವಬೃಂದಾವನ ಗಡ್ಡೆ, ಅಲ್ಲದೆ ರಾಮಾಯಣದ ಪ್ರಮುಖ ಪಾತ್ರದ ಶಕ್ತಿ ಪುರುಷ ಹನುಮಂತನ ಜನ್ಮ ಸ್ಥಳ ಅಂಜನಾದ್ರಿ ಪರ್ವತವು ಇರುವುದು ಇಲ್ಲಿಯೇ. 
ಪ್ರತಿವರ್ಷವೂ ಬಿಡದೇ ಆನೆಗುಂದಿ ಉತ್ಸವವನ್ನು ಆಚರಿಸುವುದರಿಂದ ಇಲ್ಲಿನ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿದಂತಾಗುತ್ತದಲ್ಲದೆ ಪ್ರವಾಸೋದ್ಯಮವೂ ಅಭಿವೃದ್ದಿಯಾಗಿ ಸರ್ಕಾರಕ್ಕೆ ಆದಾಯವೂ ಹೆಚ್ಚುತ್ತದೆ. ಆದರೆ ಈ ಭಾಗದ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ನಿರ್ಲಕ್ಷ್ಯಕ್ಕೊಳಗಾದ ಈ ಆನೆಗುಂದಿಯನ್ನು ಅಭಿವೃದ್ಧಿಗೊಳಿಸುವುದರೊಂದಿಗೆ ಆಚರಿಸಬೇಕೆಂದು ಈ ಭಾಗದ ಸಮಸ್ತ ಕನ್ನಡಿಗರ ಪರವಾಗಿ ವಿನಂತಿಸಿಕೊಳ್ಳುತ್ತಾ. 
ಈ ಕುರಿತು ಈಗಾಗಲೇ ತಮ್ಮ ಕಾರ್ಯಾಲಯಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಜಿಲ್ಲಾಡಳಿತವು ಆನೇಗುಂದಿ ಉತ್ಸವನ್ನು ನಿರ್ಲಕ್ಷಿಸುವುದರೊಂದಿಗೆ ಈ ಭಾಗದ ಅಪಾರ ವೈಶಿಷ್ಟತೆಗಳ ತಾಣ ಆನೆಗುಂದಿಯನ್ನು ಕಡೆಗಣಿಸಿದೆ ಇದೇ ರೀತಿ ನಿರ್ಲಕ್ಷ್ಯ ಮನೋಭಾವವನ್ನು ಪ್ರದರ್ಶೀ ಉತ್ಸವವನ್ನು ಆಚರಿಸದೇ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ)ವು ಕೊಪ್ಪಳ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡುವುದರೊಂದಿಗೆ ಉಗ್ರವಾಗಿ ಪ್ರತಿಭಟಿಸಿ ಹೋರಾಟ ಮಾಡುತ್ತದೆ.  ಇತಿಹಾಸದ ಬಗ್ಗೆ ಅಪಾರ ಕಾಳಜಿ ಇರುವ ತಾವುಗಳು ಈ ಪ್ರತಿಭಟಣೆಗೆ ಅವಕಾಶ ನೀಡದೇ ಪ್ರತೀವರ್ಷವೂ ತಪ್ಪದೇ ಅದ್ದೂರಿಯಾಗಿ ಈ ಆನೆಗುಂದಿ ಉತ್ಸವ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿರಿ ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ. 
ಈ ಸಂಧರ್ಬದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷ ರಾಜೇಶ ಅಂಗಡಿ, ತಾಲೂಕ ಅಧ್ಯಕ್ಷ ನಾಗರಾಜ ಹ್ಯಾಟಿ, ಕೊಪ್ಪಳ ತಾ. ಯುವ ಘಟಕ  ಕೊಟೇಶ ಮ್ಯಾಗಳಮನಿ, ತಾಲೂಕ ಪ್ರಧಾನ ಕಾರ್ಯದರ್ಶಿ ನೀಲಕಂಠಪ್ಪ ಮೈಲಿ, ನಗರಾಧ್ಯಕ್ಷ ಆನಂದ ಜಾಲಿಹಾಳ, ಕಾರ್ಯಕರ್ತ ಶಿವಣ್ಣ ಹಾದಿಮನಿ ಉಪಸ್ಥಿತರಿದ್ದರು. 

Leave a Reply

Top